ಸಿಡ್ನಿ ಟೆಸ್ಟ್ ಸೋಲುತ್ತಿದ್ದಂತೆಯೇ ರೋಹಿತ್ ಬಗ್ಗೆ ಉಲ್ಟಾ ಹೊಡೆದ ಗೌತಮ್ ಗಂಭೀರ್!

ಸಿಡ್ನಿ ಟೆಸ್ಟ್‌ನಲ್ಲಿ ಭಾರತದ ಸೋಲಿನ ಬೆನ್ನಲ್ಲೇ, ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟ ಕುರಿತು ಗೌತಮ್ ಗಂಭೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ರೋಹಿತ್ ಶರ್ಮಾ ಅವರೇ ಸ್ವಯಂ ಪ್ರೇರಿತರಾಗಿ ಹಿಂದೆ ಸರಿದಿದ್ದಾರೆ ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ. ರೋಹಿತ್ ತಮ್ಮ ನಿವೃತ್ತಿ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದ್ದಾರೆ.

Rohit Sharma Showed Accountability at the top Says Gautam Gambhir kvn

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅಚ್ಚರಿಯ ಮಾತುಗಳನ್ನಾಡಿ ಗಮನ ಸೆಳೆದಿದ್ದಾರೆ.

ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ವಯಂ ಪ್ರೇರಿತರಾಗಿ ಕೊನೆಯ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದರು. ಆದರೆ ರೋಹಿತ್ ಶರ್ಮಾ ಅವರನ್ನು ಹೆಡ್ ಕೋಚ್ ಗೌತಮ್ ಗಂಭೀರ್ ಅವರೇ ಸಿಡ್ನಿ ಟೆಸ್ಟ್ ಪಂದ್ಯದಿಂದ ಡ್ರಾಪ್ ಮಾಡಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟರೂ ಸಿಡ್ನಿ ಟೆಸ್ಟ್ ಪಂದ್ಯ ಗೆಲ್ಲಲು ಟೀಂ ಇಂಡಿಯಾಗೆ ಸಾಧ್ಯವಾಗಲಿಲ್ಲ. ಇದರ ಬೆನ್ನಲ್ಲೇ ಸಿಡ್ನಿ ಟೆಸ್ಟ್ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಬಗ್ಗೆ ಗೌತಮ್ ಗಂಭೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಿಲ್ಲದ ಕೊಹ್ಲಿಯ ಪರದಾಟ! ವಿರಾಟ್ ಫೇಲ್ಯೂರ್ ಸೀಕ್ರೇಟ್ ಬಿಚ್ಚಿಟ್ಟ ಆಸೀಸ್ ವೇಗಿ

'ಯಾವಾಗಲೂ ಡ್ರೆಸ್ಸಿಂಗ್ ರೂಮ್‌ ಖುಷಿಯಾಗಿರುವಂತೆ ಇಡಬೇಕು. ನಾವು ಯಾವಾಗಲೂ ಪ್ರಾಮಾಣಿಕವಾಗಿದ್ದೇನೆ ಹಾಗೂ ಎಲ್ಲರನ್ನು ಸಮಾನವಾಗಿಯೇ ನೋಡುತ್ತೇನೆ. ರೋಹಿತ್ ಶರ್ಮಾ ಕುರಿತಾಗಿ ಹಲವು ವರದಿಗಳು ಪ್ರಕಟವಾದವು. ಕ್ಯಾಪ್ಟನ್ ಆಗಲಿ ಅಥವಾ ನಾಯಕನಾಗಲಿ ತಂಡದ ಹಿತಾದೃಷ್ಟಿಯಿಂದ ಕೆಲವೊಂದು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದು ತಪ್ಪು ಅಂತ ನನಗನಿಸೋದಿಲ್ಲ. ಆಟಗಾರರು ವೈಯುಕ್ತಿಕ ಹಿತಾಸಕ್ತಿಗಿಂತ ತಂಡದ ಹಿತಾಸಕ್ತಿ ಮುಖ್ಯ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆ ವಿಚಾರದಲ್ಲಿ ರೋಹಿತ್ ಶರ್ಮಾ ಮಾದರಿಯಾಗಿದ್ದಾರೆ ಎಂದು ರೋಹಿತ್ ಪರ ಗಂಭೀರ್ ಬ್ಯಾಟ್ ಬೀಸಿದ್ದಾರೆ.  

ನನ್ನ ನಿವೃತ್ತಿಯ ಬಗ್ಗೆ ಬೇರಾರೋ ನಿರ್ಧರಿಸಲು ಆಗಲ್ಲ: ರೋಹಿತ್!

