Asianet Suvarna News Asianet Suvarna News

ವಿರಾಟ್ ಕೊಹ್ಲಿಯನ್ನು ದೇವರ ಮಗ ಎಂದು ಕರೆದ ಪತ್ನಿ ಅನುಷ್ಕಾ ಶರ್ಮಾ!

‘ನಿಮ್ಮ(ವಿರಾಟ್‌) ಪ್ರೀತಿಯಿಂದ ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀವು ಎತ್ತರಕ್ಕೆ ಬೆಳೆಯುತ್ತಿರುವುದನ್ನು ಹಾಗೂ ಅಸಾಧಾರಣ ಸಾಧನೆಗಳನ್ನು ಮಾಡುತ್ತಿರುವುದನ್ನು ನೋಡಲು ಅವಕಾಶ ನೀಡಿದ್ದಕ್ಕೂ ದೇವರಿಗೆ ಆಭಾರಿ. ನೀವು ನಿಜಕ್ಕೂ ದೇವರ ಮಗ’ ಎಂದು ಅನುಷ್ಕಾ ಕರೆದಿದ್ದಾರೆ

You are truly God child Anushka Sharma pens note for Virat Kohli on his 50th ODI century kvn
Author
First Published Nov 17, 2023, 12:07 PM IST

ಮುಂಬೈ(ನ.17): ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳ ವಿಶ್ವದಾಖಲೆ ನಿರ್ಮಿಸಿದ ತಮ್ಮ ಪತಿ ವಿರಾಟ್‌ ಕೊಹ್ಲಿಯನ್ನು, ನಟಿ ಅನುಷ್ಕಾ ಶರ್ಮಾ ದೇವರ ಮಗ ಎಂದು ಕರೆದಿದ್ದಾರೆ. 50 ಶತಕಗಳ ಮಹತ್ತರ ಸಾಧನೆಯ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಖುಷಿ ವ್ಯಕ್ತಪಡಿಸಿರುವ ಅನುಷ್ಕಾ, ‘ನಿಮ್ಮ(ವಿರಾಟ್‌) ಪ್ರೀತಿಯಿಂದ ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀವು ಎತ್ತರಕ್ಕೆ ಬೆಳೆಯುತ್ತಿರುವುದನ್ನು ಹಾಗೂ ಅಸಾಧಾರಣ ಸಾಧನೆಗಳನ್ನು ಮಾಡುತ್ತಿರುವುದನ್ನು ನೋಡಲು ಅವಕಾಶ ನೀಡಿದ್ದಕ್ಕೂ ದೇವರಿಗೆ ಆಭಾರಿ. ನೀವು ನಿಜಕ್ಕೂ ದೇವರ ಮಗ’ ಎಂದಿದ್ದಾರೆ.

ಸಚಿನ್‌ರ 100 ಶತಕ ದಾಖಲೆಯನ್ನೂ ಕೊಹ್ಲಿ ಮುರೀತಾರೆ: ರವಿಶಾಸ್ತ್ರಿ!

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕಗಳ ದಾಖಲೆಯನ್ನು ವಿರಾಟ್‌ ಕೊಹ್ಲಿ ಬರೆಯಲಿದ್ದಾರೆ ಎಂದು ಭಾರತದ ಮಾಜಿ ಕೋಚ್‌ ರವಿಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ. ಸಚಿನ್‌ ತೆಂಡುಲ್ಕರ್‌ರ 49 ಏಕದಿನ ಶತಕಗಳ ದಾಖಲೆ ಮುರಿದಿರುವ ಕೊಹ್ಲಿ, 100 ಶತಕಗಳ ದಾಖಲೆಯನ್ನೂ ಮುರಿಯಲಿದ್ದಾರೆ ಎಂದು ಶಾಸ್ತ್ರಿ ಹೇಳಿದ್ದಾರೆ. 

