ಮೊಹಮ್ಮದ್ ಶಮಿ ಸಾಧನೆಗೆ ಧರ್ಮದ ಲೇಬಲ್: ಕ್ರಿಕೆಟ್ನಲ್ಲಿ ಧರ್ಮವನ್ನ ಎಳೆದು ತಂದ ಪಾಕಿಗಳು..!
ಲಂಕಾ ವಿರುದ್ಧ ಶಮಿ 5ನೇ ವಿಕೆಟ್ ಪಡೆಯುತ್ತಿದ್ದಂತೆ, ಇತರ ಆಟಗಾರರೊಂದಿಗೆ ಸಂಭ್ರಮಿಸಿದರು. ಈ ವೇಳೆ ಮೊಣಕಾಲುಗಳ ಮೇಲೆ ಕುಳಿತು, ಎರಡೂ ಕೈಗಳನ್ನು ನೆಲಕ್ಕೆ ತಾಗಿಸಿದ್ದರು. ಸುಸ್ತಾಗಿದ್ದ ಕಾರಣಕ್ಕೆ ಶಮಿ ಕೆಳಗಡೆ ಕೂತು ದಣಿವಾರಿಸಿಕೊಂಡಿದ್ರು. ಆದ್ರೆ, ಇದನ್ನೇ ಇಟ್ಟುಕೊಂಡು ಪಾಕಿಸ್ತಾನದ ಕೆಲ ಧರ್ಮಾಂಧರು ಸೋಷಿಯಲ್ ಮೀಡಿಯಾದಲ್ಲಿ ವಿವಾದ ಎಬ್ಬಿಸಿದ್ದಾರೆ.
ಬೆಂಗಳೂರು(ನ.05): ಸದ್ಯ ಕ್ರಿಕೆಟ್ ದುನಿಯಾದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಯದ್ದೇ ಮಾತು. ಅಷ್ಟರಮಟ್ಟಿಗೆ ಏಕದಿನ ವಿಶ್ವಕಪ್ ಸಮರದಲ್ಲಿ ಶಮಿ ಅಬ್ಬರಿಸ್ತಿದ್ದಾರೆ. ಅದ್ಭುತ ಬೌಲಿಂಗ್ನಿಂದ ಬ್ಯಾಟ್ಸ್ಮನ್ಗಳಿಗೆ ಪಾಲಿಗೆ ವಿಲನ್ ಆಗಿದ್ದಾರೆ. ಆಡಿರೋ 3 ಪಂದ್ಯಗಳಿಂದ 14 ವಿಕೆಟ್ ಉರುಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಶಮಿ ಆರ್ಭಟಿಸಿದ್ರು. ಕೇವಲ 5 ಓವರ್ ಬೌಲಿಂಗ್ ಮಾಡಿ, 18 ರನ್‌ಗೆ 5 ವಿಕೆಟ್ ಬೇಟೆಯಾಡಿದ್ರು. ಆ ಮೂಲಕ ಟೂರ್ನಿಯಲ್ಲಿ 2ನೇ ಬಾರಿ ಪಂದ್ಯವೊಂದರಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ರು. ಶಮಿಯ ಈ ಸಾಧನೆಯಿಂದ ಭಾರತೀಯರು ಫುಲ್ ಖುಷ್ ಆಗಿದ್ರೆ, ನೆರೆಯ ಪಾಕಿಸ್ತಾನೀಯರು ಮಾತ್ರ ಹೊಟ್ಟೆಗೆ ಬೆಂಕಿ ಬಿದ್ದವರಂತೆ ಅಡ್ತಿದ್ದಾರೆ. ಆಟದಲ್ಲಿ ಧರ್ಮವನ್ನ ಎಳೆದು ತರ್ತಿದ್ದಾರೆ.
ಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ ಸಜ್ದಾ ಮಾಡಲು ಹೊರಟಿದ್ರಾ..?
ಯೆಸ್, ಲಂಕಾ ವಿರುದ್ಧ ಶಮಿ 5ನೇ ವಿಕೆಟ್ ಪಡೆಯುತ್ತಿದ್ದಂತೆ, ಇತರ ಆಟಗಾರರೊಂದಿಗೆ ಸಂಭ್ರಮಿಸಿದರು. ಈ ವೇಳೆ ಮೊಣಕಾಲುಗಳ ಮೇಲೆ ಕುಳಿತು, ಎರಡೂ ಕೈಗಳನ್ನು ನೆಲಕ್ಕೆ ತಾಗಿಸಿದ್ದರು. ಸುಸ್ತಾಗಿದ್ದ ಕಾರಣಕ್ಕೆ ಶಮಿ ಕೆಳಗಡೆ ಕೂತು ದಣಿವಾರಿಸಿಕೊಂಡಿದ್ರು. ಆದ್ರೆ, ಇದನ್ನೇ ಇಟ್ಟುಕೊಂಡು ಪಾಕಿಸ್ತಾನದ ಕೆಲ ಧರ್ಮಾಂಧರು ಸೋಷಿಯಲ್ ಮೀಡಿಯಾದಲ್ಲಿ ವಿವಾದ ಎಬ್ಬಿಸಿದ್ದಾರೆ.
