ಮುಂಬೈ(ಜ.02): ಕ್ರಿಕೆಟ್ ವಿದಾಯ ಹೇಳಿರುವ ಯುವರಾಜ್ ಸಿಂಗ್ ವಿದೇಶಿ ಟಿ10 ಲೀಗ್ ಟೂರ್ನಿಗಳಲ್ಲಿ ಪಾಲ್ಗೊಳ್ಳೋ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ. ವಿಶ್ರಾಂತಿಯಲ್ಲೂ ಕ್ರಿಕೆಟ್ ಫಾಲೋ ಮಾಡವ ಯುವರಾಜ್ ಸಿಂಗ್ ಬಾಲಿವುಡ್ ನಟಿ ಸೈಯಾಮಿ ಖೇರ್ ಕ್ರಿಕೆಟ್ ಆಟಕ್ಕೆ ಫಿದಾ ಆಗಿದ್ದಾರೆ. ಹೊಸ ವರ್ಷಕ್ಕೆ ಸಿಯಾಮಿ ವಿಡಿಯೋ ಯುವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಗೆಲುವಿನ ಖುಷಿಯಲ್ಲಿರುವ ಕೊಹ್ಲಿ ಸೈನ್ಯದ ವಿರುದ್ದ ಯುವರಾಜ್ ಅಸಮಧಾನ!

2020ರ ಹೊಸ ವರ್ಷಕ್ಕೆ ಸೈಯಾಮಿ ಖೇರ್ ವಿಡಿಯೋವೊಂದನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್‌ನ ಫ್ರಂಟ್ ಫೂಟ್ ಶಾಟ್ ಹೊಡೆತ ವಿಡಿಯೋ ಶೇರ್ ಮಾಡಿರುವಸೈಯಾಮಿಗೆ ಯುವಿ ಪ್ರತಿಕ್ರಿಯೆ ನೀಡಿದ್ದಾರೆ. ಶಾಟ್ ಬಡಿ ಎಂದು ಹೇಳುವ ಮೂಲಕಸೈಯಾಮಿ ಕ್ರಿಕೆಟ್ ಕೌಶಲ್ಯವನ್ನು ಯುವಿ ಮೆಚ್ಚಿಕೊಂಡಿದ್ದಾರೆ.

 

ಇದನ್ನೂ ಓದಿ: 3 ವರ್ಷಗಳ ಬಳಿಕ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಯುವರಾಜ್!

2019ರಲ್ಲಿ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಬಳಿಕ ನವೆಂಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲಾದ ಟಿ10 ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಮರಾಠ ಅರೇಬಿಯನ್ಸ್ ತಂಡದ ನಾಯಕನಾಗಿದ್ದ ಯುವಿ, ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.