* ರೋಚಕ ಘಟ್ಟದತ್ತ ಭಾರತ- ಇಂಗ್ಲೆಂಡ್ ಮಹಿಳಾ ಟೆಸ್ಟ್* ಮೊದಲ ಇನಿಂಗ್ಸ್ ಬಾಕಿ ಚುಕ್ತಾ ಮಾಡಿದ ಮಿಥಾಲಿ ರಾಜ್ ಪಡೆ* ಚೊಚ್ಚಲ ಟೆಸ್ಟ್‌ನಲ್ಲೇ ಅರ್ಧಶತಕ ಚಚ್ಚಿದ ದೀಪ್ತಿ ಶರ್ಮಾ

ಬ್ರಿಸ್ಟಲ್‌(ಜೂ.19): ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ದೀಪ್ತಿ ಶರ್ಮಾ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಕೊಂಚ ಮುನ್ನಡೆ ಸಾಧಿಸಿದೆ.

ಹೌದು, ಮೊದಲ ಇನಿಂಗ್ಸ್‌ನಲ್ಲಿ ದಿಢೀರ್ ಕುಸಿತ ಕಂಡು ಫಾಲೋ ಆನ್‌ಗೆ ಒಳಗಾಗಿದ್ದ ಭಾರತ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಮೊದಲಿಗೆ ಶಫಾಲಿ ವರ್ಮಾ ಅರ್ಧಶತಕ ಬಾರಿಸಿ ಆಸರೆಯಾಗಿದ್ದರು. ಶಫಾಲಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಎಡಗೈ ಬ್ಯಾಟರ್ ಶಫಾಲಿ ವರ್ಮಾ 157 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಅರ್ಧಶತಕ ಪೂರೈಸಿದರು. 

ಚೊಚ್ಚಲ ಟೆಸ್ಟ್‌ನ 2 ಇನಿಂಗ್ಸಲ್ಲಿ ಅರ್ಧಶತಕ: ಶಫಾಲಿ ವರ್ಮಾ ದಾಖಲೆ

Scroll to load tweet…

ಪೂನಂ ರಾವತ್ ಹಾಗೂ ದೀಪ್ತಿ ಶರ್ಮಾ ಜೋಡಿ 72 ರನ್‌ಗಳ ಜತೆಯಾಟ ನಿಭಾಯಿಸಿದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ದೀಪ್ತಿ 168 ಎಸೆತಗಳನ್ನು ಎದುರಿಸಿ 54 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. 

Scroll to load tweet…

ನಾಲ್ಕನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ ಮಿಥಾಲಿ ರಾಜ್ ಪಡೆ 3 ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿದ್ದು, ಒಟ್ಟಾರೆ 6 ರನ್‌ಗಳ ಮುನ್ನಡೆ ಸಾಧಿಸಿದೆ. ಸದ್ಯ ಪೂನಂ ರಾವತ್(39) ಹಾಗೂ ನಾಯಕಿ ಮಿಥಾಲಿ ರಾಜ್‌ ಕ್ರೀಸ್‌ ಕಾಯ್ದುಕೊಂಡಿದ್ದಾರೆ.