* ಭಾರತ ವರ್ಸಸ್‌ ಇಂಗ್ಲೆಂಡ್ ಟೆಸ್ಟ್ ಪಂದ್ಯ ಆರಂಭ* ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ* ಭಾರತ ತಂಡದ ಪರ ಐವರು ಆಟಗಾರ್ತಿಯರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ

ಬ್ರಿಸ್ಟಾಲ್‌(ಜೂ.16): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮಹಿಳಾ ತಂಡ ಮೊದಲು ಬ್ಯಾಟ್‌ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಐವರು ಆಟಗಾರ್ತಿಯರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಇಲ್ಲಿನ ಕೌಂಟಿ ಮೈದಾನದಲ್ಲಿ ಆರಂಭವಾದ ಈ ಟೆಸ್ಟ್ ಪಂದ್ಯವು ಹಲವು ಕಾರಣಗಳಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಭಾರತ ಮಹಿಳಾ ತಂಡವು ಸರಿಸುಮಾರು 7 ವರ್ಷಗಳ ಬಳಿಕ ಮೊದಲ ಟೆಸ್ಟ್‌ ಪಂದ್ಯವನ್ನಾಡಲು ಸಜ್ಜಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಾಗಲೇ ಸತತ ಮೂರು ಗೆಲುವು ದಾಖಲಿಸಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು ಇದೀಗ ಮಿಥಾಲಿ ರಾಜ್ ನೇತೃತ್ವದಲ್ಲಿ 4 ಟೆಸ್ಟ್ ಪಂದ್ಯ ಗೆದ್ದು ವಿಶ್ವದಾಖಲೆ ಬರೆಯಲು ಸಜ್ಜಾಗಿದೆ.

ಇಂದಿನಿಂದ ಭಾರತ, ಇಂಗ್ಲೆಂಡ್‌ ಮಹಿಳಾ ಟೆಸ್ಟ್‌ ಆರಂಭ

Scroll to load tweet…

ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡದಲ್ಲಿ ಐವರು ಆಟಗಾರ್ತಿಯರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಸ್ಪೋಟಕ ಬ್ಯಾಟರ್ ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಹಾಗೂ ತಾನಿಯಾ ಭಾಟಿಯಾ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಪರ ಆಲ್ರೌಂಡರ್ ಸೋಫಿಯಾ ಡಂಕ್ಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. 

ತಂಡಗಳು ಹೀಗಿವೆ ನೋಡಿ

ಭಾರತ ಮಹಿಳಾ ತಂಡ:

Scroll to load tweet…

ಇಂಗ್ಲೆಂಡ್ ಮಹಿಳಾ ತಂಡ:

Scroll to load tweet…