Asianet Suvarna News Asianet Suvarna News

Bengaluru Crime: 82 ವರ್ಷದ ವೃದ್ಧೆ ಹತ್ಯೆ ಮಾಡಿದ ಪಾತಕಿಗಳನ್ನು ಪತ್ತೆ ಹಚ್ಚಲು ನೆರವಾದ ‘ಕಿಂಗ್ ಕೊಹ್ಲಿ’

ಆಟೋರಿಕ್ಷಾದ ಹಿಂಬದಿಯಲ್ಲಿರುವ ‘ಕಿಂಗ್ ಕೊಹ್ಲಿ’ ಎಂಬ ಪದಗಳು 82 ವರ್ಷದ ಮಹಿಳೆಯ ಹತ್ಯೆಯ ಹಿಂದಿನ ಅಪರಾಧಿಗಳನ್ನು ಪತ್ತೆಹಚ್ಚಲು ಬೆಂಗಳೂರು ಪೊಲೀಸರಿಗೆ ಸಹಾಯ ಮಾಡಿದೆ.

how king kohli helped police trace men who murdered 82 year old bengaluru women ash
Author
First Published Jun 4, 2023, 2:35 PM IST

ಬೆಂಗಳೂರು (ಜೂನ್‌ 4, 2023): ಬೆಂಗಳೂರಿನಲ್ಲಿ ಹಿರಿಯ ಮಹಿಳೆಯ ಕೊಲೆ ಪ್ರಕರಣವನ್ನು ಪತ್ತೆಹಚ್ಚಲು ಪೊಲೀಸರಿಗೆ ‘ಕಿಂಗ್ ಕೊಹ್ಲಿ’ ನೆರವಾಗಿದ್ದಾರೆ. ಅರೇ, ಆರ್‌ಸಿಬಿ ಹಾಗೂ ಭಾರತದ ಕ್ರಿಕೆಟಿಗ ಕಿಂಗ್ ಕೊಹ್ಲಿ ಅನ್ಕೊಂಡ್ರಾ. ಅಲ್ಲ, ಆಟೋರಿಕ್ಷಾದ ಹಿಂಬದಿಯಲ್ಲಿರುವ ‘ಕಿಂಗ್ ಕೊಹ್ಲಿ’ ಎಂಬ ಪದಗಳು!

ಹೌದು, ಆಟೋರಿಕ್ಷಾದ ಹಿಂಬದಿಯಲ್ಲಿರುವ ‘ಕಿಂಗ್ ಕೊಹ್ಲಿ’ ಎಂಬ ಪದಗಳು 82 ವರ್ಷದ ಮಹಿಳೆಯ ಹತ್ಯೆಯ ಹಿಂದಿನ ಅಪರಾಧಿಗಳನ್ನು ಪತ್ತೆಹಚ್ಚಲು ಬೆಂಗಳೂರು ಪೊಲೀಸರಿಗೆ ಸಹಾಯ ಮಾಡಿದೆ. ಆರೋಪಿಗಳು ಸಾಲ ಮರುಪಾವತಿ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಬೆಂಗಳೂರು: ಸಾಲ ತೀರಿಸಲು ಒಂಟಿ ವೃದ್ಧೆ ಹತ್ಯೆಗೈದ ಪ್ಲಂಬರ್‌...!

