Asianet Suvarna News Asianet Suvarna News

Women's T20 World cup ಹರ್ಮನ್‌ಪ್ರೀತ್ - ರಿಚಾ ಜೊತೆಯಾಟ, ಗೆಲುವಿನ ಸಿಹಿ ಕಂಡ ಭಾರತ

ಪಾಕಿಸ್ತಾನ ವಿರುದ್ದ ಗೆಲುವಿನ ಮೂಲಕ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಭಾರತ, ಇದೀಗ ವೆಸ್ಟ್ ಇಂಡೀಸ್ ವಿರುದ್ದ 6 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಸತತ 2ನೇ ಗೆಲುವು ಸಾಧಿಸಿದೆ.

Womens T20 World cup Harmanpreet Kaur Richa Ghosh help India women to thrash West indies by 6 wickets ckm
Author
First Published Feb 15, 2023, 9:42 PM IST

ಕೇಪ್ ಟೌನ್(ಫೆ.15): ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ಮಣಿಸಿದ ಭಾರತ, ದ್ವಿತೀಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ವೆಸ್ಟ್ ಇಂಡೀಸ್ ನೀಡಿದ 119 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತದ ವನಿತೆಯರು 4 ವಿಕೆಟ್ ಕಳೆದುಕೊಂಡು 18.1 ಓವರ್‌ಗಳಲ್ಲಿ ಗುರಿ ತಲುಪಿದರು. 

119 ರನ್ ಟಾರ್ಗೆಟ್ ಚೇಸ್ ಮಾಡಲು ಅಖಾಡಕ್ಕಿಳಿದ ಭಾರತ ಮಹಿಳಾ ತಂಡ ಡೀಸೆಂಟ್ ಆರಂಭ ಪಡೆಯಿತು. ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ 32 ರನ್ ಜೊತೆಯಾಟ ನೀಡಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾಗ ಸ್ಮೃತಿ ಮಂಧಾನ 7 ಎಸೆತದಲ್ಲಿ 10 ರನ್ ಸಿಡಿಸಿ ಔಟಾದರು. ಮಂಧಾನ ವಿಕೆಟ್ ಪತನದ ಬೆನ್ನಲ್ಲೇ ಭಾರತ ಮಹಿಳಾ ತಂಡ ಕೊಂಚ ಆತಂಕ ಎದುರಿಸಿತು. ಕಾರಣ ಜೇಮಿ ರೋಡ್ರಿಗೆಸ್ ಕೇವಲ 1 ರನ್ ಸಿಡಿಸಿ ಔಟಾದರು. 35 ರನ್‌ಗೆ ಭಾರತ ಮಹಿಳಾ ತಂಡ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. 

ICC Womens T20 World Cup: ಜೆಮಿಮಾ ಸೂಪರ್‌ ಆಟ, ಪಾಕ್‌ ವಿರುದ್ಧ ಜಯ ಕಂಡ ಮಹಿಳಾ ಭಾರತ!

ದಿಟ್ಟ ಹೋರಾಟ ನೀಡಿದ ಶೆಫಾಲಿ ವರ್ಮಾ 23 ಎಸೆತದಲ್ಲಿ 28 ರನ್ ಸಿಡಿಸಿದರು. ಶೆಫಾಲಿ ಬ್ಯಾಟಿಂಗ್ ಭಾರತ ಮಹಿಳಾ ತಂಡಕ್ಕೆ ನೆರವಾಯಿತು. ಇತ್ತ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ರಿಚಾ ಘೋಷ್ ಜೊತೆಯಾಟ ಭಾರತ ಮಹಿಳಾ ತಂಡದ ಆತಂಕ ದೂರ ಮಾಡಿತು. ಕೌರ್ ಹಾಗೂ ರಿಚಾ ಘೋಷ್ ಜೊತೆಯಾಟದಿಂದ ಭಾರತ ಗೆಲುವಿನತ್ತ ದಾಪುಗಾಲಿಟ್ಟಿತು. ಈ ಜೊತೆಯಾಟಕ್ಕೆ ಬ್ರೇಕ್ ಹಾಕಲು ವೆಸ್ಟ್ ಇಂಡೀಸ್ 7 ಬೌಲರ್ ಬಳಸಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

 

T20 World Cup ಪಾಕ್‌ ಚೆಂಡಾಡಿದ ಜಿಮಿಮಾ ರೋಡ್ರಿಗ್ಸ್‌ ಕುರಿತು ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್‌ ಸಂಗತಿಗಳಿವು..!

ಭಾರತದ ಗೆಲುವಿಗೆ  14 ಎಸೆತದಲ್ಲಿ ಕೇವಲ 4 ರನ್ ಅವಶ್ಯಕತೆ ಇತ್ತು. ಈ ವೇಳೆ 33 ರನ್ ಸಿಡಿಸಿದ ಹರ್ಮನ್‌ಪ್ರೀತ್ ಕೌರ್ ವಿಕೆಟ್ ಪತನಗೊಂಡಿತು. ದೇವಿಕಾ ವೈದ್ಯ ಜೊತೆ ಸೇರಿದ ರಿಚಾ ಘೋಷ್ ಭರ್ಜರಿ ಬೌಂಡರಿ ಸಿಡಿಸಿದರು. ಈ ಮೂಲಕ  18.1  ಓವರ್‌ಗಳಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ರಿಚಾ ಘೋಷ್  32 ಎಸೆತದಲ್ಲಿ ಅಜೇಯ 44 ರನ್ ಸಿಡಿಸಿದರು. ಭಾರತ 6 ವಿಕೆಟ್ ಗೆಲುವು ದಾಖಲಿಸಿತು. 

Follow Us:
Download App:
  • android
  • ios