ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಿಂದ ಭಾರತ ಹೊರಬಿದ್ದಿದೆ. ಈ ಆಘಾತದಿಂದ ಭಾರತ ಮಹಿಳಾ ತಂಡ ಹೊರಬಂದಿಲ್ಲ. ಸೋಲಿನ ಬಳಿಕ ನಾಯಕಿ ಹರ್ಮನ್‌ಪ್ರೀತ್ ಕೌರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾಜಿ ನಾಯಕಿ ತಬ್ಬಿಕೊಂಡು ಅತ್ತ ಹರ್ಮನ್‌ಪ್ರೀತ್ ಕೌರ್ ಗಳಗಳನೆ ಅತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಕೇಪ್ ಟೌನ್(ಫೆ.24): ಟಿ20 ಮಹಿಳಾ ವಿಶ್ವಕಪ್ ಗೆಲ್ಲುವ ಭಾರತ ತಂಡದ ಆಸೆ ಕೈಗೂಡಲಿಲ್ಲ. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ವಿರೋಚಿತ ಸೋಲು ಅನುಭವಿಸುವ ಮೂಲಕ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತು. ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಭಾರತ ಮಹಿಳಾ ತಂಡ ಗುರುತಿಸಿಕೊಂಡಿತ್ತು. ಹೀಗಾಗಿ ಈ ಸೋಲು ತೀವ್ರ ಆಘಾತ ನೀಡಿದೆ. ಅಭಿಮಾನಿಗಳಿಗೆ ಮಾತ್ರವಲ್ಲ, ಮಹಿಳಾ ತಂಡದ ಪ್ರತಿ ಸದಸ್ಯರು ಕಣ್ಣೀರಲ್ಲಿ ತೊಯ್ದಿದ್ದಾರೆ. ನಾಯಕ ಹರ್ಮನ್‌ಪ್ರೀತ್ ಕೌರ್, ಕಣ್ಣೀರು ಯಾರಿಗೂ ಗೊತ್ತಾಗಬಾರದು ಎಂದು ಕನ್ನಡ ಧರಿಸಿದ್ದರು. ಆದರೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಮಾಜಿ ನಾಯಕ ಅಂಜುಮ್ ಚೋಪ್ರಾ ತಬ್ಬಿಕೊಂಡ ಬೆನ್ನಲ್ಲೇ ಹರ್ಮನ್‌ಪ್ರೀತ್ ಭಾವುಕರಾಗಿದ್ದಾರೆ. ಸೋಲಿನ ಅಘಾತದಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಂಜುಮ್ ಚೋಪ್ರಾ ಬಿಗಿದಪ್ಪಿ ಸಂತೈಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ಭಾರತ ಮಹಿಳಾ ತಂಡ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ಭಾರತೀಯರು ಶಹಬ್ಬಾಷ್ ಎಂದಿದ್ದಾರೆ. ಜ್ವರದ ನಡುವೆಯೂ ಹರ್ಮನ್‌ಪ್ರೀತ್ ಕೌರ್ 52 ರನ್ ಸಿಡಿಸಿದ್ದರು.
ಸೋಲಿನ ಬಳಿಕ ಮೈದಾನದಲ್ಲಿ ಅಂಜುಮ್ ಚೋಪ್ರಾ ಭೇಟಿಯಾದ ಹರ್ಮನ್‌ಪ್ರೀತ್ ಕೌರ್ ನೋವು ತಡೆದುಕೊಳ್ಳಲು ಸಾಧ್ಯವಾಗದೇ ಅತ್ತಿದ್ದಾರೆ. ಈ ವೇಳೆ ಅಂಜುಮ್ ನಾಯಕಿಯನ್ನು ಸಂತೈಸಿದ್ದಾರೆ. ಇಡೀ ಭಾರತವೇ ನಿಮ್ಮ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದೆ. ಸೋಲಿನ ನೋವು ಎಲ್ಲರಿಗೂ ಇದೆ. ಭಾರತ ಹೆಮ್ಮೆಪಡುವಂತೆ ಆಡಿದ್ದೀರಿ ಎಂದಿದ್ದಾರೆ. ಆದರೇ ಯಾವುದೇ ಮಾತುಗಳನ್ನು ಕೇಳಿಸಿಕೊಂಡು ಸಮಾಧಾನವಾಗುವ ಪರಿಸ್ಥಿತಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಹಾಗೂ ಭಾರತ ಮಹಿಳಾ ತಂಡ ಇರಲಿಲ್ಲ. ಹೀಗಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ICC Women's T20 World Cup: ಧೋನಿ ರೀತಿಯಲ್ಲಿ ಹರ್ಮಾನ್ ರನೌಟ್, ವಿಶ್ವಕಪ್‌ನಿಂದ ಭಾರತ ಔಟ್!