ಬೆಂಗಳೂರಿನ ಮಹಾಲಕ್ಷ್ಮೀಪುರಂ ನಿವಾಸಿ ಕಮಲಾ ಎನ್. ರಾವ್ ಅಲಿಯಾಸ್‌ ಕಮಲಮ್ಮ ಅವರ ಶವ ಈ ವಾರದ ಆರಂಭದಲ್ಲಿ ಅವರು ಒಂಟಿಯಾಗಿ ವಾಸಿಸುತ್ತಿದ್ದ ಅವರ ಮನೆಯಲ್ಲಿ ಪತ್ತೆಯಾಗಿತ್ತು, ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಬಾಯಿಯನ್ನು ಟೇಪ್‌ನಿಂದ ಮುಚ್ಚಲಾಗಿತ್ತು. ಮೇ 27 ರಂದು ಕೊಲೆ ನಡೆದಿದ್ದರೂ, ವಿಷಯ ಬೆಳಕಿಗೆ ಬಂದಿರುವುದು ತಡವಾಗಿ ಎಂದೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನು ಬೆಂಗಳೂರಿನ ಲಗ್ಗೆರೆಯ ಸಿದ್ದರಾಜು ಸಿ ಎಂ (34) ಮತ್ತು ಪ್ಲಂಬರ್ ಆರ್. ಅಶೋಕ್ (40) ಹಾಗೂ ಕಾಮಾಕ್ಷಿಪಾಳ್ಯದ ಸಿ ಅಂಜನಮೂರ್ತಿ (33) ಎಂದು ತನಿಖಾಧಿಕಾರಿಗಳು ಗುರುತಿಸಿದ್ದಾರೆ. ಶುಕ್ರವಾರ ಅವರನ್ನು ಬಂಧಿಸಲಾಗಿದೆ. ಸಾಲ ತೀರಿಸಲು ಆರೋಪಿಗಳು ಸಂಚು ರೂಪಿಸಿ ವೃದ್ಧೆಯನ್ನು ಕೊಂದಿದ್ದಾರೆ ಎಂದು ಡಿಸಿಪಿ (ಉತ್ತರ) ಶಿವಪ್ರಕಾಶ್ ದೇವರಾಜು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮ ಸಾಗಣೆ: ಸುಮಾರು 20 ಕೋಟಿ ಮೌಲ್ಯದ 32 ಕೆಜಿ ಚಿನ್ನ ವಶಕ್ಕೆ

ಪೊಲೀಸ್ ಮೂಲಗಳ ಪ್ರಕಾರ, ಅಶೋಕ್ ಅವರು ಕಮಲಾ ಅವರ ಮನೆಗೆ ಪ್ಲಂಬಿಂಗ್ ಕೆಲಸಕ್ಕಾಗಿ ಬಂದಿದ್ದರು ಮತ್ತು ವೃದ್ಧ ಮಹಿಳೆ ಒಬ್ಬಂಟಿಯಾಗಿ ವಾಸಿಸುತ್ತಿರುವುದನ್ನು ಗಮನಿಸಿದರು. ಅವರ ಪತಿ ಕಳೆದ ಅಕ್ಟೋಬರ್‌ನಲ್ಲಿ ನಿಧನರಾಗಿದ್ದರು. ಕೆಲ ದಿನಗಳ ಹಿಂದೆ ಬಾರ್‌ನಲ್ಲಿ ಇತರ ಆರೋಪಿಗೆ ಈ ವಿಷಯವನ್ನು ಆತ ಬಹಿರಂಗಪಡಿಸಿದ್ದಾನೆ. ನಂತರ, ಅವರ ಸಾಲವನ್ನು ತೀರಿಸಲು ವೃದ್ಧ ಮಹಿಳೆಯ ಚಿನ್ನಾಭರಣಗಳನ್ನು ದೋಚಲು ಸಿದ್ದರಾಜು ಒಪ್ಪಿಕೊಂಡರು.

ಮೇ 27 ರಂದು ಬೆಳಗ್ಗೆ ಆರೋಪಿಗಳು ಅಂಜನಾಮೂರ್ತಿ ಅವರ ಆಟೋರಿಕ್ಷಾದ ನೋಂದಣಿ ಫಲಕವನ್ನು ತೆಗೆದು - ಅದರ ಹಿಂಭಾಗದಲ್ಲಿ 'ಕಿಂಗ್ ಕೊಹ್ಲಿ' ಎಂದು ಬರೆದಿದ್ದರು - ಮತ್ತು ಅದನ್ನು ಬಳಸಿಕೊಂಡು ಕಮಲಾ ಅವರ ಮನೆಗೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂದು ಸಂಜೆ, ಆಕೆಯ ಗ್ಯಾರೇಜ್‌ನಲ್ಲಿ ಜಾಗವನ್ನು ಬಾಡಿಗೆಗೆ ನೀಡಬಹುದೇ ಎಂದು ಕೇಳುವ ನೆಪದಲ್ಲಿ ಸಂತ್ರಸ್ತೆಯ ಮನೆಗೆ ಮತ್ತೊಂದು ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಾರೆ ಎಂದೂ ವರದಿಯಾಗಿದೆ.

