Asianet Suvarna News Asianet Suvarna News

WPL 2024: ರಿಚಾ, ಪೆರ್ರಿ ಮಿಂಚಿನ ಆಟ, ಮೊದಲ ಬಾರಿಗೆ ಆರ್‌ಸಿಬಿ ನಾಕೌಟ್‌ಗೆ ಲಗ್ಗೆ

ಮೊದಲು ಬ್ಯಾಟ್‌ ಮಾಡಿದ ಮುಂಬೈ, ಎಲೈಸಿ ಪೆರ್ರಿ ಮಾರಕ ದಾಳಿಗೆ ನಲುಗಿ 19 ಓವರಲ್ಲಿ 113 ರನ್‌ಗೆ ಸರ್ವಪತನ ಕಂಡಿತು. ಹೇಲಿ ಮ್ಯಾಥ್ಯೂಸ್‌(26) ಹಾಗೂ ಸಜನಾ(30) ಮೊದಲ ವಿಕೆಟ್‌ಗೆ 43 ರನ್‌ ಜೊತೆಯಾಟವಾಡಿದರು.

WPL 2024 Ellyse Perry Richa Ghosh powers RCB into playoffs kvn
Author
First Published Mar 13, 2024, 9:31 AM IST | Last Updated Mar 13, 2024, 9:31 AM IST

ನವದೆಹಲಿ(ಮಾ.13): ನಿರ್ಣಾಯಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ -- ವಿಕೆಟ್‌ ಗೆಲುವು ಸಾಧಿಸಿದ ಆರ್‌ಸಿಬಿ 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ನಾಕೌಟ್‌ ಪ್ರವೇಶಿಸಿದೆ. ಕಳೆದ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ತೋರಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಆರ್‌ಸಿಬಿ, ಈ ಬಾರಿ 8 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಅಗ್ರ-3ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ಮುಂಬೈ 8 ಪಂದ್ಯಗಳಲ್ಲಿ 3ನೇ ಸೋಲಿನೊಂದಿಗೆ 2ನೇ ಸ್ಥಾನದಲ್ಲೇ ಇದೆ.

ಮೊದಲು ಬ್ಯಾಟ್‌ ಮಾಡಿದ ಮುಂಬೈ, ಎಲೈಸಿ ಪೆರ್ರಿ ಮಾರಕ ದಾಳಿಗೆ ನಲುಗಿ 19 ಓವರಲ್ಲಿ 113 ರನ್‌ಗೆ ಸರ್ವಪತನ ಕಂಡಿತು. ಹೇಲಿ ಮ್ಯಾಥ್ಯೂಸ್‌(26) ಹಾಗೂ ಸಜನಾ(30) ಮೊದಲ ವಿಕೆಟ್‌ಗೆ 43 ರನ್‌ ಜೊತೆಯಾಟವಾಡಿದರು. ಆದರೆ 6ನೇ ಓವರ್‌ನ ಕೊನೆ ಎಸೆತದಲ್ಲಿ ಮ್ಯಾಥ್ಯೂಸ್‌ ವಿಕೆಟ್‌ ಬೀಳುವುದರೊಂದಿಗೆ ತಂಡದ ಪತನ ಆರಂಭಗೊಂಡಿತು. ಪೆರ್ರಿ 4 ಓವರಲ್ಲಿ ಕೇವಲ 15 ರನ್‌ ನೀಡಿ 6 ವಿಕೆಟ್‌ ಕಬಳಿಸಿದರು.

Ranji Trophy Final: 42ನೇ ಪ್ರಶಸ್ತಿಯತ್ತ ಮುಂಬೈ ದಿಟ್ಟ ಹೆಜ್ಜೆ

ಸುಲಭ ಗುರಿಯನ್ನು ಬೆನ್ನತ್ತಿದರೂ ಆರ್‌ಸಿಬಿ ನಿಧಾನ ಆರಂಭ ಪಡೆದು ಒಂದು ಹಂತದಲ್ಲಿ ಸೋಲಿನ ಭೀತಿಯಲ್ಲಿತ್ತು. 6.1 ಓವರಲ್ಲಿ 39ಕ್ಕೆ 3 ವಿಕೆಟ್‌ ಕಳೆದುಕೊಂಡ ಬಳಿಕ ರಿಚಾ ಘೋಷ್‌(ಔಟಾಗದೆ 00) ಹಾಗೂ ಪೆರ್ರಿ(ಔಟಾಗದೆ 000) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಕೋರ್‌: ಮುಂಬೈ 19 ಓವರಲ್ಲಿ 113/10 (ಸಜನಾ 30, ಮ್ಯಾಥ್ಯೂಸ್‌ 26, 6-15), 
ಆರ್‌ಸಿಬಿ 15 ಓವರಲ್ಲಿ 115/3 (ರಿಚಾ 36, ಪೆರ್ರಿ 40, ಮ್ಯಾಥ್ಯೂಸ್‌ 1-11)

01ನೇ ಬೌಲರ್‌: ಡಬ್ಲ್ಯುಪಿಎಲ್‌ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 6 ವಿಕೆಟ್‌ ಕಿತ್ತ ಮೊದಲ ಬೌಲರ್‌ ಎಲೈಸಿ ಪೆರ್ರಿ.

