world test championship 2023 ಭಾರತ-ಆಸ್ಟ್ರೇಲಿಯಾ ತಂಡ, ಪಂದ್ಯದ ದಿನಾಂಕ, ಸಮಯ ವಿವರ!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐತಿಹಾಸಿಕ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಸತತ 2ನೇ ಬಾರಿ ಫೈನಲ್ ಪ್ರವೇಶಿರುವ ಭಾರತ, ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಇತ್ತ ಆಸ್ಟ್ರೇಲಿಯಾ ಮೊದಲ ಪ್ರಯತ್ನದಲ್ಲೇ ಇತಿಹಾಸ ರಚಿಸಲು ಸಜ್ಜಾಗಿದೆ. ಹಾಗಾದರೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಯಾವಾಗ? ಸಮಯ, ಉಭಯ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ವಿವರ ಇಲ್ಲಿದೆ.
ಲಂಡನ್(ಜೂ.04): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕೆಲ ದಿನಗಳು ಮಾತ್ರ. ಜೂನ್ 7 ರಂದು ಲಂಡನ್‌ನ ಓವಲ್ ಮೈದಾನದಲ್ಲಿ ಐತಿಹಾಸಿಕ ಟೆಸ್ಟ್ ವಿಶ್ವಚಾಂಪಿಯನ್‌ಶಿಪ್ ಪಂದ್ಯ ನಡೆಯಲಿದೆ. ಕಳೆದ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿತ್ತು. ಇದೀಗ ಸತತ 2ನೇ ಬಾರಿ ಫೈನಲ್ ಪ್ರವೇಶಿರುವ ಟೀಂ ಇಂಡಿಯಾ, ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.ಇತ್ತ ಆಸ್ಟ್ರೇಲಿಯಾ ತನ್ನ ಮೊದಲ ಪ್ರಯತ್ನದಲ್ಲೇ ಇತಿಹಾಸ ರಚಿಸಲು ಸಜ್ಜಾಗಿದೆ. ಉಭಯ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಇಶಾನ್ ಕಿಶನ್, ಎಸ್ ಭರತ್, ಆರ್ ಅಶ್ವಿನ್, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯದೇವ್ ಉನಾದ್ಕಟ್
BENGALURU CRIME: 82 ವರ್ಷದ ವೃದ್ಧೆ ಹತ್ಯೆ ಮಾಡಿದ ಪಾತಕಿಗಳನ್ನು ಪತ್ತೆ ಹಚ್ಚಲು ನೆರವಾದ ‘ಕಿಂಗ್ ಕೊಹ್ಲಿ’
ಮೀಸಲು ಆಟಗಾರರು-ಯಶಸ್ವಿ ಜೈಸ್ವಾಲ್, ಮುಕೇಶ್ ಕುಮಾರ್, ಸೂರ್ಯಕುಮಾರ್ ಯಾದವ್
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಆಸ್ಟ್ರೇಲಿಯಾ ತಂಡ
ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಮಾರ್ನಸ್ ಲಬುಶಾನೆ, ಪ್ಯಾಟ್ ಕಮಿನ್ಸ್(ನಾಯಕ), ಸ್ಕಾಟ್ ಬೊಲೆಂಡ್, ಜೋಶ್ ಹೇಜಲ್‌ವುಡ್, ನಥನ್ ಲಯನ್, ಮಿಚೆಲ್ ಸ್ಟಾರ್ಕ್, ಟೊಡ್ ಮುರ್ಫ್
ಮೀಸಲು ಆಟಗಾರರು-ಮಿಚೆಲ್ ಮಾರ್ಶ್, ಮ್ಯಾಟ್ ರೆನ್ಶಾ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಪಂದ್ಯ ಜೂನ್ 7ರಿಂದ ಆರಂಭಗೊಳ್ಳುತ್ತಿದೆ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿದೆ.5 ದಿನಗಳ ಟೆಸ್ಟ್ ಪಂದ್ಯದ ಕುತೂಹಲ ಈಗಲೇ ಹೆಚ್ಚಾಗಿದೆ.
ಐಶಾರಾಮಿ ಲ್ಯಾಂಬೋರ್ಗಿನಿ ಖರೀದಿಸಿದ ಸಚಿನ್ ತೆಂಡುಲ್ಕರ್..! ಕ್ರಿಕೆಟ್ ದೇವರ ಮನೆಗೆ ಹೊಸ ಅತಿಥಿ
2019-21ರ ಚೊಚ್ಚಲ ಆವೃತ್ತಿಯಂತೆಯೇ 2021-23ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಪ್ರಶಸ್ತಿ ವಿಜೇತ ತಂಡಕ್ಕೆ 1.6 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು 13.2 ಕೋಟಿ ರು.) ನಗದು ಬಹುಮಾನ ಸಿಗಲಿದೆ ಎಂದು ಐಸಿಸಿ ಶುಕ್ರವಾರ ತಿಳಿಸಿದೆ. ಜೂ.7ರಿಂದ ಭಾರತ ಹಾಗೂ ಆಸ್ಪ್ರೇಲಿಯಾ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ರನ್ನರ್-ಅಪ್ ತಂಡ 8 ಲಕ್ಷ ಅಮೆರಿಕನ್ ಡಾಲರ್(ಸುಮಾರು 6.6 ಕೋಟಿ ರು.) ಪಡೆದುಕೊಳ್ಳಲಿದೆ ಎಂದು ಐಸಿಸಿ ಮಾಹಿತಿ ನೀಡಿದೆ. 3ನೇ ಸ್ಥಾನಿಯಾಗಿರುವ ದಕ್ಷಿಣ ಆಫ್ರಿಕಾ 3.7 ಕೋಟಿ ರು. ಪಡೆಯಲಿದ್ದು, 4ನೇ ಸ್ಥಾನ ಪಡೆದಿರುವ ಇಂಗ್ಲೆಂಡ್ 2.8 ಕೋಟಿ ರು., 5ನೇ ಸ್ಥಾನಿ ಶ್ರೀಲಂಕಾ 1.6 ಕೋಟಿ ರು. ಪಡೆಯಲಿದೆ ಎಂದಿದೆ. ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ಇಂಡೀಸ್, ಬಾಂಗ್ಲಾದೇಶ ತಂಡಗಳಿಗೆ ಬಹುಮಾನದ ರೂಪದಲ್ಲಿ ತಲಾ 82 ಲಕ್ಷ ರು. ಸಿಗಲಿದೆ.
ಟೆಸ್ಟ್ ವಿಶ್ವಚಾಂಪಿಯನ್ ಫೈನಲ್ ಪಂದ್ಯದಲ್ಲಿ ಭಾರತ ನೂತನ ಪ್ರಾಯೋಜಕತ್ವದ ಜರ್ಸಿ ಹಾಕಿ ಕಣಕ್ಕಿಳಿಯಲಿದೆ. ಇತ್ತೀಚೆಗೆ ಬಿಸಿಸಿಐ ಅಡಿಡಾಸ್ ಸಂಸ್ಥೆಯ ಪ್ರಾಯೋಜಕತ್ವ ಹೊಂದಿರುವ ಭಾರತೀಯ ಕ್ರಿಕೆಟ್ ತಂಡದ ನೂತನ ಜೆರ್ಸಿಗಳನ್ನು ಅನಾವರಣ ಮಾಡಲಾಗಿದೆ.