ಸಿಡ್ನಿ: ಭಾರತ ತಂಡದ ಕಾಯಂ ನಾಯಕ ರೋಹಿತ್ ಶರ್ಮಾ ಶನಿವಾರ ತಮ್ಮ ನಿವೃತ್ತಿ ಬಗ್ಗೆ ಎದ್ದಿರುವ ವದಂತಿಗಳಿಗೆ ತೆರೆ ಎಳೆದರು. ಸದ್ಯಕ್ಕೆ ನಾನೆಲ್ಲೂ ಹೋಗುತ್ತಿಲ್ಲ, ನಾನು ಯಾವಾಗ ನಿವೃತ್ತಿ ಎನ್ನುವುದನ್ನು ಮತ್ತಿನ್ಯಾರೋ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. 

ಸರಣಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರೋಹಿತ್‌, ಮಾಧ್ಯಮಗಳಲ್ಲಿ ತಮ್ಮ ನಿವೃತ್ತಿ ಬಗ್ಗೆ ಆಗುತ್ತಿರುವ ಚರ್ಚೆ ಹಾಗೂ ಆ ಸಂಬಂಧ ಪ್ರಕಟಗೊಂಡಿರುವ ವರದಿ ಬಗ್ಗೆ ಸಿಟ್ಟಾದರು. 'ನಾನು ನಿವೃತ್ತಿಯಾಗುತ್ತಿಲ್ಲ. ಸದ್ಯಕ್ಕೆ ನಾನು ಫಾರ್ಮ್‌ನಲ್ಲಿ ಇಲ್ಲ. ನನ್ನ ಬ್ಯಾಟ್‌ನಿಂದ ರನ್ ಬರುತ್ತಿಲ್ಲ. ಈ ಕಾರಣಕ್ಕೆ ನಾನು ಸಿಡ್ನಿ ಟೆಸ್ಟ್‌ನಲ್ಲಿ ಆಡದಿರಲು ನಿರ್ಧರಿಸಿದೆ. ಯಾರೋ ಮೈಕ್ ಹಿಡಿದು ಮಾತನಾಡುವವರು, ಲ್ಯಾಪ್ ಟಾಪ್, ಪೆನ್ನು, ಕಾಗದ ಹಿಡಿದು ಕೂತವರು ನನ್ನ ಕ್ರಿಕೆಟ್ ಬದುಕಿನ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ' ಎಂದು ರೋಹಿತ್ ಸಿಟ್ಟಿನಲ್ಲಿ ಮಾತನಾಡಿದರು.

ರೋಹಿತ್ ಶರ್ಮಾ ತಲೆದಂಡವಾದ್ರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈತನೇ ಟೀಂ ಇಂಡಿಯಾ ಕ್ಯಾಪ್ಟನ್!

'ಸಿಡ್ನಿಗೆ ಬಂದಿಳಿದ ನಂತರ ನಾನು ಈ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿದೆ. ಮೆಲ್ಬರ್ನ್‌ನಲ್ಲಿ ಯಾವುದೇ ಚರ್ಚೆ, ನಿರ್ಧಾರ ಆಗಿರಲಿಲ್ಲ. ತಂಡದ ಹಿತದೃಷ್ಟಿಯಿಂದ ಕೋಚ್ ಜತೆ ಮಾತನಾಡಿ ನಾನೇ ಸ್ವತಃ ತೆಗೆದು ಕೊಂಡ ನಿರ್ಧಾರವಿದು' ಎಂದು ಸ್ಪಷ್ಟನೆ ನೀಡಿದರು. 

ನನಗೂ ಬುದ್ಧಿ ಇದೆ: ನಿವೃತ್ತಿ ವಿಚಾರದ ಬಗ್ಗೆ ಇನ್ನಷ್ಟು ಮಾತನಾಡಿದ ರೋಹಿತ್, 'ನನಗೂ ಪ್ರಬುದ್ಧತೆ ಇದೆ. ಹಲವಾರು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಅಲ್ಲದೇ 2 ಮಕ್ಕಳ ತಂದೆ. ನನ್ನ ತಲೆಯಲ್ಲೂ ಸ್ವಲ್ಪ ಬುದ್ದಿ ಇದೆ. ಯಾವಾಗ ಏನು ಮಾಡಬೇಕೆಂದು ನನಗೆ ಗೊತ್ತಿದೆ' ಎಂದ ರೋಹಿತ್, ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿ ಬಗ್ಗೆ ಕಿಡಿ ಕಾಡಿದರು.

ರೋಹಿತ್‌ ಸದ್ಯದಲ್ಲೇ ಟೆಸ್ಟ್‌ನಿಂದ ನಿವೃತ್ತಿ ಯಾಗಲಿದ್ದಾರೆ. ಡ್ರೆಸ್ಸಿಂಗ್ ಕೋಣೆಯಲ್ಲಿ ರೋಹಿತ್ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನುವ ವರದಿಗಳು ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಪ್ರಕಟ ಗೊಂಡಿತ್ತು. ಇದಕ್ಕೆ ಸಂಬಂಧಿಸಿ ರೋಹಿತ್‌ ಪ್ರತಿಕ್ರಿಯೆ ನೀಡಿದ್ದಾರೆ.

Latest Videos
Follow Us:
Download App:
  • android
  • ios