ಇದನ್ನೂ ಓದಿ: Bengaluru Crime: ಪತ್ನಿಗೆ ಎಸ್‌ಐನಿಂದ ಜಾತಿ ನಿಂದನೆ, ಕಿರುಕುಳ ಆರೋಪ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಒಮ್ಮೆ ಮನೆಗೆ ಪ್ರವೇಶಿಸಿದ ಆರೋಪಿಗಳು ಕಮಲಾ ಅವರ ಕಾಲು ಮತ್ತು ಕೈಗಳನ್ನು ಕಟ್ಟಿ, ಆಕೆಯ ಬಾಯಿಯನ್ನು ಟೇಪ್‌ನಿಂದ ಮುಚ್ಚಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಅಶೋಕ್ ನಿವಾಸದ ಹೊರಗೆ ಕಾವಲು ನಿಂತಿದ್ದ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳ ಚಲನವಲನ ಸೆರೆಯಾದ ನಂತರ ತನಿಖಾಧಿಕಾರಿಗಳು ಆರೋಪಿಗಳ ಜಾಡು ಹಿಡಿದಿದ್ದಾರೆ. “ನಾವು ಕಮಲಾ ಅವರ ನಿವಾಸದ ಬಳಿ ಸಿಸಿ ಕ್ಯಾಮೆರಾ ದೃಶ್ಯಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಬೆಳಗ್ಗೆ ಅದೇ ರಸ್ತೆಯಲ್ಲಿ ಆಟೋರಿಕ್ಷಾ ಹಲವಾರು ಸುತ್ತುಗಳನ್ನು ಹಾಕಿರುವುದನ್ನು ಗಮನಿಸಿದ್ದೇವೆ. ಆಟೋಕ್ಷಾದಲ್ಲಿ ‘ಕಿಂಗ್ ಕೊಹ್ಲಿ’ ಎಂದು ಬರೆದಿದ್ದು, ನೋಂದಣಿ ಸಂಖ್ಯೆ ಇಲ್ಲ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ನಾವು ನಂತರ ಬೆಳಗ್ಗೆ ಅದರ ಚಲನವಲನಗಳನ್ನು ಅನುಸರಿಸಿದ್ದೇವೆ ಮತ್ತು ಸಿಸಿಟಿವಿ ಫೂಟೇಜ್ ಅಂಜನಮೂರ್ತಿ ವಾಹನದ ನಂಬರ್ ಪ್ಲೇಟ್ ಅನ್ನು ತೆಗೆದುಹಾಕುವುದನ್ನು ತೋರಿಸಿದೆ. ಶೀಘ್ರದಲ್ಲೇ, ನಾವು ಆಟೋರಿಕ್ಷಾದ ನೋಂದಣಿ ಸಂಖ್ಯೆಯನ್ನು ಕಂಡುಕೊಂಡಿದ್ದೇವೆ ಮತ್ತು ಅದರ ಆಧಾರದ ಮೇಲೆ ಬಂಧಿಸಲಾಯಿತು. ‘ಕಿಂಗ್ ಕೊಹ್ಲಿ’ ಎಂಬ ಪದಗಳು ನಮಗೆ ವಾಹನವನ್ನು ಪತ್ತೆ ಹಚ್ಚಲು ಸಹಾಯ ಮಾಡಿತು’’ ಎಂದೂ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಅರೇಬಿಕ್‌ ಶಾಲೆಯಲ್ಲಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್‌: 6 ತಿಂಗಳ ಮೊದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ವಿದ್ಯಾರ್ಥಿನಿ!

ನಂತರ ಪೊಲೀಸರು ಮೈಸೂರಿನಲ್ಲಿದ್ದ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಅಶೋಕ್ ಐಪಿಎಲ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದು, ಕೆಲವು ಸಾಲಗಳನ್ನು ಹೊಂದಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಸಹೋದರಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನ ಮೇಲೆ ಚಾಕು ಹಾಕಿದ ಯುವಕ

Follow Us:
Download App:
  • android
  • ios