Asianet Suvarna News Asianet Suvarna News

WPL 2023: ಇಂದು ಆರ್‌ಸಿಬಿಗೆ ಯುಪಿ ವಾರಿಯರ್ಸ್ ಚಾಲೆಂಜ್..! ಗೆದ್ದರಷ್ಟೇ ಪ್ಲೇ ಆಫ್‌ ಆಸೆ ಜೀವಂತ

ವುಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿಂದು ಆರ್‌ಸಿಬಿ-ಯುಪಿ ವಾರಿಯರ್ಸ್‌ ಫೈಟ್
ಪ್ಲೇ ಆಫ್‌ ರೇಸ್‌ನಲ್ಲಿ ಉಳಿಯಲು ಆರ್‌ಸಿಬಿಗಿಂದು ಲಾಸ್ಟ್‌ ಚಾನ್ಸ್
ಸತತ 5 ಪಂದ್ಯಗಳಲ್ಲಿ ಸೋಲುಂಡಿರುವ ಸ್ಮೃತಿ ಮಂಧನಾ ಪಡೆ

WPL 2023 Royal Challengers Bangalore take on UP Warriorz Challenge at Mumbai kvn
Author
First Published Mar 15, 2023, 11:25 AM IST

ಮುಂಬೈ(ಮಾ.15): ಚೊಚ್ಚಲ ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​ನಲ್ಲಿ ಇನ್ನಷ್ಟೇ ಗೆಲು​ವಿನ ಖಾತೆ ತೆರೆ​ಯ​ಬೇ​ಕಿರುವ ​ರಾಯಲ್‌ ಚಾಲೆಂಜ​ರ್ಸ್‌ ಬೆಂಗ​ಳೂ​ರು​(​ಅ​ರ್‌​ಸಿ​ಬಿ) ಬುಧ​ವಾರ ಮಾಡು ಇಲ್ಲವೇ ಮಡಿ ಪಂದ್ಯ​ದಲ್ಲಿ ಯುಪಿ ವಾರಿ​ಯರ್ಸ್‌ ವಿರುದ್ಧ ಸೆಣ​ಸಾ​ಡ​ಲಿದೆ. ಈಗಾ​ಗಲೇ ಆಡಿ​ರುವ 5 ಪಂದ್ಯ​ಗ​ಳಲ್ಲೂ ಸೋತಿ​ರುವ ಸ್ಮೃತಿ ಮಂಧನಾ ಪಡೆ ಈ ಪಂದ್ಯ​ದಲ್ಲಿ ಗೆಲ್ಲ​ದಿ​ದ್ದ​ರೆ ತಂಡದ ಪ್ಲೇ-ಆಫ್‌ ಹಾದಿ ಸಂಪೂ​ರ್ಣ​ವಾಗಿ ಮುಚ್ಚ​ಲಿದೆ.

ಆರ್‌​ಸಿಬಿ ಸದ್ಯ ಕೊನೆ ಸ್ಥಾನ​ದಲ್ಲೇ ಬಾಕಿ​ಯಾ​ಗಿದ್ದು, ಇನ್ನು​ಳಿದ 3 ಪಂದ್ಯ​ಗ​ಳಲ್ಲಿ ಗೆದ್ದರೂ ಕಳಪೆ ನೆಟ್‌ ರನ್‌​ರೇಟ್‌ ಹೊಂದಿ​ರುವ ಕಾರಣ ಪ್ಲೇ-ಆಫ್‌​ಗೇ​ರುವುದು ಅನು​ಮಾ​ನ​. ಹೀಗಿ​ದ್ದರೂ ಇನ್ನು​ಳಿದ ಎಲ್ಲಾ ಪಂದ್ಯ​ಗ​ಳಲ್ಲಿ ಬೃಹತ್‌ ಗೆಲುವು ಸಾಧಿಸಿ, ಇತರೆ ತಂಡ​ಗಳ ಫಲಿ​ತಾಂಶ ಆರ್‌​ಸಿಬಿ ಪರ​ವಾಗಿ ಬಂದರೆ ತಂಡಕ್ಕೆ ಪ್ಲೇ-ಆಫ್‌​ಗೇ​ರಲು ಸಾಧ್ಯ​ವಿದೆ. ತಂಡ ಈಗಾ​ಗಲೇ ಯುಪಿ ವಿರುದ್ಧ ಒಂದು ಪಂದ್ಯ​ವ​ನ್ನಾ​ಡಿದ್ದು, 10 ವಿಕೆ​ಟ್‌​ಗ​ಳಿಂದ ಹೀನಾ​ಯ​ವಾಗಿ ಸೋಲ​ನು​ಭ​ವಿ​ಸಿತ್ತು. ಬ್ಯಾಟಿಂಗ್‌​, ಬೌಲಿಂಗ್‌ ಹಾಗೂ ಫೀಲ್ಡಿಂಗ್‌​ನಲ್ಲಿ ಅತ್ಯಂತ ಕಳಪೆ ಪ್ರದ​ರ್ಶನ ನೀಡು​ತ್ತಿ​ರುವ ಆರ್‌​ಸಿಬಿ ಅಸಾ​ಧಾ​ರಣ ಪ್ರದ​ರ್ಶನ ನೀಡಿ​ದ​ರಷ್ಟೇ ಗೆಲುವು ದಕ್ಕ​ಲಿದೆ. ಅತ್ತ ಯುಪಿ ವಾರಿಯರ್ಸ್‌ 5 ಪಂದ್ಯ​ಗ​ಳಲ್ಲಿ 2ರಲ್ಲಿ ಗೆದ್ದಿ​ದ್ದು, ಮತ್ತೊಂದು ಗೆಲು​ವಿನ ಮೂಲಕ ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿ​ರ​ವಾ​ಗುವ ನಿರೀ​ಕ್ಷೆ​ಯ​ಲ್ಲಿ​ದೆ.