ಜ್ವರದ ನಡುವೆಯೂ ವಿಶ್ರಾಂತಿ ಪಡೆದುಕೊಳ್ಳಲು ಬಯಸದ ನಾಯಕಿ ಹರ್ಮನ್‌ಪ್ರೀತ್ ಕೌರ್, ಆಸ್ಟ್ರೇಲಿಯಾ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಆಖಾಡಕ್ಕೆ ಇಳಿದಿದ್ದರು. 173 ರನ್ ಟಾರ್ಗೆಟ್ ಪಡೆದ ಮಹಿಳಾ ತಂಡ,4 ಓವರ್‌ನೊಳಗೆ ಶಫಾಲಿ(9), ಸ್ಮೃತಿ(2), ಯಸ್ತಿಕಾ(4)ರ ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡ ಸೋಲಿನತ್ತ ಮುಖ ಮಾಡಿದೆ ಎನಿಸಿದಾಗ ಜೊತೆಯಾದ ಜೆಮಿಮಾ ರೋಡ್ರಿಗ್‌್ಸ ಹಾಗೂ ಹರ್ಮನ್‌ಪ್ರೀತ್ ಕೌರ್ ಗೆಲುವಿನ ವಿಶ್ವಾಸ ಮರಳುವಂತೆ ಮಾಡಿದರು. ಇವರಿಬ್ಬರ ನಡುವೆ 41 ಎಸೆತದಲ್ಲಿ 69 ರನ್ ಜೊತೆಯಾಟ ಮೂಡಿಬಂತು. 10 ಓವರಲ್ಲಿ 93 ರನ್ ಕಲೆಹಾಕಿದ ಭಾರತ ಗೆಲ್ಲುವ ಫೇವರಿಟ್ ಎನಿಸಿತ್ತು.
ಆದರೆ ಹರ್ಮನ್‌ಪ್ರೀತ್ ಕೌರ್ 52 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಈ ಮೂಲಕ ಭಾರತ ಸೋಲಿನತ್ತ ವಾಲಿತು. ಆಕರ್ಷಕ ಹೊಡೆತಗಳ ಮೂಲಕ ರಂಜಿಸುತ್ತಿದ್ದ ಜೆಮಿಮಾ(24 ಎಸೆತದಲ್ಲಿ 43 ರನ್), ಬಾನೆತ್ತರಕ್ಕೆ ಚಿಮ್ಮಿದ ಚೆಂಡನ್ನು ಕೆಣಕಲು ಹೋಗಿ ಔಟಾದರು. ಆದರೂ ಹರ್ಮನ್ ಅಬ್ಬರ ನಿಲ್ಲಲಿಲ್ಲ. 32 ಎಸೆತದಲ್ಲಿ ಅರ್ಧಶತಕ ಪೂರೈಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಾಗ ಆಘಾತ ಎದುರಾಯಿತು. 2ನೇ ರನ್ ಕದಿಯುವ ವೇಳೆ ರನೌಟ್ ಆದರು. 34 ಎಸೆತದಲ್ಲಿ 52 ರನ್‌ಗಳ ಅವರ ಇನ್ನಿಂಗ್‌್ಸ ಮುಗಿಯುತ್ತಿದ್ದಂತೆ ಭಾರತವೂ ಸೋಲಿನತ್ತ ಸಾಗಿತು. ಕೊನೆ ಓವರಲ್ಲಿ ಗೆಲ್ಲಲು 16 ರನ್ ಬೇಕಿತ್ತು. ಆದರೆ ಭಾರತ ಗಳಿಸಿದ್ದು 10 ಮಾತ್ರ.
IPL ಟೂರ್ನಿಗೂ ಮುನ್ನ ಧೋನಿ ಪಡೆಗೆ ಗುಡ್ ನ್ಯೂಸ್, 14 ಕೋಟಿ ರುಪಾಯಿ ಸ್ಟಾರ್ ಆಟಗಾರ ಕಣಕ್ಕಿಳಿಯಲು ರೆಡಿ..!
