2008, ಮಾರ್ಚ್ 11 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಡ್ರಾಫ್ಟ್ ಸಿಸ್ಟಂ ಮೂಲಕ ಅಂಡರ್ 19 ವಿಶ್ವಕಪ್ ತಂಡದ ಆಟಗಾರರನ್ನು ಖರೀದಿಸಲು ಅವಕಾಶವಿತ್ತು. ಆಗ ಆರ್‌ಸಿಬಿ ಫ್ರಾಂಚೈಸಿಯು 30,000 ಡಾಲರ್ ನೀಡಿ ಕೊಹ್ಲಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.

ಬೆಂಗಳೂರು(ಮಾ.11): ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಪಾಲಿಗೆ ಮಾರ್ಚ್ 11 ಅವಿಸ್ಮರಣೀಯ ದಿನ. ಈ ದಿನದಂದೇ ಟೀಂ ಇಂಡಿಯಾ ದಂತಕಥೆ, ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಆರ್‌ಸಿಬಿ ಕೂಡಿಕೊಂಡ ದಿನ. ಇದೀಗ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಗ ಸೇರಿಕೊಂಡು ಇಂದಿಗೆ 16 ವರ್ಷ ತುಂಬಿವೆ. ಚೊಚ್ಚಲ ಆವೃತ್ತಿಯಿಂದಲೂ ಸತತ 16 ವರ್ಷಗಳ ಕಾಲ ಒಂದೇ ಫ್ರಾಂಚೈಸಿ ಪರವಾಗಿ ಆಡಿದ ಏಕೈಕ ಕ್ರಿಕೆಟಿಗ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ. ಈ ಕಾರಣಕ್ಕಾಗಿಯೇ ಹೇಳಿದ್ದು, ನಿಯತ್ತು ಎಲ್ಲಕ್ಕಿಂತ ಮಿಗಿಲು ಎಂದು.

2008, ಮಾರ್ಚ್ 11 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಡ್ರಾಫ್ಟ್ ಸಿಸ್ಟಂ ಮೂಲಕ ಅಂಡರ್ 19 ವಿಶ್ವಕಪ್ ತಂಡದ ಆಟಗಾರರನ್ನು ಖರೀದಿಸಲು ಅವಕಾಶವಿತ್ತು. ಆಗ ಆರ್‌ಸಿಬಿ ಫ್ರಾಂಚೈಸಿಯು 30,000 ಡಾಲರ್ ನೀಡಿ ಕೊಹ್ಲಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದಾದ ಮೇಲೆ ನಡೆದದ್ದು ಇತಿಹಾಸ. ಅದೇ ವರ್ಷ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಕಿರಿಯರ ತಂಡ ಅಂಡರ್ 19 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

'ಹಣಕ್ಕಿಂತ ನಿಯತ್ತು ಮುಖ್ಯ': ಎದುರಾಳಿ IPL ಫ್ರಾಂಚೈಸಿ 20 ಕೋಟಿ ಆಫರ್ ತಿರಸ್ಕರಿಸಿದ RCB ಹುಲಿ ವಿರಾಟ್‌ ಕೊಹ್ಲಿ..!

ಚೊಚ್ಚಲ ಬಾರಿಗೆ ನಡೆದ ಹರಾಜಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿರಾಟ್ ಕೊಹ್ಲಿ, ಡೆಲ್ಲಿ ಕ್ಯಾಪಿಟಲ್ಸ್ ನನ್ನನ್ನು ಖರೀದಿಸಲು ಒಲವು ತೋರಿತ್ತು ಎಂದು ಕೇಳಲ್ಪಟ್ಟಿದ್ದೆ, ಆದರೆ ಕೊನೆಗೆ ಆರ್‌ಸಿಬಿಗೆ ಸೇರಿಕೊಂಡೆ ಎಂದು ಕಿಂಗ್ ಕೊಹ್ಲಿ ಹೇಳಿದ್ದರು.

Scroll to load tweet…

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿಯ 16 ವರ್ಷಗಳ ಸುದೀರ್ಘ ಜರ್ನಿಯನ್ನು ಸ್ಯಾಂಡಲ್‌ವುಡ್‌ನ ಬ್ಲಾಕ್‌ ಬಸ್ಟರ್ ಸಿನಿಮಾ ಕೆಜಿಎಫ್‌ ಥೀಮ್‌ ಸಾಂಗ್ ಬಳಸಿ ವಿಶೇಷವಾಗಿ ಗೌರವಿಸಿದೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Scroll to load tweet…

ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾಕ್ ಕಾಲಿಸ್ ಅವರಂತಹ ತಾರಾ ಆಟಗಾರರ ದಂಡೇ ಇದ್ದರೂ, ಮೊದಲ ಆವೃತ್ತಿಯಿಂದಲೇ ಕೊಹ್ಲಿ ತಮ್ಮ ಹೆಜ್ಜೆಗುರುತು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. 2011ರ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ವಿರಾಟ್ ಕೊಹ್ಲಿಯೊಬ್ಬರನ್ನೇ ರೀಟೈನ್ ಮಾಡಿಕೊಂಡಿತ್ತು. ಇದಾದ ಬಳಿಕ ಕೊಹ್ಲಿ 2013ರಲ್ಲಿ ಆರ್‌ಸಿಬಿ ತಂಡದ ನಾಯಕರಾಗಿಯೂ ನೇಮಕವಾಗಿದ್ದರು. ಇನ್ನು 2016ರಲ್ಲಿ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವು ಫೈನಲ್‌ಗೇರಿತ್ತು. ಆ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 4 ಶತಕ ಸಹಿತ ದಾಖಲೆಯ 973 ರನ್ ಚಚ್ಚಿದ್ದರು. ಇದರ ಹೊರತಾಗಿಯೂ ಆರ್‌ಸಿಬಿ ತಂಡವು ಫೈನಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಶರಣಾಗಿ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 2021ರ ಐಪಿಎಲ್ ಬಳಿಕ ಆರ್‌ಸಿಬಿ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದರು.

IPL 2024: ಕಪ್ ಗೆಲ್ಲಲು ಗಂಭೀರ್ ಮಾಸ್ಟರ್ ಪ್ಲಾನ್: ಕೊನೆ ಕ್ಷಣದಲ್ಲಿ ವಿಸ್ಪೋಟಕ ಬ್ಯಾಟರ್ KKR ಸೇರ್ಪಡೆ..!

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಗಿ 237 ಪಂದ್ಯಗಳನ್ನಾಡಿ 7 ಶತಕ ಸಹಿತ 7,263 ರನ್ ಬಾರಿಸಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಕಳೆದೆರಡು ವರ್ಷಗಳಿಂದ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಆರಂಭಿಕನಾಗಿ ಮಿಂಚುತ್ತಿದ್ದಾರೆ. ಇದೀಗ 2024ರ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.