Red Card In Cricket ಫುಟ್ಬಾಲ್, ಹಾಕಿ ಕ್ರೀಡೆಗಳಲ್ಲಿ ಬಳಕೆಯಾಗುವ ರೆಡ್ ಕಾರ್ಡ್ ಒಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಬಳಕೆಯಾಗಿದೆ. ಯಾಕಾಗಿ ಈ ರೆಡ್ ಕಾರ್ಡ್ ಬಳಸಲಾಯಿತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಬೆಂಗಳೂರು: Red Card In Cricket ನೀವು ಫುಟ್ಬಾಲ್ ಅಥವಾ ಹಾಕಿ ಕ್ರೀಡೆಯ ಅಭಿಮಾನಿಗಳಾಗಿದ್ದರೇ ಅಂಪೈರ್‌ಗಳು ರೆಡ್ ಕಾರ್ಡ್ ಬಳಸುವುದನ್ನು ನೋಡಿರುತ್ತೀರಿ. ಮೈದಾನದಲ್ಲಿ ಆಟಗಾರರು ಎದುರಾಳಿಗೆ ಗಂಭೀರವಾಗಿ ಗಾಯಗೊಳಿಸುವಂತ ಆಟವನ್ನು ಪ್ರದರ್ಶಿಸಿದರೆ ಅಥವಾ ಗಂಭೀರ ಅಪರಾಧ ಮಾಡಿದರೆ, ಕಠಿಣ ಶಿಕ್ಷೆಯ ರೂಪದಲ್ಲಿ ಮ್ಯಾಚ್ ರೆಫ್ರಿ ರೆಡ್ ಕಾರ್ಡ್ ಬಳಸುವ ಮೂಲಕ ಅಂತಹ ಆಟಗಾರರನ್ನು ಮೈದಾನದಾಚೆಗೆ ಕಳಿಸುತ್ತಾರೆ. ಆದರೆ ನಿಮಗೆ ಗೊತ್ತಿರಲಿ, ಫುಟ್ಬಾಲ್, ಹಾಕಿಯಲ್ಲಿ ಬಳಸಿದಂತೆ ಒಮ್ಮೆ ಕ್ರಿಕೆಟ್‌ನಲ್ಲಿಯೂ ರೆಡ್ ಕಾರ್ಡ್ ಬಳಸಲಾಗಿದೆ. ಹೌದು, 2005ರಲ್ಲಿ ನ್ಯೂಜಿಲೆಂಡ್ ಮೂಲದ ಅಂಪೈರ್ ಬಿಲಿ ಬೌಡೆನ್, ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೆನ್ ಮೆಗ್ರಾಥ್‌ಗೆ ರೆಡ್ ಕಾರ್ಡ್ ತೋರಿಸಿದ್ದರು.
ಮೆಗ್ರಾಥ್ ಮಾಡಿದ ಅಪರಾಧವೇನು..?
2005ರ ಫೆಬ್ರವರಿ 17ರಂದು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಿದ್ದವು. ಇದು ಕ್ರಿಕೆಟ್ ಇತಿಹಾಸದಲ್ಲಿ ನಡೆದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಗಿತ್ತು. ಈ ಪಂದ್ಯದಲ್ಲಿ ಟ್ರೇವರ್ ಚಾಪೆಲ್ ಥರ ಗ್ಲೆನ್ ಮೆಗ್ರಾಥ್ ಕೂಡಾ ಅಂಡರ್ ಆರ್ಮ್ ಬೌಲಿಂಗ್ ಮಾಡುವ ಯತ್ನ ನಡೆಸಿದರು. ಆಗ ಆನ್‌ಫೀಲ್ಡ್ ಅಂಪೈರ್ ಆಗಿದ್ದ ಬಿಲಿ ಬೌಡೆನ್ ತಡ ಮಾಡದೇ ಜೇಬಿನಲ್ಲಿದ್ದ ರೆಡ್ ಕಾರ್ಡ್ ತೆಗೆದು ಗ್ಲೆನ್ ಮೆಗ್ರಾಥ್‌ಗೆ ತೋರಿಸಿದರು. ಈ ಪಂದ್ಯವು ಒಂದು ರೀತಿ ಟಿ20 ಕ್ರಿಕೆಟ್‌ನ ಪ್ರದರ್ಶನ ಪಂದ್ಯದ ರೀತಿಯಲ್ಲಿತ್ತು. ಈ ಪಂದ್ಯದಲ್ಲಿ ಆಟಗಾರರಿಂದ ಹಿಡಿದು ಪ್ರೇಕ್ಷಕರವರೆಗೂ ಬಿಂದಾಸ್ ಎಂಜಾಯ್ ಮಾಡಿದರು.