World Cup 2023 Final: ವಿಶ್ವಕಪ್‌ ಸಮಾರೋಪ ಕಾರ್ಯಕ್ರಮದಲ್ಲಿ ಐಎಎಫ್‌ನಿಂದ ಏರ್‌ಶೋ!

ಐಸಿಸಿ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶಾಸ್ತ್ರಿ, ‘ಸಚಿನ್‌ 100 ಶತಕ ಸಿಡಿಸಿದಾಗ ಅದರ ಸನಿಹಕ್ಕೂ ಯಾರೂ ಬರಲ್ಲ ಎಂದೇ ಭಾವಿಸಿದ್ದೆವು. ಆದರೆ ಕೊಹ್ಲಿ ಈಗಾಗಲೇ 80 ಶತಕ ಗಳಿಸಿದ್ದಾರೆ. ಮುಂದಿನ 10 ಇನ್ನಿಂಗ್ಸ್‌ಗಳಲ್ಲಿ ಅವರಿಂದ 5 ಶತಕ ದಾಖಲಾಗಬಹುದು. ಇನ್ನೂ 3-4 ವರ್ಷ ಕೊಹ್ಲಿ ಆಡಿದರೆ ಸಚಿನ್‌ ದಾಖಲೆ ಮುರಿಯಲು ಸಾಧ್ಯವಿದೆ’ ಎಂದಿದ್ದಾರೆ.

ಫೈನಲ್‌ ಪಂದ್ಯ ನೋಡ್ಬೇಡಿ: ಅಮಿತಾಬ್‌ಗೆ ಫ್ಯಾನ್ಸ್‌ ಮನವಿ

ಅಹಮದಾಬಾದ್: ಭಾನುವಾರ ನಡೆಯಲಿರುವ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ವೀಕ್ಷಿಸದಂತೆ ಹಿರಿಯ ನಟ ಅಮಿತಾಬ್‌ ಬಚ್ಚನ್‌ಗೆ ಕ್ರೀಡಾಭಿಮಾನಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಸ್ವತಃ ಅಮಿತಾಬ್‌ ಮಾಡಿದ ಟ್ವೀಟ್‌. ನ್ಯೂಜಿಲೆಂಡ್‌ ವಿರುದ್ಧ ಭಾರತ ಸೆಮಿಫೈನಲ್‌ನಲ್ಲಿ ಗೆದ್ದ ಬಳಿಕ, ‘ನಾನು ಪಂದ್ಯ ನೋಡದಿದ್ದಾಗ ನಾವು(ಭಾರತ) ಗೆಲ್ಲುತ್ತೇವೆ’ ಎಂದು ಅಮಿತಾಬ್‌ ಟ್ವೀಟ್‌ ಮಾಡಿದ್ದರು. ಇದನ್ನೇ ಮುಂದಿಟ್ಟು, ನೀವು ಫೈನಲ್‌ ಪಂದ್ಯವನ್ನೂ ನೋಡಬೇಡಿ ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ಅಮಿತಾಬ್‌ರ ಕಾಲೆಳೆದಿದ್ದಾರೆ.

"ವಿರಾಟ್ ಕೊಹ್ಲಿ ಅವರಂತವರು ಪ್ರಶಂಸೆಗೆ ಅರ್ಹರು": ಪಾಕ್ ದಿಗ್ಗಜ ಕ್ರಿಕೆಟಿಗನ ಮನದಾಳದ ಮಾತು

ಫೈನಲ್‌ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಮೋದಿ?

ಅಹಮದಾಬಾದ್‌: ಭಾನುವಾರ ಇಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯ ವೀಕ್ಷಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಪಂದ್ಯಕ್ಕೂ ಮುನ್ನ ಕ್ರೀಡಾಂಗಣಕ್ಕೆ ಆಗಮಿಸಲಿರುವ ಮೋದಿ, ಕೆಲ ಕಾಲ ಪಂದ್ಯ ವೀಕ್ಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಮಾರ್ಚ್‌ನಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಮೋದಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
 

Latest Videos
Follow Us:
Download App:
  • android
  • ios