ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ವರ್ಣರಂಜಿತ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕಿಯಾರ, ಕೃತಿ ಹಾಗೂ ಕೆನಡಾ ಸಿಂಗರ್ ಎಪಿ ದಿಲ್ಲೋನ್ ರಸಂಜೆ ಅಭಿಮಾನಿಗಳಿಗೆ ಮುದ ನೀಡಿತು. ಅದ್ಧೂರಿ ವರ್ಣರಂಜಿತ ಕಾರ್ಯಕ್ರಮದ ವಿಡಿಯೋ ಇಲ್ಲಿದೆ.
ಮಂಬೈ(ಮಾ.04): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ವರ್ಣರಂಜಿ ಕಾರ್ಯಕ್ರಮ ನೋಡುಗರ ಮನಸೂರೆ ಗೊಂಡಿದೆ. ಬಾಲಿವುಡ್ ನಟಿ ಕೃತಿ ಸನನ್, ಕಿಯಾರ ಅಡ್ವಾಣಿ ಹಾಗೂ ಕೆನಡ ಸಿಂಗರ್ ಎಪಿ ದಿಲ್ಲೋನ್ ಕಾರ್ಯಕ್ರಮಗಳು ಮಹಿಳಾ ಐಪಿಎಲ್ ಟೂರ್ನಿ ಕಳೆ ಹೆಚ್ಚಿಸಿತು.ಕಿಯಾರ ಅಡ್ವಾಣಿ ತಮ್ಮ ಅದ್ಧೂರಿ ಡ್ಯಾನ್ಸ್ ಪರ್ಫಾಮೆನ್ಸ್ ನೊಂದಿಗೆ ಎಲ್ಲರನ್ನು ರಂಜಿಸಿದರು. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಅದ್ಧೂರಿ ಸಮಾರಂಭ ಹಲವು ವಿಶೇಷತೆಗಳಿಗೂ ಸಾಕ್ಷಿಯಾಯಿತು.
ವರ್ಣರಂಜಿತ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಈ ವೇದಿಕೆಯಲ್ಲಿ ಕಿಯಾರ ಹಾಗೂ ಬಳಗದ ಡ್ಯಾನ್ಸ್ ಮಹಿಳಾ ಐಪಿಎಲ್ ಅಭಿಮಾನಿಗಳಲ್ಲಿ ಜೋಶ್ ತುಂಬಿತು. ಕಿಯಾರ ಡ್ಯಾನ್ಸ್ ಬಳಿಕ ಕೃತಿ ಸನನ್ ಹಾಗೂ ಬಳಗ ಮತ್ತೊಂದು ಹೈ ಎನರ್ಜಿಟಿಕ್ ಪರ್ಫಾಮೆನ್ಸ್ ಮೂಲಕ ಎಲ್ಲರನ್ನು ರಂಜಿಸಿದರು.
WPL 2023 ಮಹಿಳಾ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್!
ಬಾಲಿವುಡ್ ಡ್ಯಾನ್ಸ್ ಪರ್ಫಾಮೆನ್ಸ್ ಬೆನ್ನಲ್ಲೇ ಎಪಿ ದಿಲ್ಲೋನ್ ಹಾಡು ಅಭಿಮಾನಿಗಳನ್ನು ನಿಂತಲ್ಲೆ ಕುಣಿಸಿತು. ಪಂಜಾಬಿ ಗಾಯನದ ಮೂಲಕ ದಿಲ್ಲೋನ್ ರಂಜಿಸಿದರು. ದಿಲ್ಲೋನ್ ಹಾಡಿಗೆ ಗ್ಯಾಲರಿಯಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದರು.
ವರ್ಣರಂಜಿತ ಕಾರ್ಯಕ್ರಮದ ಬಳಿಕ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಟ್ರೋಫಿ ಅನಾವರಣಗೊಳಿಸಲಾಯಿತು. ಗುಜರಾತ್ ಜೈಂಟ್ಸ್ ತಂಡದ ನಾಯಕಿ ಬೆತ್ ಮೂನಿ, ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮಮನ್‌ಪ್ರೀತ್ ಕೌರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧನಾ, ಡೆಲ್ಲಿ ಕ್ಯಾಪಿಲ್ಸ್ ಮಹಿಳಾ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಯುಪಿ ವಾರಿಯರ್ಸ್ ಮಹಿಳಾ ನಾಯಕಿ ಅಲಿಸಾ ಹೀಲೆ ಮಹಿಳಾ ಟ್ರೋಫಿ ಅನಾವರಣಗೊಳಿಸಿದರು. ಟ್ರೋಫಿ ಅನಾವರಣಗೊಳ್ಳುತ್ತಿದ್ದಂತೆ ಪಟಾಕಿಗಳು ಆಗಸದಲ್ಲಿ ಚಿತ್ತಾರ ಮೂಡಿಸಿತು.
ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಪುರುಷರ ಐಪಿಎಲ್ ಟೂರ್ನಿಯಂತೆ ಅದ್ಧೂರಿ ಆರಂಭ ಕಂಡಿದೆ. ನಾಲ್ಕು ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ, ಮುಂಬೈ ಇಂಡಿಯನ್ಸ್ ಮಹಿಳಾ ತಂಡ, ಯುಪಿ ವಾರಿಯರ್ಸ್ ಮಹಿಳಾ ತಂಡ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಹೋರಾಟ ನಡೆಸಲಿದೆ.
'ಕೆಟ್ಟ ಟೈಮ್‌ನಲ್ಲೂ ವಿನ್ ಆಗ್ತಾರಲ್ಲ, ಅವರೇ ಚಾಂಪಿಯನ್ಸ್..' ಆರ್‌ಸಿಬಿಯಲ್ಲಿ ಆರಂಭವಾಯ್ತು ಸಾನಿಯಾ ಸ್ಫೂರ್ತಿ!
ಇಂದಿನಿಂದ ಆರಂಭಗೊಂಡಿರುವ ಮಹಿಳಾ ಟೂರ್ನಿ, ಮಾರ್ಚ್ 26ರ ಫೈನಲ್ ಪಂದ್ಯದ ಮೂಲಕ ಅಂತ್ಯಗೊಳ್ಳಲಿದೆ. 20 ಲೀಗ್ ಪಂದ್ಯಗಳು ನಡೆಯಲಿದೆ. ಎಲ್ಲಾ ಪಂದ್ಯಗಳು ಮುಂಬೈನಲ್ಲೇ ನಡೆಯಲಿದೆ. ಡಿವೈ ಪಾಟೀಲ್ ಹಾಗೂ ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಮಹಿಳಾ ಐಪಿಎಲ್ ಟೂರ್ನಿ ಆಯೋಜಿಸಲಾಗಿದೆ. ಡಬಲ್ ಹೆಡ್ಡರ್ ಪಂದ್ಯದ ದಿನ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಇನ್ನು ಒಂದೇ ಮ್ಯಾಚ್ ದಿನ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.
ಅದ್ಧೂರಿ ವರ್ಣರಂಜಿತ ಸಮಾರಂಭದ ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಇಂಡಿಯನ್ಸ್ ನಡುವಿನ ಮೊದಲ ಪಂದ್ಯ ಆರಂಭಗೊಂಡಿತು.
