ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ಭರ್ಜರಿ ಆರಂಭ. ಗುಜರಾತ್‌ ಜೈಂಟ್ಸ್‌ ವಿರುದ್ಧ 6 ವಿಕೆಟ್‌ಗಳ ಗೆಲುವು. ಗುಜರಾತ್‌ 201/5 (ಮೂನಿ 56, ಗಾರ್ಡ್ನರ್‌ 79*), ಆರ್‌ಸಿಬಿ 18.3 ಓವರ್‌ಗಳಲ್ಲಿ 202/4 (ರಿಚಾ 64*, ಪೆರ್ರಿ 57, ಕನಿಕಾ 30*). ರಿಚಾ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಡಬ್ಲ್ಯುಪಿಎಲ್‌ನಲ್ಲಿ ಗರಿಷ್ಠ ರನ್‌ ಚೇಸ್‌ ದಾಖಲೆ ನಿರ್ಮಿಸಿದರು.

ವಡೋದರಾ: ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ 3ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ರಿಚಾ ಘೋಷ್‌, ಎಲೈಸಿ ಪೆರ್ರಿ ಅಬ್ಬರದಿಂದಾಗಿ ತಂಡ ಗುಜರಾತ್‌ ಜೈಂಟ್ಸ್‌ ವಿರುದ್ಧ ತಂಡಕ್ಕೆ 6 ವಿಕೆಟ್‌ ಜಯಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ತಂಡ ಬೆಥ್‌ ಮೂನಿ ಹಾಗೂ ಆ್ಯಶ್ಲೆ ಗಾರ್ಡ್ನರ್‌ ಸ್ಪೋಟಕ ಆಟದ ನೆರವಿನಿಂದ 5 ವಿಕೆಟ್‌ಗೆ 201 ರನ್‌ ಕಲೆಹಾಕಿತು. ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಟ್‌ 6, ದಯಾಳನ್‌ ಹೇಮಲತಾ 4 ರನ್‌ಗೆ ವಿಕೆಟ್‌ ಒಪ್ಪಿಸಿದರೂ, ಮೂನಿ ಹಾಗೂ ಗಾರ್ಡ್ನರ್‌ ತಂಡಕ್ಕೆ ಆಸರೆಯಾದರು.

ಮೂನಿ 42 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 56 ರನ್‌ ಸಿಡಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ಗಾರ್ಡ್ನರ್‌ 37 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ ಔಟಾಗದೆ 79 ರನ್‌ ಚಚ್ಚಿದರು. ಆರ್‌ಸಿಬಿ ಪರ ರೇಣುಕಾ ಸಿಂಗ್‌ 25 ರನ್‌ಗೆ 2 ವಿಕೆಟ್‌ ಕಬಳಿಸಿದರು.

Scroll to load tweet…

WPL 2025: 37 ಎಸೆತ, 79 ರನ್, 8 ಸಿಕ್ಸ್..! ಇತಿಹಾಸ ಸೃಷ್ಟಿಸಿದ ಆಶ್ಲೇ ಗಾರ್ಡ್ನರ್!

ದೊಡ್ಡ ಗುರಿ ಬೆನ್ನತ್ತಿದ ಆರ್‌ಸಿಬಿ, ಆರಂಭಿಕ ಆಘಾತದ ಹೊರತಾಗಿಯೂ 18.3 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ್ತಿಯರಾದ ಸ್ಮತಿ ಮಂಧನಾ(9) ಹಾಗೂ ವ್ಯಾಟ್‌ ಹಾಡ್ಜ್‌(4) ತಂಡದ ಮೊತ್ತ 14 ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿದ್ದರು. ಆದರೆ 3ನೇ ವಿಕೆಟ್‌ಗೆ ಜೊತೆಯಾದ ಎಲೈಸಿ ಪೆರ್ರಿ ಹಾಗೂ ರಾಘವಿ ಬಿಸ್ತ್‌ 55 ಎಸೆತಗಳಲ್ಲಿ 86 ರನ್‌ ಸೇರಿಸಿ ತಂಡದ ಗೆಲುವಿನ ಕನಸನ್ನು ಜೀವಂತವಾಗಿರಿಸಿಕೊಂಡರು. 25 ರನ್‌ ಗಳಿಸಿ ಬಿಸ್ತ್‌ ಔಟಾದ ಬೆನ್ನಲ್ಲೇ ಪೆರ್ರಿ(34 ಎಸೆತಕ್ಕೆ 57) ಕೂಡಾ ನಿರ್ಗಮಿಸಿದರು.