ಹೀಗಿತ್ತು ನೋಡಿ ಆ ವಿಡಿಯೋ:
"ಧೋನಿ ಕನ್ನಡಿಯಲ್ಲೊಮ್ಮೆ ತಮ್ಮ ಮುಖ ನೋಡಿಕೊಳ್ಳಲಿ": ಮತ್ತೆ ಮಹಿ ಮೇಲೆ ಕೆಂಡಕಾರಿದ ಯುವಿ ಅಪ್ಪ ಯೋಗರಾಜ್!
98 ರನ್ ಚಚ್ಚಿದ್ದ ರಿಕಿ ಪಾಂಟಿಂಗ್:
ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಟಾಸ್ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರಿಕಿ ಪಾಂಟಿಂಗ್ ಕೇವಲ 55 ಎಸೆತಗಳಲ್ಲಿ 98 ರನ್ ಸಿಡಿಸಿದರು. ಪರಿಣಾಮ ಕಾಂಗರೂ ಪಡೆ 214 ರನ್ ಕಲೆಹಾಕಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು 170 ರನ್ ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲೆಂಡ್ ತಂಡದ ಪರ ಸ್ಕಾಟ್ ಸ್ಟೈರೀಸ್ 33 ಎಸೆತಗಳಲ್ಲಿ 66 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಇದೆಂಥಾ ಕ್ರಿಕೆಟ್..! ಕೇವಲ 10 ಎಸೆತದಲ್ಲೇ ಟಿ20 ಪಂದ್ಯ ಫಿನಿಶ್, ಇತಿಹಾಸ ನಿರ್ಮಿಸಿದ ಭಾರತೀಯ ಮೂಲದ ಬೌಲರ್..!
ಟ್ರೇವರ್ ಚಾಪೆಲ್ ಅಂಡರ್ ಆರ್ಮ್ ಮಾಡಿದ್ದು ಗೊತ್ತಾ..?
ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯದ ಕೊನೆಯ ಓವರ್ ಮಾಡುವ ಜವಾಬ್ದಾರಿಯನ್ನು ಆಸೀಸ್ ಅನುಭವಿ ವೇಗಿ ಗ್ಲೆನ್ ಮೆಗ್ರಾಥ್ ವಹಿಸಿಕೊಂಡರು. ಗ್ಲೆನ್ ಮೆಗ್ರಾಥ್ ಎಸೆಯಬೇಕಿದ್ದ ಕೊನೆಯ ಎಸೆತದಲ್ಲಿ ಕಿವೀಸ್ ತಂಡವು ಗೆಲ್ಲಲು 45 ರನ್‌ಗಳ ಅಸಾಧ್ಯ ಗುರಿ ಮುಂದಿತ್ತು. ಈ ಸಮಯದಲ್ಲಿ ಮೆಗ್ರಾಥ್ ಕ್ರೀಸ್ ಬಳಿ ನಿಂತು 1980-81ರಲ್ಲಿ ನಡೆದ ಘಟನೆಯನ್ನು ನೆನಪಿಸುವಂತೆ ಅಂಡರ್ ಆರ್ಮ್ ಬೌಲಿಂಗ್ ಮಾಡಲು ಮುಂದಾದರು. 1980-81ರಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಸರಣಿಯ ವೇಳೆಯಲ್ಲಿ ಆಸೀಸ್ ತಂಡದ ನಾಯಕ ಹಾಗೂ ಸಹೋದರಾಗಿದ್ದ ಗ್ರೆಗ್ ಚಾಪೆಲ್ ಸಲಹೆ ಮೇರೆಗೆ ಟ್ರೇವರ್ ಚಾಪೆಲ್, ಅಂಡರ್ ಆರ್ಮ್ ಬೌಲಿಂಗ್ ಮಾಡಿದ್ದರು. ಆಗ ಕಿವೀಸ್‌ಗೆ ಕೊನೆಯ ಎಸೆತದಲ್ಲಿ 6 ರನ್ ಅಗತ್ಯವಿತ್ತು. ಈ ಅಂಡರ್ ಆರ್ಮ್ ಎಸೆತ ಆ ಕಾಲದಲ್ಲಿ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
