Asianet Suvarna News Asianet Suvarna News

World Cup 2023 Final: ವಿಶ್ವಕಪ್‌ ಇತಿಹಾಸದಲ್ಲಿ ಹಿಂದೆಂದೂ ಮಾಡದ ದಾಖಲೆ ನಿರ್ಮಿಸಿದ ಕೊಹ್ಲಿ!

ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 54 ರನ್‌ ಗಳಿಸುವುದರೊಂದಿಗೆ ವಿಶ್ವಕಪ್‌ ಇತಿಹಾಸದಲ್ಲಿ ಹಿಂದೆಂದೂ ಮಾಡದ ದಾಖಲೆಯನ್ನು ವಿರಾಟ್‌ ಕೊಹ್ಲಿ ನಿರ್ಮಾಣ ಮಾಡಿದ್ದಾರೆ.
 

World Cup 2023 Final Team India Virat Kohli Scores 765 runs in 11 match all time Record san
Author
First Published Nov 19, 2023, 5:03 PM IST

ಬೆಂಗಳೂರು (ನ.19): ಒಂದೇ ಆವೃತ್ತಿಯ ಐಪಿಎಲ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ದಾಖಲೆ ಇಂದಿಗೂ ವಿರಾಟ್‌ ಕೊಹ್ಲಿ ಹೆಸರಲ್ಲಿದೆ. ಈಗ ವಿಶ್ವಕಪ್‌ ಟೂರ್ನಿಯಲ್ಲೂ ವಿರಾಟ್‌ ಕೊಹ್ಲಿ ಈ ಅಪರೂಪದ ದಾಖಲೆಯನ್ನು ಮಾಡಿದ್ದಾರೆ. ಈ ಹಿಂದೆ ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ದಾಖಲೆ ಸಚಿನ್‌ ತೆಂಡುಲ್ಕರ್‌ ಅವರ ಹೆಸರಲ್ಲಿತ್ತು. 2003ರ ವಿಶ್ವಕಪ್‌ನಲ್ಲಿ ಅಡಿದ 11 ಪಂದ್ಯಗಳಿಂದ 673 ರನ್‌ ಬಾರಿಸಿದ್ದು ಹಿಂದಿನ ದಾಖಲೆಯಾಗಿತ್ತು. ಸೆಮಿಫೈನಲ್‌ ಪಂದ್ಯದ ವೇಳೆಯಲ್ಲಿಯೇ ವಿರಾಟ್‌ ಕೊಹ್ಲಿ ಈ ದಾಖಲೆ ಮುರಿದಿದ್ದರು. ಈಗ ಕೊಹ್ಲಿ 11 ಪಂದ್ಯಗಳಿಂದ 765 ರನ್‌ಗಳ ವಿಶ್ವ ಹಾಗೂ ವಿಶ್ವಕಪ್‌ ದಾಖಲೆಯೊಂದಿಗೆ ಈ ಬಾರಿಯ ವಿಶ್ವಕಪ್‌ ಟೂರ್ನಿಯನ್ನು ಮುಗಿಸಿದ್ದಾರೆ. ಈ ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಮೂರು ಶತಕ ಹಾಗೂ ಆರು ಅರ್ಧಶತಕ ಸಾಧನೆ ಮಾಡಿದ್ದಾರೆ.  ಅದರೊಂದಿಗೆ 48 ವರ್ಷದ ವಿಶ್ವಕಪ್‌ ಇತಿಹಾಸದಲ್ಲಿ ಸೆಮಿಫೈನಲ್‌ ಹಾಗೂ ಫೈನಲ್‌ ಎರಡರಲ್ಲೂ 50 ಪ್ಲಸ್‌ ರನ್‌ ಬಾರಿಸಿದ ಮೊತ್ತಮೊದಲ ಕ್ರಿಕೆಟಿಗ ಎನ್ನುವ ಶ್ರೇಯಕ್ಕೂ ಅವರು ಪಾತ್ರರಾಗಿದ್ದಾರೆ.

