2019ರ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಎಂಎಸ್‌ ಧೋನಿ ರನೌಟ್‌ ಭಾರತದ ವಿಶ್ವಕಪ್‌ ಆಸೆಯನ್ನು ಭಗ್ನ ಮಾಡಿತ್ತು. ಅದೇ ರೀತಿಯಲ್ಲಿ ನಾಯಕಿ ಹರ್ಮಾನ್‌ಪ್ರೀತ್‌ ಕೌರ್‌ ರನೌಟ್‌, 2023ರ ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಫೈನಲ್‌ ಆಸೆಯನ್ನು ಭಗ್ನ ಮಾಡಿದೆ.

ಕೇಪ್‌ಟೌನ್‌ (ಫೆ.23): ಬಹುಶಃ ಭಾರತದ ಕ್ರಿಕೆಟ್‌ ಅಭಿಮಾನಿಗು ಯಾರೊಬ್ಬರೂ ಆ ದೃಶ್ಯವನ್ನು ಮರೆಯಲು ಸಾಧ್ಯವೇ ಇಲ್ಲ. 2019ರ ಏಕದಿನ ವಿಶ್ವಕಪ್‌. ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಎಂಎಸ್‌ ಧೋನಿ ತಂಡವನ್ನು ಗೆಲುವಿನ ದಡಕ್ಕೆ ತಂದಿದ್ದರು. ಆದರೆ, ಕೊನೇ ಹಂತದಲ್ಲಿ ಅವರ ಅಚ್ಚರಿಯ ರನೌಟ್‌ ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣವಾಯಿತು. ಅದೇ ರೀತಿಯ ಇನ್ನೊಂದು ರನೌಟ್‌ ಭಾರತವನ್ನು ವಿಶ್ವಕಪ್‌ನಿಂದ ಹೊರಹಾಕಿದೆ. 2023ರ ಟಿ20 ವಿಶ್ಬಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿದ್ದ ಟೀಮ್‌ ಇಂಡಿಯಾ ಉತ್ತಮವಾಗಿ ಆಡುತ್ತಿದ್ದ ನಾಯಕಿ ಹರ್ಮಾನ್‌ಪ್ರೀತ್‌ ಕೌರ್‌ ರನ್ಔಟ್‌ನೊಂದಿಗೆ ಆಸ್ಟ್ರೇಲಿಯಾ ವಿರುದ್ಧ 5 ರನ್‌ಗಳ ಸೋಲು ಕಂಡಿದೆ. ಅದರೊಂದಿಗೆ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಸತತ 2ನೇ ಬಾರಿಗೆ ಫೈನಲ್‌ಗೇರುವ ಆಸೆ ಭಗ್ನಗೊಂಡಿದೆ. ಗೆಲುವಿಗೆ ಆಸೀಸ್‌ ನೀಡಿದ್ದ 173 ರನ್‌ಗಳ ಗುರಿಯನ್ನು ಉತ್ತಮವಾಗಿಯೇ ಬೆನ್ನಟ್ಟಿದ ಟೀಮ್‌ ಇಂಡಿಯಾ, ಪ್ರಮುಖ ಹಂತದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ 8 ವಿಕೆಟ್‌ಗೆ 167 ರನ್‌ ಬಾರಿಸಿ ಸೋಲು ಕಂಡಿತು.

Scroll to load tweet…

ಗೆಲುವಿಗೆ 33 ಎಸೆತಗಳಲ್ಲಿ 40 ರನ್‌ ಬೇಕಿದ್ದಾಗ ಅರ್ಧಶತಕ ಬಾರಿಸಿ ಉತ್ತಮ ಲಯದಲ್ಲಿದ್ದ ಹರ್ಮಾನ್‌ಪ್ರೀತ್‌ ಕೌರ್‌ ಔಟಾಗಿದ್ದು ಭಾರತದ ಕ್ರಿಕೆಟ್‌ ಅಭಿಮಾನಿಗಳಿಗೆ 2019ರ ಧೋನಿಯ ಸೆಮಿಫೈನಲ್‌ ರನೌಟ್‌ ನೆನಪಿಸಿದ್ದಂತೂ ಸುಳ್ಳಲ್ಲ. ವೇರ್‌ಹ್ಯಾಂ ಎಸೆತದಲ್ಲಿ ಚೆಂಡನ್ನು ಸ್ಲಾಗ್‌ಸ್ವೀಪ್ ಮಾಡಿ ಹರ್ಮಾನ್‌ ಪ್ರೀತ್‌ ಕೌರ್‌ ಮಿಡ್‌ವಿಕೆಟ್‌ನತ್ತ ತಳ್ಳಿದ್ದರು. ಸುಲಭವಾಗಿ ಎರಡು ರನ್‌ ಕದಿಯುವ ಅವಕಾಶವಿತ್ತು. ಬೌಂಡರಿ ಲೈನ್‌ನಲ್ಲಿ ಚೆಂಡನ್ನು ತಡೆದ ಗಾರ್ಡ್‌ನರ್‌ ಇದನ್ನು ವಿಕೆಟ್‌ಕೀಪರ್‌ ಅಲಿಸ್ಸಾ ಹೀಲಿ ಬಳಿ ಎಸೆದರು. ಸುಲಭವಾಗಿ ಗುರಿ ಮುಟ್ಟುವ ಅಂದಾಜಿನಲ್ಲಿ ಹರ್ಮಾನ್‌ಪ್ರೀತ್‌ ಕೌರ್‌ ಇದ್ದರಾದರೂ, ಕ್ರೀಸ್‌ನ ಅಂಚಿನಲ್ಲಿ ಬ್ಯಾಟ್‌ ಇಡುವಾಗ ಅದು ಸರಾಗವಾಗಿ ಮುಂದೆ ಹೋಗಲಿಲ್ಲ. ಬ್ಯಾಟ್‌ ಸ್ಟಕ್‌ ಆದ ಲಾಭವನ್ನು ಹೀಲಿ ಮಾಡಿಕೊಂಡು, ಹರ್ಮಾನ್‌ಪ್ರೀತ್‌ರನ್ನು ರನೌಟ್‌ ಮಾಡಿದರು. ಹರ್ಮಾನ್‌ಪ್ರೀತ್‌ ಕೌರ್‌ ಮೂಲಕ ಐದನೇ ವಿಕೆಟ್‌ ಕಳೆದುಕೊಂಡ ಭಾರತ ಅಲ್ಲಿಗೆ ಗೆಲುವಿನ ಆಸೆ ಕೈಬಿಟ್ಟಿತ್ತು.

