Asianet Suvarna News Asianet Suvarna News

WPL 2023: ಚೊಚ್ಚಲ ಪ್ರಶಸ್ತಿಗಾಗಿಂದು ಮುಂಬೈ vs ಡೆಲ್ಲಿ ಫೈನಲ್ ಫೈಟ್

* ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್‌ಗೆ ಕ್ಷಣಗಣನೆ
* ಪ್ರಶಸ್ತಿಗಾಗಿ ಮುಂಬೈ ಇಂಡಿಯನ್ಸ್‌-ಡೆಲ್ಲಿ ಕ್ಯಾಪಿಟಲ್ಸ್ ಪೈಪೋಟಿ
* ಬಲಿಷ್ಠ ತಂಡಗಳ ನಡುವಿನ ಪೈಪೋಟಿಗೆ ಕೌಂಟ್‌ ಡೌನ್

WPL 2023 Harmanpreet Kaur led Mumbai Indians face Delhi Capitals in final kvn
Author
First Published Mar 26, 2023, 10:05 AM IST

ಮುಂಬೈ(ಮಾ.26): ಚೊಚ್ಚಲ ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಡ​ಬ್ಲ್ಯು​ಪಿ​ಎ​ಲ್‌) ಫೈನಲ್‌ ಹಣಾ​ಹ​ಣಿಗೆ ವೇದಿಕೆ ಸಜ್ಜು​ಗೊಂಡಿದ್ದು, ಪ್ರಶಸ್ತಿ​ಗಾಗಿ ಭಾನು​ವಾರ ಡೆಲ್ಲಿ ಕ್ಯಾಪಿ​ಟಲ್ಸ್‌ ಹಾಗೂ ಮುಂಬೈ ಇಂಡಿ​ಯನ್ಸ್‌ ತಂಡ​ಗಳು ಸೆಣ​ಸಾ​ಡ​ಲಿವೆ.

ಎರಡೂ ತಂಡ​ಗಳು ಟೂರ್ನಿ​ಯು​ದ್ದಕ್ಕೂ ಪ್ರಾಬಲ್ಯ ಸಾಧಿ​ಸಿದ್ದು, ಲೀಗ್‌ ಹಂತ​ದಲ್ಲಿ ಆಡಿದ 8 ಪಂದ್ಯ​ಗ​ಳಲ್ಲಿ ತಲಾ 6 ಗೆಲುವು ಸಾಧಿ​ಸಿ​ದ್ದವು.​ ಆ​ದರೆ ನೆಟ್‌ ರನ್‌ರೇಟ್‌ ಆಧಾ​ರ​ದಲ್ಲಿ ಡೆಲ್ಲಿ ಗುಂಪಿ​ನಲ್ಲಿ ಅಗ್ರ​ಸ್ಥಾ​ನಿ​ಯಾಗಿ ನೇರ​ವಾಗಿ ಫೈನಲ್‌ ಪ್ರವೇ​ಶಿ​ಸಿ​ದರೆ, 2ನೇ ಸ್ಥಾನ ಪಡೆದ ಮುಂಬೈ ಎಲಿ​ಮಿ​ನೇ​ಟ​ರ್‌ನಲ್ಲಿ ಯು.ಪಿ.​ವಾ​ರಿ​ಯರ್ಸ್‌ ತಂಡವನ್ನು ಸೋಲಿ​ಸಿ ಪ್ರಶಸ್ತಿ ಸುತ್ತಿ​ಗೇ​ರಿದೆ. ಲೀಗ್‌​ನಲ್ಲಿ ಡೆಲ್ಲಿ-ಮುಂಬೈ ಎರಡು ಬಾರಿ ಮುಖಾ​ಮುಖಿ​ಯಾ​ಗಿದ್ದು, ಇತ್ತಂಡ​ಗಳು ಒಂದೊಂದು ಗೆಲುವು ಕಂಡಿ​ವೆ.