ಶಮಿ ಸಜ್ದಾ ಮಾಡಲು ಹೊರಟಿದ್ದರು. ಆದ್ರೆ, ಕೊನೆ ಕ್ಷಣದಲ್ಲಿ ತಾನು ಭಾರತೀಯ, ಭಾರತದಲ್ಲಿ ಹಾಗೇ ಮಾಡಲು ಅವಕಾಶವಿಲ್ಲ. ಒಂದು ವೇಳೆ ಮಾಡಿದ್ರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಬೇಕಾಗುತ್ತೆ ಅಂತ ಹಿಂದೆ ಸರಿದ್ರು. ಭಾರತದಲ್ಲಿ ಮುಸ್ಲಿಮರಿಗೆ ತಮ್ಮ ಧರ್ಮಾಚರಣೆಗೆ ಅವಕಾಶವಿಲ್ಲ. ಥ್ಯಾಂಕ್ಸ್ ಜಿನ್ನಾ ಪಾಕಿಸ್ತಾನವನ್ನ ಕೊಟ್ಟಿದ್ದಕ್ಕೆ ಅಂತ ಬರೆದುಕೊಂಡಿದ್ದಾರೆ.
ಸಜ್ದಾ ಅಂದರೆ ಇಸ್ಲಾಂನಲ್ಲಿ ಮೊಣಕಾಲಿನ ಮೇಲೆ ಕೂತು ಹಣೆ, ಮೂಗು ನೆಲಕ್ಕೆ ತಾಗಿಸಿ, ಅಲ್ಲಾಹನಿಗೆ ನಮಸ್ಕರಿಸುವುದು. ಪಾಕಿಸ್ತಾನದ ಹಲವು ಆಟಗಾರರು ಶತಕ ಸಿಡಿಸಿದಾಗ, 5 ವಿಕೆಟ್ ಪಡೆದಾಗ ಮೈದಾನದಲ್ಲೇ ಸಜ್ದಾ ಮಾಡ್ತಾರೆ. ಈ ವಿಶ್ವಕಪ್ನಲ್ಲಿ ಶಾಹೀನ್ ಆಫ್ರೀದಿ ಆಸೀಸ್ ವಿರುದ್ಧ 5 ವಿಕೆಟ್ ಪಡೆದಾಗ ಸಜ್ದಾ ಆಚರಿಸಿದ್ರು.
ಹ್ಯಾಪಿ ಬರ್ತ್ ಡೇ ವಿರಾಟ್ ಕೊಹ್ಲಿ..! ಬರ್ತ್ ಡೇ ದಿನ ಬರುತ್ತಾ 49ನೇ ಶತಕ..?
ಪಾಕಿಗಳ ಒಡೆದು ಆಳುವ ನೀತಿಗೆ ಭಾರತೀಯರಿಂದ ತಿರುಗೇಟು..!
ಪಾಕಿಸ್ತಾನೀಯರ ಪೋಸ್ಟ್ಗಳಿಗೆ ಭಾರತೀಯರ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. ಪಾಕ್ ಆಟಗಾರರು ನೆಲಕ್ಕೆ ಬಾಗಿರೋ ಪೋಟೋಗಳನ್ನ ಟ್ವೀಟ್ ಮಾಡಿ, ಇವ್ರ್ಯಾಕೆ ಸಜ್ದಾ ಮಾಡದೇ, ಅರ್ಧಕ್ಕೆ ನಿಲ್ಲಿಸಿದ್ರು ಅಂತ ಪ್ರಶ್ನಿಸ್ತಿದ್ದಾರೆ.
ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ Net Worth ಎಷ್ಟು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಇನ್ನು ಕೆಲವರು ನಾವು ಭಾರತೀಯರು ಎಲ್ಲಾ ಧರ್ಮಗಳನ್ನ ಗೌರವಿಸುತ್ತೇವೆ. ರೋಜರ್ ಬಿನ್ನಿ, ಜಹೀರ್ ಖಾನ್, ವಾಸಿಂ ಜಾಫರ್, ಹರ್ಭಜನ್ ಸಿಂಗ್ರಂತ ವಿವಿಧ ಧರ್ಮಗಳಿಗೆ ಸೇರಿದ ಆಟಗಾರರು ಟೀಮ್ ಇಂಡಿಯಾ ಪರ ಆಡಿದ್ದಾರೆ ಅಂತ, ಕುತಂತ್ರಿ ಪಾಕಿಗಳಿಗೆ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಪಾಕಿಗಳು ಸೋಲಿನ ಹಾದಿ ಹಿಡಿದಿರೋ ತಮ್ಮ ತಂಡದ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನ ಬಿಟ್ಟು, ಭಾರತೀಯರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್