ಸಿಡ್ನಿ(ಡಿ.08): ಬಹುನಿರೀಕ್ಷಿತ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಗೆ ದಿನಗಣನೆ ಆರಂಭವಾಗಿದ್ದು, ಭಾರತ 'ಎ' ತಂಡ ಈಗಾಗಲೇ ಭರ್ಜರಿ ಸಿದ್ದತೆ ಆರಂಭಿಸಿದೆ. ಡಿಸೆಂಬರ್‌ 17ರಂದು ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಲಿದ್ದು, ಡಿಸೆಂಬರ್ 06ರಿಂದ ಆರಂಭವಾಗಿದ್ದ ಭಾರತ 'ಎ' ಹಾಗೂ ಆಸ್ಟ್ರೇಲಿಯಾ 'ಎ' ಮೊದಲ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ 'ಎ' ತಂಡದ ನಾಯಕ ಅಜಿಂಕ್ಯ ರಹಾನೆ ನಾಯಕನ ಆಟವಾಡಿದ್ದರು. ರಹಾನೆ(117) ಹಾಗೂ ಟೆಸ್ಟ್ ಸ್ಪೆಷಲಿಸ್ಟ್‌ ಚೇತೇಶ್ವರ್ ಪೂಜಾರ(54) ಬ್ಯಾಟಿಂಗ್ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ ಕಳೆದುಕೊಂಡು 247 ರನ್ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು. ಇನ್ನು ಬೌಲಿಂಗ್‌ನಲ್ಲಿ ಉಮೇಶ್ ಯಾದವ್ ಮಿಂಚಿನ ಬೌಲಿಂಗ್ ಹೊರತಾಗಿಯೂ ಕ್ಯಾಮರೋನ್ ಗ್ರೀನ್ ಬಾರಿಸಿದ ಸಮಯೋಚಿಯ ಅರ್ಧಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 306 ರನ್ ಬಾರಿಸುವ ಮೂಲಕ 59 ರನ್‌ಗಳ ಇನಿಂಗ್ಸ್‌ ಮುನ್ನಡೆ ಸಾಧಿಸಿತು.

ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ 'ಎ' ಗಿಲ್ ಹಾಗೂ ಪೃಥ್ವಿ ಶಾ ಸ್ಫೋಟಕ ಆರಂಭದ ಹೊರತಾಗಿಯೂ ವೇಗಿ ಸ್ಟೆಕೇಟಿ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಒಂದು ಹಂತದಲ್ಲಿ ಕೇವಲ 143 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ 10ನೇ ವಿಕೆಟ್‌ಗೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹ ಹಾಗೂ ವೇಗಿ ಕಾರ್ತಿಕ್ ತ್ಯಾಗಿ ಆಸರೆಯಾದರು. ವೃದ್ದಿಮಾನ್ ಸಾಹ 7 ಬೌಂಡರಿ ಸಹಿತ 54 ಬಾರಿಸಿ ಭಾರತ ಪರ ಗರಿಷ್ಠ ಸ್ಕೋರರ್ ಎನಿಸಿದರು. ಅಂತಿಮವಾಗಿ ಭಾರತ 'ಎ' ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಎರಡನೇ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು.

ಅಭ್ಯಾಸ ಪಂದ್ಯ: ಭಾರತವನ್ನು ಕಾಡಿದ ಗ್ರೀನ್‌!

ಇನ್ನು 131 ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ 'ಎ' ಮೂರನೇ ದಿನದಾಟದಂತ್ಯಕ್ಕೆ 52 ರನ್‌ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
 
ಒಂದು ಹಂತದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಸ್ಥಿತಿ ತಲುಪಿದ್ದ ಭಾರತ 'ಎ' ತಂಡಕ್ಕೆ ಸಾಹ ನೆರವಾಗುವ ಮೂಲಕ ಸೋಲಿನ ಭೀತಿಯಿಂದ ತಂಡವನ್ನು ಮಾಡಿದರು. ಮೊದಲ ಅಭ್ಯಾಸ ಪಂದ್ಯ ವೀಕ್ಷಿಸಿದ ನೆಟ್ಟಿಗರು ಏನಂದ್ರು, ನೀವೇ ನೋಡಿ.