Scroll to load tweet…

ಆದರೆ ರಿಚಾ ಘೋಷ್‌ ಹಾಗೂ ಕನಿಕಾ ಅಹುಜಾ ತಂಡವನ್ನು ಗೆಲ್ಲಿಸಿದರು. ರಿಚಾ 27 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 64 ರನ್ ಸಿಡಿಸಿದರೆ, ಕನಿಕಾ 13 ಎಸೆತಗಳಲ್ಲಿ 30 ರನ್‌ ಬಾರಿಸಿದರು. ಈ ಜೋಡಿ ಮುರಿಯದ 5ನೇ ವಿಕೆಟ್‌ಗೆ 37 ಎಸೆತಗಳಲ್ಲಿ 93 ರನ್‌ ಜೊತೆಯಾಟವಾಡಿತು.

ಆಸೀಸ್‌ಗೆ ಮತ್ತೊಂದು ಶಾಕ್‌: ಕೊನೆಯ ಕ್ಷಣದಲ್ಲಿ ಮತ್ತೋರ್ವ ಮಾರಕ ವೇಗಿ ತಂಡದಿಂದ ಔಟ್

ಸ್ಕೋರ್‌: ಗುಜರಾತ್‌ 20 ಓವರಲ್ಲಿ 201/5 (ಗಾರ್ಡ್ನರ್‌ ಔಟಾಗದೆ 79, ಮೂನಿ 56, ರೇಣುಕಾ 2-25), ಆರ್‌ಸಿಬಿ 18.3 ಓವರಲ್ಲಿ 202/4 (ರಿಚಾ ಔಟಾಗದೆ 64, ಪೆರ್ರಿ 57, ಕನಿಕಾ ಔಟಾಗದೆ 30, ಗಾರ್ಡ್ನರ್‌ 2-33)

ಅಂಕಿ-ಅಂಶ:

23 ಎಸೆತ: ರಿಚಾ 23 ಎಸೆತಕ್ಕೆ ಅರ್ಧಶತಕ. ಇದು ಡಬ್ಲ್ಯುಪಿಎಲ್‌ನ 4ನೇ ವೇಗದ ಫಿಫ್ಟಿ. ಸೋಫಿ ಡಂಕ್ಲಿ 18 ಎಸೆತಕ್ಕೆ 50 ಹೊಡೆದಿದ್ದರು.

Scroll to load tweet…

ಡಬ್ಲ್ಯುಪಿಎಲ್‌ನ ಗರಿಷ್ಠ ರನ್‌ ಚೇಸ್‌ ದಾಖಲೆ

ಆರ್‌ಸಿಬಿ 202 ರನ್ ಬೆನ್ನತ್ತಿ ಗೆದ್ದಿತು. ಇದು ಡಬ್ಲ್ಯುಪಿಎಲ್‌ನಲ್ಲೇ ಗರಿಷ್ಠ ರನ್‌ ಚೇಸ್‌. ಕಳೆದ ವರ್ಷ ಗುಜರಾತ್‌ ವಿರುದ್ಧ ಮುಂಬೈ ತಂಡ 191 ರನ್‌ ಬೆನ್ನತ್ತಿ ಗೆದ್ದಿದ್ದು ಈ ವರೆಗಿನ ದಾಖಲೆಯಾಗಿತ್ತು.