ಪ್ಲೇ-ಆಫ್‌ ಪ್ರವೇ​ಶಿ​ಸಿದ ಮೊದಲ ತಂಡ ಎನಿ​ಸಿ​ಕೊಂಡಿದ್ದ ಮುಂಬೈಗೆ ನ್ಯಾಥಲಿ ಶೀವರ್‌, ಹೇಲಿ ಮ್ಯಾಥ್ಯೂಸ್‌ರ ಆಲ್ರೌಂಡ್‌ ಆಟ ಪ್ಲಸ್‌ ಪಾಯಿಂಟ್‌. ನಾಯಕಿ ಹರ್ಮ​ನ್‌​ಪ್ರೀತ್‌ ಕೌರ್, ಯಸ್ತಿಕಾ ಭಾಟಿ​ಯಾ ಬ್ಯಾಟಿಂಗ್‌ ಆಧಾರಸ್ತಂಭ​ ಎನಿ​ಸಿ​ಕೊಂಡಿ​ದ್ದರೂ ಇಬ್ಬರೂ ಸ್ಥಿರ ಪ್ರದರ್ಶನ ತೋರಿಲ್ಲ. ಇದು ತಂಡಕ್ಕೆ ಮುಳುವಾಗಬಹುದು. ಯುವ ಸ್ಪಿನ್ನರ್‌ ಸಾಯಿಕಾ ಇಸಾಖ್‌, ಅಮೇಲಿಯಾ ಕೆರ್‌, ಇಸ್ಸಿ ವೊಂಗ್‌ ಬೌಲಿಂಗ್‌​ನಲ್ಲಿ ಎದು​ರಾಳಿ ತಂಡಕ್ಕೆ ಮಾರ​ಕ​ವಾಗಿ ಪರಿ​ಣ​ಮಿ​ಸು​ತ್ತಿದ್ದು, ನಿರ್ಣಾ​ಯಕ ಪಂದ್ಯ​ದಲ್ಲೂ ತಂಡದ ಕೈ ಹಿಡಿ​ಯುವ ನಿರೀ​ಕ್ಷೆ​ಯ​ಲ್ಲಿ​ದ್ದಾ​ರೆ.

WPL 2023: ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿ ಹೊಸ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್‌ ಇಸ್ಸೆ ವಾಂಗ್‌..!

ಮತ್ತೊಂದೆಡೆ ಟೂರ್ನಿಯ ಗರಿಷ್ಠ ಸ್ಕೋರರ್‌ ಎನಿ​ಸಿ​ಕೊಂಡಿ​ರುವ ಮೆಗ್‌ ಲ್ಯಾನಿಂಗ್‌(310 ರನ್‌​) ಬ್ಯಾಟಿಂಗ್‌ ಜೊತೆ ನಾಯ​ಕ​ತ್ವದ ಅನು​ಭ​ವ​ದಲ್ಲೂ ಡೆಲ್ಲಿಗೆ ನೆರ​ವಾ​ಗು​ತ್ತಿದ್ದು, ಶಫಾಲಿ ವರ್ಮಾರ ಪ್ರದರ್ಶನ ಫೈನಲ್‌ನಲ್ಲಿ ಡೆಲ್ಲಿಗೆ ನಿರ್ಣಾಯಕ ಎನಿಸಿದೆ. ಬೌಲಿಂಗ್‌​ನಲ್ಲಿ ಶಿಖಾ ಪಾಂಡೆ, ಮಾರಿ​ಝಾನ್‌ ಕಾಪ್‌, ಜೊನಾ​ಸೆನ್‌ರನ್ನು ಡೆಲ್ಲಿ ಹೆಚ್ಚಾಗಿ ನೆಚ್ಚಿ​ಕೊಂಡಿದೆ.

ಮತ್ತೆ ಹರ್ಮನ್‌ಪ್ರೀತ್ ಕೌರ್‌ - ಮೆಗ್ ಲ್ಯಾನಿಂಗ್‌ ಫೈಟ್

ಭಾರ​ತದ ನಾಯಕಿ ಹರ್ಮನ್‌ ಹಾಗೂ ಆಸ್ಪ್ರೇ​ಲಿ​ಯಾದ ನಾಯ​ಕಿ​ ಲ್ಯಾನಿಂಗ್‌ ಮತ್ತೊಮ್ಮೆ ಮಹ​ತ್ವದ ಪಂದ್ಯ​ದಲ್ಲಿ ಮುಖಾ​ಮುಖಿ​ಯಾ​ಗಲಿದ್ದಾರೆ. ಇತ್ತೀ​ಚೆಗೆ ಮಹಿಳಾ ಟಿ20 ವಿಶ್ವ​ಕಪ್‌ ಸೆಮಿ​ಫೈ​ನಲ್‌, 2020ರ ಟಿ20 ವಿಶ್ವ​ಕಪ್‌ ಫೈನಲ್‌, ಕಳೆದ ವರ್ಷದ ಕಾಮ​ನ್‌​ವೆಲ್ತ್‌ ಗೇಮ್ಸ್‌ ಫೈನ​ಲ್‌​ನಲ್ಲೂ ಭಾರ​ತ-ಆಸೀಸ್‌ ತಂಡ​ಗ​ಳನ್ನು ಕ್ರಮ​ವಾಗಿ ಹರ್ಮ​ನ್‌ ಹಾಗೂ ಲ್ಯಾನಿಂಗ್‌ ಮುನ್ನ​ಡೆ​ಸಿ​ದ್ದ​ರು.

