ಚಹಲ್-ಧನಶ್ರೀ ವಿಚ್ಛೇದನದ ಗಾಳಿಸುದ್ದಿಗೆ ಪುಷ್ಟಿ ನೀಡುವಂತೆ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಚಹಲ್‌ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಪೋಷಕರ ಹೆಮ್ಮೆಯ ಮಗನಾಗುವ ಬಯಕೆ ವ್ಯಕ್ತಪಡಿಸಿದ್ದು, ವಿಚ್ಛೇದನಕ್ಕೆ ಕೌಟುಂಬಿಕ ಕಾರಣ ಸುಳಿವು ನೀಡುತ್ತಿದೆ. ೨೦೨೩ರಲ್ಲೇ ಧನಶ್ರೀ ತಮ್ಮ ಹೆಸರಿನಿಂದ 'ಚಹಲ್' ತೆಗೆದು 'ನ್ಯೂ ಲೈಫ್ ಲೋಡಿಂಗ್' ಎಂದು ಪೋಸ್ಟ್ ಮಾಡಿದ್ದರು.

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಸದ್ಯದಲ್ಲಿಯೇ ವಿಚ್ಛೇದನಾ ಪಡೆದುಕೊಳ್ಳಲಿದ್ದಾರೆ ಎನ್ನುವ ಗಾಳಿ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಅದಕ್ಕೆ ಬಲ ತುಂಬುವಂತೆ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಇದೆಲ್ಲದರ ನಡುವೆ ಇದೀಗ ಯುಜುವೇಂದ್ರ ಚಹಲ್ ತಾವು ಹಂಚಿಕೊಂಡ ಇನ್‌ಸ್ಟಾಗ್ರಾಂ ಸ್ಟೋರಿ ಪೋಸ್ಟ್‌ ಯಾವ ಕಾರಣಕ್ಕೆ ಡಿವೋರ್ಸ್‌ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಕೊಂಚ ಸುಳಿವು ಬಿಟ್ಟುಕೊಟ್ಟಂತೆ ಇದೆ.

ಕೆಲದಿನಗಳ ಹಿಂದಷ್ಟೇ ಯುಜುವೇಂದ್ರ ಚಹಲ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಧನಶ್ರೀ ವರ್ಮಾ ಅವರ ಜತೆಗಿರುವ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಇನ್ನು ಇದೆಲ್ಲದರ ನಡುವೆ ಯುಜುವೇಂದ್ರ ಚಹಲ್ ಶನಿವಾರ ರಾತ್ರಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಗುಪ್ತ ಪೋಸ್ಟ್ ಹಂಚಿಕೊಂಡಿದ್ದು, ಯಾವ ಕಾರಣಕ್ಕೆ ಈ ಸೆಲಿಬ್ರಿಟಿ ಜೋಡಿ ವಿಚ್ಛೇದನವಾಗುತ್ತಿದ್ದಾರೆ ಎನ್ನುವ ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ. 

ರೋಹಿತ್ ಶರ್ಮಾ ತಲೆದಂಡವಾದ್ರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈತನೇ ಟೀಂ ಇಂಡಿಯಾ ಕ್ಯಾಪ್ಟನ್!

'ಕಠಿಣ ಪರಿಶ್ರಮವು ಜನರ ವ್ಯಕ್ತಿತ್ವವನ್ನು ತೋರಿಸುತ್ತದೆ. ನಿಮ್ಮ ಪ್ರಯಾಣ ನಿಮಗೆ ಗೊತ್ತಿರುತ್ತದೆ. ನಿಮ್ಮ ನೋವು ನಿಮಗೆ ಗೊತ್ತಿರುತ್ತದೆ. ಈ ಹಂತಕ್ಕೇರಲು ನೀವು ಏನೆಲ್ಲಾ ಮಾಡಿದ್ದೀರ ಎನ್ನುವುದು ನಿಮಗೆ ಹಾಗೂ ಜಗತ್ತಿಗೆ ಗೊತ್ತಿದೆ. ನೀವು ನಿಮ್ಮ ತಂದೆ-ತಾಯಿ ಹೆಮ್ಮೆಪಡುವಂತೆ ಮಾಡಲು ಸಾಕಷ್ಟು ಬೆವರು ಹರಿಸಿರುತ್ತೀರ. ಯಾವಾಗಲೂ ಹೆಮ್ಮೆಯ ಮಗನಾಗಿಲು ಬಯಸುತ್ತೇನೆ' ಎಂದು ಯುಜುವೇಂದ್ರ ಚಹಲ್ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಧನಶ್ರೀ ವರ್ಮಾ ಅವರೊಂದಿಗೆ ವಿಚ್ಛೇದನವಾಗಲು ಚಹಲ್ ಅವರ ಪೋಷಕರ ನಡುವಿನ ವೈಮನಸ್ಸು ಕಾರಣವಿರಬಹುದೇ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ.

Scroll to load tweet…

2023ರಲ್ಲಿ ಧನಶ್ರೀ ವರ್ಮಾ ತಮ್ಮ ಸರ್‌ನೇಮ್‌ನಲ್ಲಿ ಚಹಲ್ ಅವರನ್ನು ಕೈಬಿಟ್ಟಿದ್ದರು. ಇದರ ಬೆನ್ನಲ್ಲೇ ಚಹಲ್ ಕೂಡಾ ನ್ಯೂ ಲೈಫ್ ಲೋಡಿಂಗ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಆಗಲೇ ಚಹಲ್ ಹಾಗೂ ಚಹಲ್ ವಿಚ್ಛೇದನಾ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು.

ಸಿಡ್ನಿ ಟೆಸ್ಟ್ ಸೋಲುತ್ತಿದ್ದಂತೆಯೇ ರೋಹಿತ್ ಬಗ್ಗೆ ಉಲ್ಟಾ ಹೊಡೆದ ಗೌತಮ್ ಗಂಭೀರ್!

ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಲ್ 2020ರ ಡಿಸೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೇ ತಮ್ಮ ಲವ್‌ಸ್ಟೋರಿ ಬಗ್ಗೆ ಧನಶ್ರೀ ವರ್ಮಾ ಬಾಯ್ಬಿಟ್ಟಿದ್ದರು. ಕೊರೋನಾ ಕಾಲದ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಎಂದು ಹೇಳಿದ್ದರು.