ಸಿಡ್ನಿ(ಡಿ.8): ಭಾರತ ‘ಎ’ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಆಸ್ಪ್ರೇಲಿಯಾ ‘ಎ’ ಮುನ್ನಡೆ ಸಾಧಿಸಿದೆ. ಆಲ್ರೌಂಡರ್‌ ಕ್ಯಾಮರೂನ್‌ ಗ್ರೀನ್‌ (ಅಜೇಯ 114 ರನ್‌) ಶತಕ ಸಿಡಿಸಿ ಭಾರತೀಯ ಬೌಲರ್‌ಗಳನ್ನು ಕಾಡಿದರು. 

9 ವಿಕೆಟ್‌ ನಷ್ಟಕ್ಕೆ 247 ರನ್‌ ಗಳಿಸಿ ಭಾರತ ‘ಎ’ ಮೊದಲ ಇನ್ನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡಿತು. ನಾಯಕ ಅಜಿಂಕ್ಯ ರಹಾನೆ ಅಜೇಯ 117 ರನ್‌ ಗಳಿಸಿದರು. ಆಸ್ಪ್ರೇಲಿಯಾ ‘ಎ’ 98 ರನ್‌ಗೆ 5 ವಿಕೆಟ್‌ ಕಳೆದುಕೊಂಡಿತ್ತು. ಆದರೆ ಗ್ರೀನ್‌ ಹಾಗೂ ಆಸ್ಪ್ರೇಲಿಯಾ ಟೆಸ್ಟ್‌ ತಂಡದ ನಾಯಕ ಟಿಮ್‌ ಪೈನ್‌(44) 6ನೇ ವಿಕೆಟ್‌ಗೆ 104 ರನ್‌ ಜೊತೆಯಾಟವಾಡಿದರು. ದಿನದಂತ್ಯಕ್ಕೆ ಆಸ್ಪ್ರೇಲಿಯಾ ‘ಎ’ 8 ವಿಕೆಟ್‌ ನಷ್ಟಕ್ಕೆ 286 ರನ್‌ ಗಳಿಸಿತು.

ಭಾರತ ತಂಡದ ಹಿರಿಯ ಆಟಗಾರರಾದ ಉಮೇಶ್‌ ಯಾದವ್‌ 3 ವಿಕೆಟ್‌ ಕಿತ್ತರೆ, ಮೊಹಮದ್‌ ಸಿರಾಜ್‌ 2 ವಿಕೆಟ್‌ ಕಬಳಿಸಿದರು. ಆರ್‌.ಅಶ್ವಿನ್‌ 2 ವಿಕೆಟ್‌ ಕಿತ್ತು ಟೆಸ್ಟ್‌ ಸರಣಿಗೆ ಸಿದ್ಧರಾಗಿರುವುದಾಗಿ ಸಂದೇಶ ರವಾನಿಸಿದರು. ಮಂಗಳವಾರ ಪಂದ್ಯದ ಕೊನೆ ದಿನವಾಗಿದ್ದು, ಭಾರತೀಯ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರುವ ಉತ್ಸಾಹದಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: 
ಭಾರತ ‘ಎ’ 247/8 ಡಿಕ್ಲೇರ್, 
ಆಸ್ಪ್ರೇಲಿಯಾ ‘ಎ’ 286/8