ಮೆಗ್ ಲ್ಯಾನಿಂಗ್‌ಗೆ ಮತ್ತೊಂದು ಪ್ರಶಸ್ತಿ ಗೆಲ್ಲುವ ಗುರಿ

ನಾಯಕತ್ವದಲ್ಲಿ ಅಪಾರ ಅನುಭವ ಹೊಂದಿರುವ ಲ್ಯಾನಿಂಗ್‌, ಆಸ್ಪ್ರೇಲಿಯಾಗೆ 4 ಟಿ20, 1 ಏಕದಿನ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದಾರೆ. ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್‌ ಟ್ರೋಫಿ ಗೆಲ್ಲುವ ಮೂಲಕ ಮತ್ತೊಂದು ಹಿರಿಮೆಗೆ ಪಾತ್ರರಾಗಲು ಎದುರು ನೋಡುತ್ತಿದ್ದಾರೆ.

ಸಂಭಾವ್ಯ ತಂಡಗಳು ಹೀಗಿವೆ

ಡೆಲ್ಲಿ ಕ್ಯಾಪಿಟಲ್ಸ್‌:

ಮೆಗ್‌ ಲ್ಯಾನಿಂಗ್(ನಾಯಕಿ), ಶಫಾಲಿ ವರ್ಮಾ, ಮಾರಿಝಾನ್ ಕ್ಯಾಪ್, ಜೆಮಿಯಾ ರೋಡ್ರಿಗ್ಸ್‌, ಎಲೈಸಿ ಕ್ಯಾಪ್ಸಿ, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ(ವಿಕೆಟ್ ಕೀಪರ್), ಮಿನ್ನು ಮಣಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನೊರಿಸ್.

ಮುಂಬೈ ಇಂಡಿಯನ್ಸ್‌:

ಹೀಲೆ ಮ್ಯಾಥ್ಯೂಸ್, ಯಸ್ತಿಕಾ ಭಾಟಿಯಾ(ವಿಕೆಟ್ ಕೀಪರ್), ನಥಾಲಿ ಶೀವರ್ ಬ್ರಂಟ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಅಮೆಲಿಯಾ ಕೆರ್ರ್, ಪೂಸ್ತಾ ವಸ್ತ್ರಾಕರ್, ಇಸ್ಸಿ ವೊಂಗ್, ಅಮನ್‌ಜೋತ್ ಕೌರ್, ಹುಮೈರಾ ಖಾಜಿ, ಜಿಂತಿಮಣಿ ಕಲಿತಾ, ಸಾಯಿಕಾ ಇಸಾಖ್.

ಪಂದ್ಯ: ಸಂಜೆ 7.30ಕ್ಕೆ
ನೇರ​ಪ್ರ​ಸಾರ: ಸ್ಪೋಟ್ಸ್‌ರ್‍ 18, ಜಿಯೋ ಸಿನಿ​ಮಾ

ಚಾಂಪಿಯನ್ ತಂಡಕ್ಕೆ 6 ಕೋಟಿ ಬಹುಮಾನ:  ಪ್ರಶಸ್ತಿ ಗೆಲ್ಲುವ ತಂಡ 6 ಕೋಟಿ ರು. ನಗದು ಬಹು​ಮಾನ ಪಡೆ​ಯ​ಲಿದ್ದು, ರನ್ನ​ರ್‌-ಅಪ್‌ ತಂಡ​ಕ್ಕೆ 3 ಕೋಟಿ ರು. ಬಹು​ಮಾನ ಸಿಗ​ಲಿದೆ.

Follow Us:
Download App:
  • android
  • ios