ಇಲ್ಲೊಂದು ಅಚ್ಚರಿಯ ಅಂಶವೂ ಇದೆ. 2016ರ ಐಪಿಎಲ್‌ನಲ್ಲಿ ವಿರಾಟ್‌ಕೊಹ್ಲಿ ಇಡೀ ಋತುವಿನಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿದ್ದರು. ಆ ಟೂರ್ನಿಯ ಫೈನಲ್‌ನಲ್ಲೂ ವಿರಾಟ್‌ ಕೊಹ್ಲಿ 54 ರನ್‌ಗೆ ಔಟ್‌ ಆಗಿದ್ದರು. ಇನ್ನು 2023ರ ವಿಶ್ವಕಪ್‌ನಲ್ಲೂ ವಿರಾಟ್‌ ಕೊಹ್ಲಿ ಇಡೀ ಟೂರ್ನಿಯ ಗರಿಷ್ಠ ಸ್ಕೋರರ್‌ ಆಗಿದ್ದು, ಫೈನಲ್‌ನಲ್ಲಿ 54 ರನ್‌ಗೆ ಔಟ್‌ ಆಗಿದ್ದಾರೆ. ಅಂದು ವಿರಾಟ್‌ ಕೊಹ್ಲಿ ಇದ್ದ ತಂಡ ಫೈನಲ್‌ನಲ್ಲಿ ಆಸೀಸ್‌ನ ಡೇವಿಡ್‌ ವಾರ್ನರ್‌ ನಾಯಕತ್ವದ ತಂಡದ ವಿರುದ್ಧ ಸೋಲು ಕಂಡಿದ್ದರು. ಆದರೆ, ಈ ಬಾರಿ ಹಾಗಾಗೋದಿಲ್ಲ ಎನ್ನುವ ವಿಶ್ವಾಸ ಟೀಮ್‌ ಇಂಡಿಯಾ ಅಭಿಮಾನಿಗಳಲ್ಲಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಒಟ್ಟು 850 ಎಸೆತ ಎದುರಿಸಿದ್ದು ಇದರಲ್ಲಿ 765 ರನ್ ಬಾರಿಸಿದ್ದಾರೆ.  ಇಡೀ ವಿಶ್ವಕಪ್‌ನಲ್ಲಿ 95.62ರ ಅದ್ಭುತ ಸರಾಸರಿಯಲ್ಲಿ ಕಿಂಗ್‌ ಕೊಹ್ಲಿ ಬ್ಯಾಟಿಂಗ್‌ ಮಾಡಿದ್ದು, ಅವರ ಸ್ಟ್ರೈಕ್‌ ರೇಟ್‌  90.31 ಆಗಿದೆ.  ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ 116 ಎಸೆತಗಳಲ್ಲಿ 85 ರನ್‌ ಬಾರಿಸಿದ್ದ ವಿರಾಟ್‌ ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧ 56 ಎಸೆತಗಳಲ್ಲಿ 55, ಪಾಕಿಸ್ತಾನ ವಿರುದ್ಧ 18 ಎಸೆತಗಳಲ್ಲಿ 16, ಬಾಂಗ್ಲಾದೇಶ ವಿರುದ್ಧ 97 ಎಸೆತಗಳಲ್ಲಿ 103, ನ್ಯೂಜಿಲೆಂಡ್‌ ವಿರುದ್ಧ 104 ಎಸೆತಗಳಲ್ಲಿ 95, ಇಂಗ್ಲೆಂಡ್‌ ವಿರುದ್ಧ 9 ಎಸೆತಗಳಲ್ಲಿ 0,  ಶ್ರೀಲಂಕಾ ವಿರುದ್ಧ 94 ಎಸೆತಗಳಲ್ಲಿ 88, ದಕ್ಷಿಣ ಆಫ್ರಿಕಾ ವಿರುದ್ಧ 121 ಎಸೆತಗಳಲ್ಲಿ 101, ನೆದರ್ಲೆಂಡ್ಸ್‌ ವಿರುದ್ಧ 56 ಎಸೆತಗಳಲ್ಲಿ 51, ನ್ಯೂಜಿಲೆಂಡ್‌ ವಿರುದ್ಧ ಸೆಮಿಫೈನಲ್‌ನಲ್ಲಿ 113 ಎಸೆತಗಳಲ್ಲಿ 117 ಹಾಗೂ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 63 ಎಸೆತಗಳಲ್ಲಿ 54 ರನ್‌ ಬಾರಿಸಿದ್ದಾರೆ. ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ಹೊರತಾಗಿ ಮತ್ತೆಲ್ಲಾ ತಂಡಗಳ ವಿರುದ್ಧ 50 ಪ್ಲಸ್‌ ಮೊತ್ತ ಬಾರಿಸಿರುವುದು ವಿರಾಟ್‌ ಕೊಹ್ಲಿ ಅವರ ಸಾಧನೆಯಾಗಿದೆ.

World Cup 2023 Final: ಏಕಕಾಲದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಯಿಂದ ರಾಷ್ಟ್ರಗೀತೆ ಗಾಯನ!

ಅಟಗಾರನಾಗಿ ಒಂದೇ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಬಾರಿಸಿರುವ ದಾಖಲೆಯನ್ನು ವಿರಾಟ್‌ ಕೊಹ್ಲಿ ಮಾಡಿದ್ದರೆ, ನಾಯಕನಾಗಿ ಒಂದೇ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ದಾಖಲೆಯನ್ನು ರೋಹಿತ್‌ ಶರ್ಮ ಮಾಡಿದ್ದಾರೆ. ತಾವು ಆಡಿದ 11 ಪಂದ್ಯಗಳಿಂದ 54.27ರ ಸರಾಸರಿಯಲ್ಲಿ ರೋಹಿತ್ ಶರ್ಮ 597 ರನ್‌ ಬಾರಿಸಿದ್ದು, ಅವರ ಸ್ಟ್ರೈಕ್‌ ರೇಟ್‌ 125.94 ಆಗಿದೆ. ಇದಕ್ಕೂ ಮುನ್ನ ಈ ದಾಖಲೆ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಹೆಸರಲ್ಲಿತ್ತು. ವಿಲಿಯಮ್ಸನ್‌ 2019ರ ವಿಶ್ವಕಪ್‌ನಲ್ಲಿ 578 ರನ್‌ ಬಾರಿಸಿದ್ದರು. ಇನ್ನು ವಿಶ್ವಕಪ್‌ನಲ್ಲಿ ಗರಿಷ್ಠ ಸ್ಟ್ರೈಕ್ ರೇಟ್‌ನ ದಾಖಲೆಯೂ ರೋಹಿತ್‌ ಶರ್ಮ ಹೆಸರಲ್ಲಿದೆ.

7,546 ದಿನದ ಬಳಿಕ ಅಂಕಿ ಸಂಖ್ಯೆ ಜೊತೆ ಗೂಗಲ್ ಹೇಳುತ್ತಿದೆ ಭಾರತಕ್ಕೆ ಟ್ರೋಫಿ!

Follow Us:
Download App:
  • android
  • ios