Asianet Suvarna News Asianet Suvarna News

ಪವರ್‌ ಪ್ಲೇನಲ್ಲಿ 113 ರನ್‌ ಸಿಡಿಸಿ ಆಸ್ಟ್ರೇಲಿಯಾ ಟಿ20 ವಿಶ್ವ ದಾಖಲೆ!

ಆಸ್ಟ್ರೇಲಿಯಾ ತಂಡವು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪವರ್‌ ಪ್ಲೇನಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಬರೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

World Record for T20Is Australia smash highest Powerplay score against Scotland kvn
Author
First Published Sep 5, 2024, 12:51 PM IST | Last Updated Sep 5, 2024, 12:51 PM IST

ಎಡಿನ್‌ಬರ್ಗ್: ಸ್ಕಾಟ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಶ್ವ ದಾಖಲೆ ಬರೆದಿದೆ. ಪವರ್‌-ಪ್ಲೇನಲ್ಲಿ 113 ರನ್‌ ಕಲೆಹಾಕುವ ಮೂಲಕ, ಅಂತಾರಾಷ್ಟ್ರೀಯ ಟಿ20ಯಲ್ಲಿ ಪವರ್‌-ಪ್ಲೇನಲ್ಲಿ ಅತಿಹೆಚ್ಚು ರನ್‌ ಗಳಿಸಿದ ತಂಡ ಎನ್ನುವ ದಾಖಲೆಯನ್ನು ಬರೆಯಿತು. 

ಮೊದಲು ಬ್ಯಾಟ್‌ ಮಾಡಿದ ಸ್ಕಾಟ್ಲೆಂಡ್‌ 20 ಓವರಲ್ಲಿ 9 ವಿಕೆಟ್‌ಗೆ 154 ರನ್‌ ಕಲೆಹಾಕಿತು. ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಕೇವಲ 9.4 ಓವರಲ್ಲಿ ಗೆಲುವಿನ ನಗೆ ಬೀರಿತು. ಟ್ರ್ಯಾವಿಸ್‌ ಹೆಡ್‌ ಕೇವಲ 25 ಎಸೆತದಲ್ಲಿ 12 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 80 ರನ್‌ ಸಿಡಿಸಿದರು. ಮಿಚೆಲ್‌ ಮಾರ್ಷ್‌ 12 ಎಸೆತದಲ್ಲಿ 39 ರನ್‌ ಚಚ್ಚಿದರೆ, ಜೋಶ್‌ ಇಂಗ್ಲಿಸ್‌ 13 ಎಸೆತದಲ್ಲಿ ಔಟಾಗದೆ 27 ರನ್ ಬಾರಿಸಿದರು.

ರಾಜಸ್ಥಾನ ರಾಯಲ್ಸ್‌ಗೆ ಐಪಿಎಲ್‌ ಟ್ರೋಫಿ ಗೆಲ್ಲಿಸಲು ರಾಹುಲ್ ದ್ರಾವಿಡ್ ಸಜ್ಜು..! ಹೆಡ್‌ಕೋಚ್ ಮೇಲೆ ಸಾಕಷ್ಟು ನಿರೀಕ್ಷೆ

ಆಸ್ಟ್ರೇಲಿಯಾ ಸತತ 14 ಎಸೆತಗಳಲ್ಲಿ ಬೌಂಡರಿ, ಸಿಕ್ಸರ್‌ ಸಿಡಿಸಿ ದಾಖಲೆ ಬರೆಯಿತು. 4ನೇ ಓವರ್‌ನ ಕೊನೆ 2 ಎಸೆತ, 5 ಹಾಗೂ 6ನೇ ಓವರ್‌ನ ಎಲ್ಲಾ ಎಸೆತಗಳು ಬೌಂಡರಿ ಗೆರೆ ದಾಟಿದವು. 14 ಎಸೆತಗಳಲ್ಲೇ ಆಸೀಸ್‌ 66 ರನ್‌ ಕಲೆಹಾಕಿತು.

