ಆಸೀಸ್‌ಗೆ ಮತ್ತೊಂದು ಶಾಕ್‌: ಕೊನೆಯ ಕ್ಷಣದಲ್ಲಿ ಮತ್ತೋರ್ವ ಮಾರಕ ವೇಗಿ ತಂಡದಿಂದ ಔಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ವೇಗಿ ಮಿಚೆಲ್ ಸ್ಟಾರ್ಕ್ ವೈಯಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಮಾರ್ಷ್ ಬಳಿಕ ಸ್ಟಾರ್ಕ್ ಕೂಡಾ ಟೂರ್ನಿಗೆ ಗೈರಾಗಲಿದ್ದಾರೆ.

Mitchell Starc Pulls Out Of ICC Champions Trophy 2025 Due To Personal Reasons kvn

ಸಿಡ್ನಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಆಸ್ಟ್ರೇಲಿಯಾಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಪ್ಯಾಟ್ ಕಮಿನ್ಸ್, ಜೋಶ್‌ ಹೇಜಲ್‌ವುಡ್, ಮಿಚೆಲ್ ಮಾರ್ಷ್ ಬಳಿಕ ತಂಡದ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಕೂಡಾ ಟೂರ್ನಿಗೆ ಗೈರಾಗಲಿದ್ದಾರೆ. 

ಕಳೆದ ಏಕದಿನ ವಿಶ್ವಕಪ್‌ನಲ್ಲಿ ತಂಡದ ಪ್ರಮುಖ ಆಧಾರಸ್ತಂಭ ಎನಿಸಿಕೊಂಡಿದ್ದ ಬಿಗ್ 3 ವೇಗಿಗಳು ಟೂರ್ನಿಯಿಂದ ಹೊರಬಿದ್ದಿದ್ದು, ತಂಡವನ್ನು ಮತ್ತಷ್ಟು ಕುಗ್ಗಿಸಿದೆ. ಮಿಚೆಲ್ ಸ್ಟಾರ್ಕ್ ವೈಯಕ್ತಿಕ ಕಾರಣಗಳಿಂದಾಗಿ ಟೂರ್ನಿಯಲ್ಲಿ ಆಡುತ್ತಿಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ತಿಳಿಸಿದ್ದಾರೆ. 

ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹೇಜಲ್‌ವುಡ್ ಅನುಪಸ್ಥಿತಿಯಲ್ಲಿ 35 ವರ್ಷದ ಮಿಚೆಲ್ ಸ್ಟಾರ್ಕ್ ಆಸೀಸ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ ಎನ್ನುವ ನಿರೀಕ್ಷೆಯಿತ್ತು. ಅದರೆ ಸ್ಟಾರ್ಕ್ ಕೂಡಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದಿರುವುದು ಆಸೀಸ್ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಪೆಟ್ಟು ಬೀಳುವಂತೆ ಮಾಡಿದೆ

ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ನಾಯಕನಾಗಿ ನೇಮಕಗೊಂಡಿದ್ದಾರೆ. ಸ್ಪೆನ್ಸರ್ ಜಾನ್ಸನ್, ನೇಥನ್ ಎಲ್ಲಿಸ್, ಸೀನ್ ಅಬಾಟ್, ಡ್ವಾರ್ಷಿಯಸ್ ತಂಡ ಸೇರ್ಪಡೆಗೊಂಡಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ:

ಸ್ಟೀವ್ ಸ್ಮಿತ್(ನಾಯಕ), ಜೋಶ್ ಇಂಗ್ಲಿಶ್(ವಿಕೆಟ್ ಕೀಪರ್), ಸೀನ್ ಅಬ್ಬೋಟ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಬೆನ್ ಡ್ವಾರ್ಷಿಯಸ್, ನೇಥನ್ ಎಲ್ಲೀಸ್, ಜೇಕ್ ಪ್ರೇಸರ್-ಮೆಕ್‌ಗುರ್ಕ್, ಆರೋನ್ ಹಾರ್ಡ್ಲಿ, ಟ್ರ್ಯಾವಿಸ್ ಹೆಡ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘಾ, ಮ್ಯಾಥ್ಯೂ ಶಾರ್ಟ್, ಆಡಂ ಝಂಪಾ.

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತದ ಧವನ್ ರಾಯಭಾರಿ

ದುಬೈ: ಇದೇ ತಿಂಗಳ 19ರಿಂದ ಆರಂಭವಾಗಲಿರುವ ಚಾಂಪಿಯನ್ಸ್‌ ಟ್ರೋಫಿಗೆ ನಾಲ್ವರು ರಾಯಭಾರಿಗಳನ್ನು ಐಸಿಸಿ ನೇಮಕ ಮಾಡಿದ್ದು, ಇದರಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಕೂಡ ಇದ್ದಾರೆ. ಧವನ್ ಹೊರತು ಪಡಿಸಿ 2017 ಚಾಂಪಿಯನ್
ಟ್ರೋಫಿ ವಿಜೇತ ವಿಜೇತ ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್, ಆಸ್ಟ್ರೇಲಿಯಾದ ಮಾಜಿ ಆಲೌಂಡರ್ ಶೇನ್ ವ್ಯಾಟ್ಸನ್, ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಕೂಡರಾಯಭಾರಿಯಾಗಿರಲಿದ್ದಾರೆ.

ಈ ಬಗ್ಗೆ ಧವನ್ ಪ್ರತಿಕ್ರಿಯಿಸಿದ್ದು, 'ಚಾಂಪಿಯನ್ ಟ್ರೋಫಿಯ ಭಾಗವಾಗಿರುವುದು ವಿಶೇಷ ಅನುಭವ, ರಾಯಭಾರಿಯಾಗುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆಯಿದೆ' ಎಂದಿದ್ದಾರೆ. ಧವನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದು, 2 ಆವೃತ್ತಿಗಳಲ್ಲಿ 701 ರನ್ ಗಳಿಸಿದ್ದಾರೆ.
 

Latest Videos
Follow Us:
Download App:
  • android
  • ios