ಸತತ ಸೋಲಿನಿಂದ ಆರ್‌ಸಿಬಿ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಸೆಮಿಫೈನಲ್‌ನಿಂದ ಹೊರಬಿದ್ದಿದೆ. ಯುಪಿ ವಾರಿಯರ್ಸ್ ವಿರುದ್ಧ 12 ರನ್‌ಗಳಿಂದ ಸೋತ ಆರ್‌ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಯುಪಿ ವಾರಿಯರ್ಸ್ 5 ವಿಕೆಟ್‌ಗೆ 225 ರನ್ ಗಳಿಸಿತು, ಜಾರ್ಜಿಯಾ ವೊಲ್ 99 ರನ್ ಗಳಿಸಿದರು. ಆರ್‌ಸಿಬಿ 213 ರನ್ ಗಳಿಸಲಷ್ಟೇ ಶಕ್ತವಾಯಿತು. ಯುಪಿ ವಾರಿಯರ್ಸ್ ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಿತು.
ಲಖನೌ: ಸತತ 5 ಪಂದ್ಯಗಳಲ್ಲಿ ಸೋಲುಂಡ ಹಾಲಿ ಚಾಂಪಿಯನ್ ಆರ್‌ಸಿಬಿ 3ನೇ ಆವೃತ್ತಿ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನ ಸೆಮಿಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಶನಿವಾರ ಯುಪಿ ವಾರಿಯರ್ಸ್ ವಿರುದ್ಧ ಸ್ಮೃತಿ ಮಂಧನಾ 12 ರನ್ ಸೋಲು ಕಂಡಿತು. ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಸೋಲುಂಡ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದ ಯುಪಿ, 8 ಪಂದ್ಯಗಳಲ್ಲಿ 3ನೇ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿತು.
ಮೊದಲು ಬ್ಯಾಟ್ ಮಾಡಿದ ಯುಪಿ 5 ವಿಕೆಟ್‌ಗೆ 225 ರನ್ ಕಲೆಹಾಕಿತು. ಆಸ್ಟ್ರೇಲಿಯಾದ 21 ವರ್ಷದ ಜಾರ್ಜಿಯಾ ವೊಲ್ 56 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್‌ನೊಂದಿಗೆ ಔಟಾಗದೆ 99 ರನ್ ಸಿಡಿಸಿದರು. ಇನ್ನಿಂಗ್ಸ್‌ನ ಕೊನೆ ಎಸೆತದಲ್ಲಿ ಸಿಂಗಲ್ ಪಡೆಯಲಷ್ಟೇ ಯಶಸ್ವಿಯಾದ ವೊಲ್, ಶತಕದಿಂದ ವಂಚಿತರಾದರು. ಕಿರಣ್ ನಾವ್ಗಿರೆ 16 ಎಸೆತಗಳಲ್ಲಿ 46, ಗ್ರೇಸ್ ಹ್ಯಾರಿಸ್ 22 ಎಸೆತಗಳಲ್ಲಿ 39 ರನ್ ಕೊಡುಗೆ ನೀಡಿದರು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೂ ಮುನ್ನ ವಿರಾಟ್ ಕೊಹ್ಲಿಗೆ ಗಾಯ, ಆತಂಕದಲ್ಲಿ ಫ್ಯಾನ್ಸ್
ದಾಖಲೆಯ ಗುರಿ ಬೆನ್ನತ್ತಿದ ಆರ್‌ಸಿಬಿ, ಸ್ಫೋಟಕ ಆರಂಭದ ಹೊರತಾಗಿಯೂ 213 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರಿಚಾ 33 ಎಸೆತಕ್ಕೆ 69, ಎಲೈಸಿ ಪೆರ್ರಿ 28, ಮೇಘನಾ 12 ಎಸೆತಕ್ಕೆ 27 ರನ್ ಗಳಿಸಿದರೂ ತಂಡಕ್ಕೆ ಗೆಲ್ಲಲಾಗಲಿಲ್ಲ.
225 ರನ್: ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ
ಯುಪಿ ತಂಡ 5 ವಿಕೆಟ್‌ಗೆ 225 ರನ್ ಗಳಿಸಿತು. ಇದು ಡಬ್ಲ್ಯುಪಿಎಲ್‌ನಲ್ಲೇ ಗರಿಷ್ಠ. 2023ರಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ 2 ವಿಕೆಟ್‌ಗೆ 223 ರನ್ ಗಳಿಸಿದ್ದು ಈ ವರೆಗಿನ ದಾಖಲೆ.
ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತಕ್ಕೆ ವರ, ಕಿವೀಸ್‌ಗೆ ಶಾಪವಾದ ಹೈಬ್ರಿಡ್ ಮಾದರಿ ಟೂರ್ನಿ!
99 ರನ್
ಜಾರ್ಜಿಯಾ ವೊಲ್ 99 ರನ್ ಗಳಿಸಿದ್ದು ಡಬ್ಲ್ಯುಪಿಎಲ್‌ನಲ್ಲಿ ಜಂಟಿ ಗರಿಷ್ಠ. 2023ರಲ್ಲಿ ಗುಜರಾತ್ ವಿರುದ್ಧ ಆರ್‌ಸಿಬಿಯ ಸೋಫಿ ಡಿವೈನ್ ಕೂಡಾ 99 ರನ್ ಸಿಡಿಸಿದ್ದರು.