ಭಾರತ ತಂಡದ ಚೇಸಿಂಗ್‌ ಉತ್ತಮವಾಗಿ ಇದ್ದಿರಲಿಲ್ಲ. 28 ರನ್‌ ಗಳಿಸುವ ವೇಳೆಗೆ ಮೂರು ಪ್ರಮುಖ ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿತ್ತು. ಶೆಫಾಲಿ ವರ್ಮ 9 ರನ್‌ ಬಾರಿಸಿ ಔಟಾದರೆ, ಸ್ಮೃತಿ ಮಂಧನಾ 2 ರನ್‌ಗೆ ವಿಕೆಟ್‌ ನೀಡಿದರು. ಯಸ್ತಿಕಾ ಭಾಟಿಯಾ 4 ರನ್‌ಗೆ ವಿಕೆಟ್‌ ನೀಡಿದಾಗ ಭಾರತ ಸೋಲು ಕಾಣುತ್ತದೆ ಎಂದೇ ಎಲ್ಲರು ಭಾವಿಸಿದ್ದರು.

ICC Women's T20 World Cup: ಬೆಥ್‌ ಮೂನಿ ಅರ್ಧಶತಕ, 172 ರನ್‌ ಪೇರಿಸಿದ ಅಸೀಸ್‌

ಈ ಹಂತದಲ್ಲಿ ಜೊತೆಯಾದ ಜೆಮಿಮಾ ರೋಡ್ರಿಗಸ್‌ಗೆ ಜೊತೆಯಾದ ನಾಯಕಿ ಹರ್ಮಾನ್‌ಪ್ರೀತ್‌ ಕೌರ್‌ 4ನೇ ವಿಕೆಟ್‌ಗೆ ಬಿರುಸಿನ 69 ರನ್‌ ಜೊತೆಯಾಟವಾಡಿದರು. ಜೆಮಿಮಾ 24 ಎಸೆತಗಳಲ್ಲಿ6 ಬೌಂಡರಿಗಳಿದ್ದ 43 ರನ್‌ ಸಿಡಿಸಿದರೆ, ಹರ್ಮಾನ್‌ಪ್ರೀತ್‌ ಕೌರ್‌ 34 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ಗಳಿದ್ದ52 ರನ್‌ ಸಿಡಿಸಿದರು. ಹಾಗೇನಾದರೂ ಈ ಜೋಡಿ ಕೊನೆಯವರೆಗೂ ಕ್ರೀಸ್‌ನಲ್ಲಿ ಇದ್ದಿದ್ದರೆ, ಭಾರತ ಇನ್ನೂ ಒಂದು ಓವರ್‌ಗಳ ಬಾಕಿ ಇರುವಂತೆಯೇ ಗೆಲುವು ಸಾಧಿಸುತ್ತಿತ್ತು. 11ನೇ ಓವರ್‌ನ 2ನೇ ಎಸೆತದಲ್ಲಿ ಅಪಾಯಕಾರಿ ಹೊಡೆತಕ್ಕೆ ಕೈಹಾಕಿದ ಜೆಮಿಮಾ ನಿರ್ಗಮನ ಕಂಡರೆ, ಹರ್ಮಾನ್‌ಪ್ರೀತ್‌ ಕೌರ್ ಆ ಬಳಿಕ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸುವ ಜವಾಬ್ದಾರಿ ಹೊತ್ತುಕೊಂಡಿದ್ದರು. ಆದರೆ, ತಂಡದ ಮೊತ್ತ 133 ರನ್‌ ಆಗಿದ್ದಾಗ ಅವರ ದುರದೃಷ್ಟಕರ ರನೌಟ್‌ ಫಲಿತಾಂಶದ ಮೇಲೆ ಪರಿಣಾಮ ಬೀರಿತು.

ಎದುರಾಳಿಗಳನ್ನ ಮಣಿಸಲು ಅಂಬಾನಿ ತಂತ್ರ, ಜಿಯೋ ಸಿನಿಮಾದಲ್ಲಿ ಐಪಿಎಲ್‌ ಉಚಿತವಾಗಿ ಪ್ರಸಾರ!

ಸ್ನೇಹ್‌ ರಾಣಾ 10 ಎಸೆತಗಳಲ್ಲಿ 11 ರನ್‌ ಬಾರಿಸಿದರೆ, ರಾಧಾ ಯಾಧವ್‌ ಶೂನ್ಯಕ್ಕೆ ಔಟಾದರು. ಅದರೊಂದಿಗೆ ಆಸ್ಟ್ರೇಲಿಯಾ ತಂಡ ಸತತ 2ನೇ ವರ್ಷ ವಿಶ್ವಕಪ್‌ ಫೈನಲ್‌ಗೇರಿತು.2020ರ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ ಚಾಂಪಿಯನ್‌ ಆಗಿತ್ತು