ಪುರುಷರ ಅಂ.ರಾ.ಟಿ20 ಪವರ್‌-ಪ್ಲೇನಲ್ಲಿ ಗರಿಷ್ಠ ರನ್‌

ರನ್‌ ತಂಡ ವಿರುದ್ಧ ವರ್ಷ

113/1 ಆಸ್ಟ್ರೇಲಿಯಾ ಸ್ಕಾಟ್ಲೆಂಡ್‌ 2024

102/0 ದ.ಆಫ್ರಿಕಾ ವಿಂಡೀಸ್‌ 2023

98/4 ವಿಂಡೀಸ್‌ ಶ್ರೀಲಂಕಾ 2021

93/0 ಐರ್ಲೆಂಡ್‌ ವಿಂಡೀಸ್‌ 2020

92/1 ವಿಂಡೀಸ್‌ ಆಫ್ಘನ್‌ 2024

ಇಂದಿನಿಂದ ದುಲೀಪ್ ಟ್ರೋಫಿ

ಬೆಂಗಳೂರು: 2024-25ರ ದೇಸಿ ಕ್ರಿಕೆಟ್ ಋತುವಿಗೆ ಗುರುವಾರ ದುಲೀಪ್ ಟ್ರೋಫಿ ಪ್ರಥಮದರ್ಜೆಟೂರ್ನಿಯ ಆರಂಭದೊಂದಿಗೆ ಚಾಲನೆ ದೊರೆಯಲಿದೆ. ಟೂರ್ನಿಯಲ್ಲಿ 4 ತಂಡಗಳು ಸೆಣಸಲಿದ್ದು, ಮೊದಲ ಸುತ್ತಿನ ಪಂದ್ಯಗಳು ಗುರುವಾರ ಆರಂಭಗೊಳ್ಳಲಿವೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ 'ಎ' ಹಾಗೂ ಭಾರತ 'ಬಿ' ತಂಡಗಳು ಸೆಣಸಲಿದ್ದು, ಭಾರತ 'ಸಿ' ಹಾಗೂ ಭಾರತ 'ಡಿ' ತಂಡಗಳ ನಡುವಿನ ಪಂದ್ಯಕ್ಕೆ ಅನಂತಪುರ ಆತಿಥ್ಯ ವಹಿಸಲಿದೆ. ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಕೆ.ಎಲ್.ರಾಹುಲ್, ಕುಲೀಪ್ ಯಾದವ್‌ ಸೇರಿ ಅನೇಕ ತಾರಾ ಆಟಗಾರರು ಕಣಕ್ಕಿಳಿಯಲಿದ್ದಾರೆ. ಆದರೆ ಇಶಾನ್ ಕಿಶನ್, ಪ್ರಸಿದ್ಧ ಕೃಷ್ಣ ಮೊದಲ ಸುತ್ತಿನ ಪಂದ್ಯಕ್ಕೆ ಗೈರಾಗುವುದು ಬಹುತೇಕ ಖಚಿತವೆನಿಸಿದೆ.

ಫುಟ್ಬಾಲ್‌ನಂತೆ ಕ್ರಿಕೆಟ್‌ನಲ್ಲೂ ಇದೆ ರೆಡ್ ಕಾರ್ಡ್ ಬಳಕೆ..! ಯಾವ ಕಾರಣಕ್ಕೆ ಬಳಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಭಾರತ 'ಎ' ತಂಡವನ್ನು ಶುಭ್ ಗಿಲ್ ಮುನ್ನಡೆಸಲಿದ್ದು, 'ಬಿ' ತಂಡಕ್ಕೆ ಅಭಿಮನ್ಯು ಈಶ್ವರನ್ ನಾಯಕರಾಗಿರಲಿದ್ದಾರೆ. ಭಾರತ ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದು, 'ಡಿ' ತಂಡ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಆಡಲಿದೆ.
 

Latest Videos
Follow Us:
Download App:
  • android
  • ios