ವುಮೆನ್ಸ್‌ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಮುಂಬೈ ಪ್ಲೇ ಆಫ್‌ಗೆ ಲಗ್ಗೆಟೂರ್ನಿಯಲ್ಲಿ ಸತತ 5 ಗೆಲುವು ಸಾಧಿಸಿದ ಹರ್ಮನ್‌ಪ್ರೀತ್‌ ಕೌರ್ ಪಡೆಗುಜರಾತ್ ಜೈಂಟ್ಸ್‌ ಎದುರು 55 ರನ್‌ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್‌

ಮುಂಬೈ(ಮಾ.15): ಚೊಚ್ಚಲ ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಡ​ಬ್ಲ್ಯು​ಪಿ​ಎ​ಲ್‌​)​ನಲ್ಲಿ ಮುಂಬೈ ಇಂಡಿ​ಯನ್ಸ್‌ ಗೆಲು​ವಿನ ಓಟ ಮುಂದು​ವ​ರಿ​ದಿದ್ದು, ಸತತ 5ನೇ ಗೆಲು​ವಿ​ನೊಂದಿಗೆ ಪ್ಲೇ-ಆಫ್‌ ಸ್ಥಾನ ಖಚಿ​ತ​ಪ​ಡಿ​ಸಿ​ಕೊಂಡಿದೆ. ಮಂಗ​ಳ​ವಾರ ಗುಜ​ರಾತ್‌ ಜೈಂಟ್ಸ್‌ ವಿರುದ್ಧ 55 ರನ್‌ ಗೆಲುವು ಸಾಧಿ​ಸಿತು. 5 ಪಂದ್ಯ​ಗ​ಳಲ್ಲಿ 4ನೇ ಸೋಲು ಕಂಡ ಗುಜ​ರಾ​ತ್‌ 4ನೇ ಸ್ಥಾನ​ದಲ್ಲೇ ಉಳಿದುಕೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡವು ನಾಯಕಿ ಹರ್ಮ​ನ್‌​ಪ್ರೀತ್‌ ಕೌರ್‌(30 ಎಸೆ​ತ​ಗ​ಳಲ್ಲಿ 51) ಟೂರ್ನಿ​ಯ 3ನೇ ಅರ್ಧ​ಶ​ತ​ಕದ ನೆರ​ವಿ​ನಿಂದ 8 ವಿಕೆ​ಟ್‌ಗೆ 162 ರನ್‌ ಕಲೆ​ಹಾ​ಕಿತು. ಯಸ್ತಿಕಾ ಭಾಟಿಯಾ 44, ನ್ಯಾಥಲಿ ಸ್ಕೀವರ್‌ 36 ರನ್‌ ಕೊಡುಗೆ ನೀಡಿ​ದರು. ಆಶ್ಲೆ ಗಾಡ್ರ್ನರ್‌ 3 ವಿಕೆಟ್‌ ಕಿತ್ತರು. 

ಸ್ಪರ್ಧಾತ್ಮಕ ಗುರಿ ಬೆನ್ನ​ತ್ತಿದ ಗುಜ​ರಾತ್‌ 20 ಓವ​ರಲ್ಲಿ9 ವಿಕೆಟ್ ಕಳೆದುಕೊಂಡು 107 ರನ್‌ ಗಳಿಸಿ ಸೋಲೊ​ಪ್ಪಿ​ಕೊಂಡಿತು. ರನ್‌ ಖಾತೆ ತೆರೆ​ಯುವ ಮೊದಲೇ ವಿಕೆಟ್‌ ಕಳೆ​ದು​ಕೊಂಡ ಗುಜರಾತ್ ಜೈಂಟ್ಸ್‌ ತಂಡಕ್ಕೆ ಹರ್ಲೀನ್‌ ಡಿಯೋ​ಲ್‌​(22), ಮೇಘ​ನಾ​(16) ಅಲ್ಪ ಚೇತ​ರಿಕೆ ನೀಡಿ​ದರೂ ಇವ​ರಿ​ಬ್ಬರ ಬಳಿಕ ತಂಡ ಮತ್ತೆ ಸೋಲಿ​ನತ್ತ ಮುಖ​ಮಾ​ಡಿತು. ಸ್ನೇಹ ರಾಣಾ 20, ಸುಶ್ಮಾ ವರ್ಮಾ 14 ರನ್‌ ಗಳಿ​ಸಿ​ದರು. ಹೇಲಿ ಮ್ಯಾಥ್ಯೂಸ್‌, ಸ್ಕೀವರ್‌ ತಲಾ 3 ವಿಕೆಟ್‌ ಪಡೆ​ದ​ರು.

Scroll to load tweet…

WPL 2023 5 ಪಂದ್ಯ ಸೋತ ಆರ್‌ಸಿಬಿ ವುಮೆನ್ಸ್‌ಗಿದೆ ಪ್ಲೇ ಆಫ್ ಚಾನ್ಸ್, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ!

ಮುಂಬೈ ಇಂಡಿಯನ್ಸ್‌ ಪ್ಲೇ ಆಫ್‌ಗೆ ಲಗ್ಗೆ:

ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನವರಿಕೆಯಲ್ಲಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು, ಇದೀಗ ಮೊದಲ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಮುಂಬೈ ಇಂಡಿಯನ್ಸ್ ತಂಡವು ಆಡಿದ 5 ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿಯೇ ಮುಂದುವರೆದಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ 8 ಹಾಗೂ ಯುಪಿ ವಾರಿಯರ್ಸ್‌ 4 ಅಂಕಗಳೊಂದಿಗೆ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಕಾಯ್ದುಕೊಂಡಿವೆ.

ಇನ್ನುಳಿದಂತೆ ಗುಜರಾತ್ ಜೈಂಟ್ಸ್‌ ತಂಡವು ಆಡಿದ 5 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ 4 ಸೋಲುಗಳೊಂದಿಗೆ ಕೇವಲ 2 ಅಂಕಗಳ ಸಹಿತ ನಾಲ್ಕನೇ ಸ್ಥಾನದಲ್ಲೇ ಉಳಿದಿದ್ದರೇ, ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಆಡಿದ 5 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಇನ್ನೊಂದು ಸೋಲು, ತಂಡದ ಪ್ಲೇ ಆಫ್‌ ಕನಸು ಅಧಿಕೃತವಾಗಿ ಭಗ್ನವಾಗಲಿದೆ. 

ಸ್ಕೋರ್‌: ಮುಂಬೈ 20 ಓವ​ರಲ್ಲಿ 162/8 (ಹ​ರ್ಮನ್‌ 51, ಯಸ್ತಿಕಾ 44, ಗಾಡ್ರ್ನರ್‌ 3-34)
ಗುಜ​ರಾತ್‌ 20 ಓವ​ರಲ್ಲಿ 107/9 (ಹ​ರ್ಲಿನ್‌ 22, ಸ್ನೇಹ 20, ಸ್ಕೀವರ್‌ 3-21, ಹೇಲಿ 3-23)