ಕಳೆದ ಪಂದ್ಯದಲ್ಲಿ ಎಲೈಸಿ ಪೆರ್ರಿ ಹಾಗೂ ರಿಚಾ ಘೋಷ್ ಜೋಡಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕೇವಲ 34 ಎಸೆತಗಳಲ್ಲಿ ಸ್ಪೋಟಕ 74 ರನ್‌ ಸಿಡಿಸುವ ಮೂಲಕ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದರು. ಆದರೆ ಅಗ್ರಕ್ರಮಾಂಕದಲ್ಲಿ ನಾಯಕಿ ಸ್ಮೃತಿ ರನ್ ಬರ ಅನುಭವಿಸುತ್ತಿರುವುದು ತಂಡದ ತಲೆನೋವು ಹೆಚ್ಚಿಸುವಂತೆ ಮಾಡಿದೆ. ಇನ್ನು ಬೌಲರ್‌ಗಳು ಕೂಡಾ ದುಬಾರಿಯಾಗುತ್ತಿರುವುದು ಆರ್‌ಸಿಬಿ ತಂಡದ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡಿದೆ. ಈ ಎಲ್ಲಾ ಮಿತಿಗಳನ್ನು ಮೆಟ್ಟಿನಿಂತು ಆರ್‌ಸಿಬಿ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

WPL 2023 5 ಪಂದ್ಯ ಸೋತ ಆರ್‌ಸಿಬಿ ವುಮೆನ್ಸ್‌ಗಿದೆ ಪ್ಲೇ ಆಫ್ ಚಾನ್ಸ್, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ!

ಇನ್ನೊಂದೆಡೆ ಯುಪಿ ವಾರಿಯರ್ಸ್‌ ತಂಡವು ಸಾಕಷ್ಟು ಸಮತೋಲಿತವಾಗಿ ಕಂಡು ಬರುತ್ತಿದೆ. ಬ್ಯಾಟಿಂಗ್‌ನಲ್ಲಿ ದೇವಿಕಾ ವೈದ್ಯ, ಅಲಿಸಾ ಹೋಲಿ ತಾಹಿಲಾ ಮೆಗ್‌ಗ್ರಾಥ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಆಲ್ರೌಂಡರ್ ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್‌ ಹಾಗೂ ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್‌, ಮತ್ತೊಮ್ಮೆ ಆರ್‌ಸಿಬಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಸ್ಮೃತಿ ಮಂಧನಾ(ನಾಯಕಿ), ಸೋಫಿ ಡಿವೈನ್‌, ಎಲೈಸಿ ಪೆರ್ರಿ, ಹೀಥರ್ ನೈಟ್‌, ರಿಚಾ ಘೋಷ್(ವಿಕೆಟ್ ಕೀಪರ್), ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೆಗನ್ ಶುಟ್, ಸಹನಾ ಪವಾರ್, ರೇಣುಕಾ ಠಾಕೂರ್, ಪ್ರೀತಿ ಬೋಸ್.

ಯುಪಿ ವಾರಿಯರ್ಸ್‌: 
ದೇವಿಕಾ ವೈದ್ಯ, ಅಲಿಸಾ ಹೀಲಿ(ನಾಯಕಿ&ವಿಕೆಟ್ ಕೀಪರ್), ಕಿರನ್ ನವ್ಗೀರೆ, ತಾಹಿಲಾ ಮೆಗ್‌ಗ್ರಾಥ್, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಸಿಮ್ರನ್ ಶೇಕ್, ಸೋಫಿ ಎಕ್ಲೆಸ್ಟೋನ್‌, ಗ್ರೇಸ್ ಹ್ಯಾರಿಸ್, ಅಂಜಲಿ ಶರ್ವಾನಿ, ರಾಜೇಶ್ವರಿ ಗಾಯಕ್ವಾಡ್.

ಪಂದ್ಯ: ಸಂಜೆ 7.30ಕ್ಕೆ
ನೇರ​ಪ್ರ​ಸಾ​ರ: ಸ್ಪೋಟ್ಸ್‌ರ್‍ 18, ಜಿಯೋ ಸಿನೆ​ಮಾ

Follow Us:
Download App:
  • android
  • ios