ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೂರನೇ ದಿನವೂ ಆಸ್ಟ್ರೇಲಿಯಾ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾವನ್ನು 296 ರನ್‌ಳಿಗೆ ಕಟ್ಟಿ ಹಾಕಿದ ಆಸ್ಟ್ರೇಲಿಯಾ 173 ರನ್ ಮುನ್ನಡೆ ಪಡೆದುಕೊಂಡಿದೆ.

ಓವಲ್(ಜೂ.09) ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೂರನೇ ದಿನವೂ ಆಸ್ಟ್ರೇಲಿಯಾ ತನ್ನ ಬಿಗಿ ಹಿಡಿತ ಮುಂದುವರಿಸಿದೆ. ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಅಂತ್ಯಗೊಳಿಸಿದೆ. ಆಸ್ಟ್ರೇಲಿಯಾ ದಾಳಿಗೆ ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ದಿಟ್ಟ ಹೋರಾಟ ನಡೆಸಿದರೆ, ಇನ್ನುಳಿದವರಿಗೆ ರನ್ ಹರಿದು ಬರಲಿಲ್ಲ. ಇತ್ತ ವಿಕೆಟ್ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 296 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ 173 ರನ್ ಭಾರಿ ಹಿನ್ನಡೆ ಅನುಭಿವಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ದಿಟ್ಟ ಹೋರಾಟ ನೀಡಿತು. ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ನಿಂದ ಹಿನ್ನಡೆ ಅಂತರ ಕಡಿಮೆಯಾಯಿತು. ಅಜಿಂಕ್ಯ ರಹಾನೆ 89 ರನ್ ಕಾಣಿಕೆ ನೀಡಿದರು. ರಹಾನೆ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಫೈನಲ್ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಹೋರಾಟ ಆರಂಭಿಸಿತು. ಕಾರಣ ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳಾದ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ ನಿರೀಕ್ಷಿತ ರನ್ ಸಿಡಿಸಲಿಲ್ಲ. ರಹಾನೆ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ಭಾರತ ತಿರುಗೇಟು ನೀಡಲು ಆರಂಭಿಸಿತು.

WTC Final: ಟ್ರೋಲ್‌ ಮಾಡುವವರ ಬಾಯಿ ಮುಚ್ಚಿಸಿದ ವಿರಾಟ್‌ ಕೊಹ್ಲಿ..!

ರವೀಂದ್ರ ಜಡೇಜಾ 48 ರನ್ ಕಾಣಿಕೆ ನೀಡಿದರು. ರಹಾನೆ ಹಾಗೂ ಜಡೇಜಾ ಜೊತೆಯಾಟದಿಂದ ಭಾರತ ಮತ್ತಷ್ಟು ಪುಟಿದೆದ್ದಿತು. ಜಡೇಜಾ ವಿಕೆಟ್ ಪತನ ಬಳಿಕ ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಜೊತೆಯಾಟ ಕೆಲ ದಾಖಲೆಯನ್ನು ಬರೆಯಿತು ಶಾರ್ದೂಲ್ ಠಾಕೂರ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇಂಗ್ಲೆಂಡ್‌ ನೆಲದಲ್ಲಿ ಪ್ರವಾಸಿ ಬ್ಯಾಟ್ಸ್‌ಮನ್ ಗರಿಷ್ಠ ಸತತ ಅರ್ಧಶತಕ ಸಿಡಿಸಿದ 3ನೇ ಪ್ರವಾಸಿ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಠಾಕೂರ್ ಪಾತ್ರರಾದರು,

ಇಂಗ್ಲೆಂಡ್ ನೆಲದಲ್ಲಿ ಗರಿಷ್ಠ ಹಾಗೂ ಸತತ 50 ಪ್ಲಸ್ ಸ್ಕೋರ್ ಮಾಡಿದ ಪ್ರವಾಸಿ ಬ್ಯಾಟ್ಸ್‌ಮನ್(ಟೆಸ್ಟ್)
3(50 ಪ್ಲಸ್ ಸ್ಕೋರ್) - ಸನ್ ಡಾನ್ ಬ್ರಾಡ್‌ಮನ್ (1930-1934)
3(50 ಪ್ಲಸ್ ಸ್ಕೋರ್) - ಅಲನ್ ಬಾರ್ಡರ್ (1985-1989)
3(50 ಪ್ಲಸ್ ಸ್ಕೋರ್) - ಶಾರ್ದೂಲ್ ಠಾಕೂರ್ (2021-2023)

2 ಮಕ್ಕಳ ತಾಯಿಯನ್ನು ಮದುವೆಯಾದ ಟೀಂ ಇಂಡಿಯಾ ಕ್ರಿಕೆಟಿಗ..! ಈಗ ತನ್ನ ಮಗನ ನೋಡಲು ಪರದಾಟ

ಇಂಗ್ಲೆಂಡ್ ನೆಲದಲ್ಲಿ ಭಾರತ ತಂಡದ 7 ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಶತಕದ ಜೊತೆಯಾಟ 
160* ರನ್ - ಸಚಿನ್ ತೆಂಡೂಲ್ಕರ್, ಮನೋಜ್ ಪ್ರಭಾಕರ್ vs ಇಂಗ್ಲೆಂಡ್, 1990
126ರನ್ - ವಿವಿಎಸ್ ಲಕ್ಷ್ಮ್, ಅಜಿತ್ ಅಗರ್ಕರ್ vs ಇಂಗ್ಲೆಂಡ್, 2002
111ರನ್ - ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ vs ಇಂಗ್ಲೆಂಡ್, 2014
110 ರನ್- ಕಪಿಲ್ ದೇವ್, ರವಿ ಶಾಸ್ತ್ರಿ vs ಇಂಗ್ಲೆಂಡ್, 1990
109ರನ್ - ಅಜಿಂಕ್ಯ ರಹಾನೆ, ಶಾರ್ದೂಲ್ ಠಾಕೂರ್ vs ಆಸ್ಟ್ರೇಲಿಯಾ, 2023
100 ರನ್- ರಿಷಬ್ ಪಂತ್, ಶಾರ್ದೂಲ್ ಠಾಕೂರ್ vs ಇಂಗ್ಲೆಂಜ್, 2021