WPL 2024: ಇಂದು ಆರ್‌ಸಿಬಿ-ಡೆಲ್ಲಿ ಹೈವೋಲ್ಟೇಜ್ ಫೈಟ್

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 3 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಆರ್‌ಸಿಬಿ ತಂಡವು 6 ಪಂದ್ಯಗಳಲ್ಲಿ 3 ಗೆಲುವು ಹಾಗೂ 3 ಸೋಲು ಸಹಿತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

WPL 2024 RCB take on Delhi Capitals Challenge in Arun Jaitley stadium kvn

ನವದೆಹಲಿ(ಮಾ.10): ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಪಂದ್ಯಕ್ಕೆ ಅರುಣ್ ಜೇಟ್ಲಿ ಮೈದಾನ ಆತಿಥ್ಯವನ್ನು ವಹಿಸಿದೆ. 

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 3 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಆರ್‌ಸಿಬಿ ತಂಡವು 6 ಪಂದ್ಯಗಳಲ್ಲಿ 3 ಗೆಲುವು ಹಾಗೂ 3 ಸೋಲು ಸಹಿತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಮಂಧನಾ ಪಡೆಗೆ ಮಹತ್ವದ್ದೆನಿಸಿದೆ.

ಹರ್ಮನ್‌ಪ್ರೀತ್‌ ಸಾಹಸ: ಗುಜರಾತ್‌ ವಿರುದ್ಧ ಗೆದ್ದ ಮುಂಬೈ ನಾಕೌಟ್‌ಗೆ

ನವದೆಹಲಿ: ಹರ್ಮನ್‌ಪ್ರೀತ್‌ ಪ್ರದರ್ಶಿಸಿದ ಸಾಹಸದಿಂದಾಗಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಎಫ್‌ಐ)ನಲ್ಲಿ ನಾಕೌಟ್‌ ಪ್ರವೇಶಿಸಿದೆ.

ಶನಿವಾರ ಗುಜರಾತ್‌ ಜೈಂಟ್ಸ್‌ ವಿರುದ್ಧ ಮುಂಬೈ 7 ವಿಕೆಟ್‌ ರೋಚಕ ಗೆಲುವು ಸಾಧಿಸಿತು. 7 ಪಂದ್ಯಗಳಲ್ಲಿ 5ನೇ ಜಯ ದಾಖಲಿಸಿದ ಮುಂಬೈ ನಾಕೌಟ್‌ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿತು. ಗುಜರಾತ್‌ 6 ಪಂದ್ಯಗಳಲ್ಲಿ 5ನೇ ಸೋಲನುಭವಿಸಿತು.

112 ವರ್ಷಗಳಲ್ಲೇ ಮೊದಲು..! ಆಂಗ್ಲರನ್ನು ಬಗ್ಗುಬಡಿದು ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 20 ಓವರಲ್ಲಿ 7 ವಿಕೆಟ್‌ಗೆ 190 ರನ್‌ ಕಲೆಹಾಕಿತು. ಬೆಥ್‌ ಮೂನಿ 35 ಎಸೆತದಲ್ಲಿ 66, ದಯಾಲನ್‌ ಹೇಮಲತಾ 40 ಎಸೆತಗಳಲ್ಲಿ 74 ರನ್‌ ಚಚ್ಚಿದರು. ಈ ಜೋಡಿ 2ನೇ ವಿಕೆಟ್‌ಗೆ 121 ರನ್‌ ಜೊತೆಯಾಟವಾಡಿತು.

ಬೃಹತ್‌ ಗುರಿ ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಯಸ್ತಿಕಾ ಭಾಟಿಯಾ(49) ಔಟಾದ ಬಳಿಕ ಹರ್ಮನ್‌ಪ್ರೀತ್‌ ಏಕಾಂಗಿ ಹೋರಾಟ ಪ್ರದರ್ಶಿಸಿದರು. ಕೇವಲ 48 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್‌ನೊಂದಿಗೆ 95 ರನ್‌ ಚಚ್ಚಿದ ಹರ್ಮನ್‌ ಒಂದು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು.

2ನೇ ಟೆಸ್ಟ್‌: ಆಸೀಸ್‌ ವಿರುದ್ಧ ಕಿವೀಸ್‌ ಮುನ್ನಡೆ

ಕ್ರೈಸ್ಟ್‌ಚರ್ಚ್‌: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸಲ್ಲಿ 162ಕ್ಕೆ ಆಲೌಟ್‌ ಆಗಿದ್ದ ಕಿವೀಸ್‌, ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸಲ್ಲಿ 256 ರನ್‌ಗೆ ಕಟ್ಟಿಹಾಕಿತು. ಲಬುಶೇನ್‌ 90 ರನ್‌ ಗಳಿಸಿದರೆ, ಮ್ಯಾಟ್‌ ಹೆನ್ರಿ 7 ವಿಕೆಟ್‌ ಕಿತ್ತರು. 2ನೇ ಇನ್ನಿಂಗ್ಸ್‌ ಆರಂಭಿಸಿರುವ ಕಿವೀಸ್‌, 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 134 ರನ್‌ ಗಳಿಸಿ, 40 ರನ್‌ ಮುನ್ನಡೆ ಪಡೆದಿದೆ.


 

Latest Videos
Follow Us:
Download App:
  • android
  • ios