ಟೆಸ್ಟ್‌ ಚಾಂಪಿಯನ್‌ಶಿಪ್‌: ನಂ.2 ಸ್ಥಾನಕ್ಕೆ ಆಸೀಸ್‌

ದುಬೈ: ನ್ಯೂಜಿಲೆಂಡ್‌ ವಿರುದ್ಧ 2ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ನಂ.2 ಸ್ಥಾನಕ್ಕೇರಿದೆ. ಸತತ 2 ಸೋಲು ಕಂಡ ನ್ಯೂಜಿಲೆಂಡ್‌ 3ನೇ ಸ್ಥಾನಕ್ಕೆ ಕುಸಿದಿದ್ದು, ಕಳೆದೆರಡು ಬಾರಿಯ ರನ್ನರ್‌-ಅಪ್‌ ಭಾರತ ಅಗ್ರಸ್ಥಾನದಲ್ಲೇ ಮುಂದುವರಿದಿದೆ. 

ನಿಯತ್ತು ಎಲ್ಲಕ್ಕಿಂತ ಮಿಗಿಲು: RCB ಪರ ಕೊಹ್ಲಿ ಪಾದಾರ್ಪಣೆಗೆ 16ರ ಹರೆಯ..! KGF ಟಚ್ ಕೊಟ್ಟ ಬೆಂಗಳೂರು ಫ್ರಾಂಚೈಸಿ

ಆಸೀಸ್‌ ಸದ್ಯ 12 ಪಂದ್ಯಗಳಲ್ಲಿ ಶೇ.62.50 ಗೆಲುವಿನ ಪ್ರತಿಶತ ಹೊಂದಿದ್ದು, ನ್ಯೂಜಿಲೆಂಡ್‌ 6 ಪಂದ್ಯಗಳಲ್ಲಿ ಶೇ.50 ಜಯದ ಪ್ರತಿಶತದೊಂದಿಗೆ 3ನೇ ಸ್ಥಾನದಲ್ಲಿದೆ. ಸರಣಿಗೂ ಮುನ್ನ ಟಿಮ್‌ ಸೌಥಿ ನಾಯಕತ್ವದ ಕಿವೀಸ್ ಅಗ್ರಸ್ಥಾನದಲ್ಲಿತ್ತು. ಆದರೆ ಇಂಗ್ಲೆಂಡ್‌ ವಿರುದ್ಧ 4-1 ಅಂತರದಲ್ಲಿ ಗೆದ್ದ ಟೀಂ ಇಂಡಿಯಾ ಅಗ್ರಸ್ಥಾನ ಅಲಂಕರಿಸಿದೆ. ಭಾರತ ಸದ್ಯ 9 ಪಂದ್ಯಗಳಲ್ಲಿ ಶೇ.68.51 ಗೆಲುವಿನ ಪ್ರತಿಶತ ಹೊಂದಿದೆ.

2ನೇ ಟೆಸ್ಟ್‌: ಕಿವೀಸ್‌ ವಿರುದ್ಧ ಆಸೀಸ್‌ಗೆ ರೋಚಕ ಗೆಲುವು

ಕ್ರೈಸ್ಟ್‌ಚರ್ಚ್‌: 80ಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದರೂ ಬಳಿಕ ಅಲೆಕ್ಸ್‌ ಕೇರ್ರಿ, ಮಿಚೆಲ್‌ ಮಾರ್ಷ್‌ ಹಾಗೂ ಪ್ಯಾಟ್‌ ಕಮಿನ್ಸ್‌ ಪ್ರದರ್ಶಿಸಿದ ಹೋರಾಟದಿಂದಾಗಿ ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 3 ವಿಕೆಟ್‌ ರೋಚಕ ಗೆಲುವು ಸಾಧಿಸಿದೆ. 

ಇದರೊಂದಿಗೆ ಆಸೀಸ್‌ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿತು. ಗೆಲುವಿಗೆ 279 ರನ್‌ ಗುರಿ ಪಡೆದಿದ್ದ ಆಸೀಸ್‌ ಆರಂಭಿಕರನ್ನು ಕಡಿಮೆ ಮೊತ್ತಕ್ಕೆ ಕಳೆದುಕೊಂಡಿತ್ತು. ಆದರೆ 6ನೇ ವಿಕೆಟ್‌ಗೆ ಮಾರ್ಷ್‌-ಕೇರ್ರಿ 140 ರನ್‌ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಮಾರ್ಷ್‌ 80ಕ್ಕೆ ಔಟಾದ ಬಳಿಕ ಮುರಿದ 8ನೇ ವಿಕೆಟ್‌ಗೆ ಕಮಿನ್ಸ್‌(ಔಟಾಗದೆ 32) 61 ರನ್‌ ಸೇರಿಸಿದ ಕೇರ್ರಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಕೇರ್ರಿ ಔಟಾಗದೆ 98 ರನ್ ಗಳಿಸಿದರು.
 

Latest Videos
Follow Us:
Download App:
  • android
  • ios