7,546 ದಿನದ ಬಳಿಕ ಅಂಕಿ ಸಂಖ್ಯೆ ಜೊತೆ ಗೂಗಲ್ ಹೇಳುತ್ತಿದೆ ಭಾರತಕ್ಕೆ ಟ್ರೋಫಿ!
ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಭಾರತದ ಬ್ಯಾಟಿಂಗ್ ಆರಂಭದಲ್ಲೇ ಅಭಿಮಾನಿಗಳ ಆತಂಕ ಹೆಚ್ಚಿಸಿದೆ. ವಿಕೆಟ್ ಪತನದ ಹಿನ್ನಡೆಯಿಂದ ಲೆಕ್ಕಾಚಾರಗಳು ಬದಲಾಗುತ್ತಿದೆ. ಆದರೆ 2003ರ ವಿಶ್ವಕಪ್ ಫೈನಲ್ ಹಾಗೂ 2023ರ ಫೈನಲ್‌ಗೂ ಹಲವು ಸಾಮ್ಯತೆಗಳಿವೆ. ಜೊತೆಗೆ ಭಾರತಕ್ಕೆ ಟ್ರೋಫಿ ಎಂದು ಗೂಗಲ್ ಅಂಕಿ ಸಂಖ್ಯೆಗಳು ಹೇಳುತ್ತಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಲೀಗ್, ಸೆಮಿಫೈನಲ್ ಪಂದ್ಯದಲ್ಲಿ ಅಭಿಮಾನಿಗಳಿಗೆ ಯಾವತ್ತೂ ಆತಂಕ ಎದುರಾಗಿಲ್ಲ. ಆದರೆ ಇಂದು ಆರಂಭಿಕ ಹಂತದಲ್ಲೇ ವಿಕೆಟ್ ಪತನದಿಂದ ಆತಂಕ ಆವರಿಸಿದೆ.
ಆರಂಭಿಕ ವಿಕೆಟ್ ಪತನದಿಂದ ಆತಂಕಪಡುವ ಅಗತ್ಯವಿಲ್ಲ. ಗೂಗಲ್ ಇಂಡಿಯಾ ಅಂಕಿ ಸಂಖ್ಯೆ ಜೊತೆ ಭವಿಷ್ಯ ನುಡಿದಿದೆ. ಇದರ ಪ್ರಕಾರ ಭಾರತಕ್ಕೆ 2023ರ ವಿಶ್ವಕಪ್ ಟ್ರೋಫಿ ಎನ್ನುತ್ತಿದೆ.
ಗೂಗಲ್ ಇಂಡಿಯಾ ಈ ಕುರಿತು ಟ್ವೀಟ್ ಮಾಡಿದೆ. 2003ರ ವಿಶ್ವಕಪ್ ಹಾಗೂ 2023ರ ವಿಶ್ವಕಪ್ ಅಂತರ, ಸಾಮ್ಯತೆ, ಫಲಿತಾಂಶ ಕುರಿತು ಮಹತ್ವದ ಭವಿಷ್ಯ ಹೇಳಿದೆ. 7,546 ದಿನದ ಬಳಿಕ ಭಾರತ ಹೊಸ ಇತಿಹಾಸ ರಚಿಸಲಿದೆ ಎಂದಿದೆ.
ಗೂಗಲ್ ಇಂಡಿಯಾ ನೋಟ್ ಪ್ರಕಾರ, 2003ರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಸ್ಟ್ರೇಲಿಯಾ ಲೀಗ್ ಹಂತದ ಎಲ್ಲಾ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿತ್ತು. ಇದೀಗ ಭಾರತ ಕೂಡ 10 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದೆ.
2003ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಗರಿಷ್ಠ ರನ್ ಸ್ಕೋರರ್, 2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಗರಿಷ್ಠ ರನ್ ಸ್ಕೋರ್ ಮಾಡಿದ ಸಾಧನೆ ಮಾಡಿದ್ದಾರೆ
2003ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಮೊದಲ ವಿಶ್ವಕಪ್ ಟೂರ್ನಿ ಮುನ್ನಡೆಸಿದ್ದರು. ಇದೀಗ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮೊದಲ ಬಾರಿ ಟೀಂ ಇಂಡಿಯಾ ಮುನ್ನಡೆಸುತ್ತಿದ್ದಾರೆ.
2003ರಲ್ಲಿ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಾನ್ ಸೀಸನಲ್ ವಿಕೆಟ್ ಕೀಪರ್ ರಾಹುಲ್ ದ್ರಾವಿಡ್ ನಿರ್ವಹಿಸಿದ್ದರು, 2023ರಲ್ಲಿ ನಾನ್ ಸೀಸನಲ್ ವಿಕೆಟ್ ಕೀಪರ್ ಕೆಎಲ್ ರಾಹುಲ್ ಹೆಗಲಮೇಲಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಆಸ್ಟ್ರೇಲಿಯಾ 3ನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಈಗಾಗಲೇ 2 ವಿಶ್ವಕಪ್ ಗೆದ್ದಿರುವ ಭಾರತ 3ನೇ ಟ್ರೋಫಿ ಗೆಲ್ಲಲಿದೆ ಎಂದು ಗೂಗಲ್ ಇಂಡಿಯಾ ಹೇಳಿದೆ