IPL ಟೂರ್ನಿಗೂ ಮುನ್ನ ಧೋನಿ ಪಡೆಗೆ ಗುಡ್‌ ನ್ಯೂಸ್‌, 14 ಕೋಟಿ ರುಪಾಯಿ ಸ್ಟಾರ್ ಆಟಗಾರ ಕಣಕ್ಕಿಳಿಯಲು ರೆಡಿ..!

16ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಸಿಎಸ್‌ಕೆಗೆ ಗುಡ್‌ ನ್ಯೂಸ್
ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ವೇಗಿ ದೀಪಕ್ ಚಹರ್
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದ ಸ್ಟಾರ್ ವೇಗಿ

CSK star Pacer Deepak Chahar ready to make comeback at IPL 2023 kvn

ನವದೆಹಲಿ(ಫೆ.22): ಕಳೆದ ವರ್ಷ 2 ಬಾರಿ ಗಾಯಗೊಂಡಿದ್ದ ವೇಗಿ ದೀಪಕ್‌ ಚಹರ್‌ ಸದ್ಯ ಸಂಪೂರ್ಣ ಚೇತರಿಕೆ ಕಂಡಿದ್ದು 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. 2022ರಲ್ಲಿ ಕೇವಲ 15 ಪಂದ್ಯಗಳನ್ನಾಡಿದ ಚಹರ್‌, ಟಿ20 ವಿಶ್ವಕಪ್‌ನಿಂದಲೂ ಹೊರಬಿದ್ದಿದ್ದರು. 

ಬೆಂಗಳೂರಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಹಲವು ತಿಂಗಳುಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ಚಹರ್‌, ಫಿಟ್ನೆಸ್‌ ಪರೀಕ್ಷೆಯಲ್ಲೂ ಪಾಸಾಗಿದ್ದಾರೆ ಎಂದು ತಿಳಿದುಬಂದಿದೆ. 2022ನೇ ಸಾಲಿನ ಐಪಿಎಲ್‌ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ಬರೋಬ್ಬರಿ 14 ಕೋಟಿ ರುಪಾಯಿ ನೀಡಿ ದೀಪಕ್ ಚಹರ್ ಅವರನ್ನು ಖರೀದಿಸಿತ್ತು. ಆದರೆ ಫಿಟ್ನೆಸ್‌ ಸಮಸ್ಯೆಯಿಂದಾಗಿ ದೀಪಕ್‌ ಚಹಾರ್, 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನಾಡಿರಲಿಲ್ಲ. 

"ಫಿಟ್ನೆಸ್ ಸಾಧಿಸಲು ನಾನು ಕಳೆದ ಎರಡು-ಮೂರು ತಿಂಗಳಿನಿಂದ ನಿರಂತರವಾಗಿ ಶ್ರಮವಹಿಸಿ ಫಿಟ್ನೆಸ್ ಸಾಧಿಸಿದ್ದೇನೆ. ನಾನೀಗ ಸಂಪೂರ್ಣ ಫಿಟ್ ಆಗಿದ್ದು, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದೇನೆ ಎಂದು ದೀಪಕ್ ಚಹರ್, ಪಿಟಿಐಗೆ ತಿಳಿಸಿದ್ದಾರೆಂದು ವರದಿಯಾಗಿತ್ತು.

2023ನೇ ಸಾಲಿನ ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್‌ 31ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲೇ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್‌ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ವೇಗಿ ಬುಮ್ರಾ ಐಪಿಎಲ್‌ ಆಡುವುದು ಅನುಮಾನ!

ಮುಂಬೈ: ಭಾರ​ತದ ತಾರಾ ವೇಗಿ ಜಸ್‌​ಪ್ರೀ​ತ್‌ ಬುಮ್ರಾಗೆ ರಾಷ್ಟ್ರೀಯ ಕ್ರಿಕೆಟ್‌ ಅಕಾ​ಡೆ​ಮಿ​(ಎ​ನ್‌​ಸಿ​ಎ​)ಯಿಂದ ಆಡಲು ಇನ್ನಷ್ಟೇ ಅನು​ಮತಿ ನೀಡ​ಬೇ​ಕಿದ್ದು, ಮತ್ತಷ್ಟು ಸಮಯ ಸ್ಪರ್ಧಾ​ತ್ಮ​ಕ ಕ್ರಿಕೆ​ಟ್‌​ನಿಂದ ದೂರ ಉಳಿ​ಯುವ ಸಾಧ್ಯತೆ ಇದೆ ಎಂದು ವರ​ದಿ​ಯಾ​ಗಿ​ದೆ. 

ಭಾರತ ಕ್ರಿಕೆಟ್ ತಂಡಕ್ಕೆ ಆ್ಯಡಿ​ಡಾಸ್‌ ಕಿಟ್‌ ಪ್ರಾಯೋಜಕತ್ವ?

ಆಟ​ಗಾ​ರರ ಒತ್ತಡ ನಿರ್ವ​ಹಣೆ ಮೇಲೆ ಕಣ್ಣಿ​ಟ್ಟಿ​ರುವ ಬಿಸಿ​ಸಿಐ ಮಾರ್ಚ್‌ 31ರಿಂದ ಆರಂಭ​ವಾ​ಗ​ಲಿ​ರುವ 16ನೇ ಆವೃ​ತ್ತಿ​ಯ ಐಪಿ​ಎ​ಲ್‌​ನಲ್ಲೂ ಆಡಲು ಬುಮ್ರಾಗೆ ಅನು​ಮತಿ ನೀಡ​ಲಿ​ದೆಯೇ ಎಂಬುದು ಇನ್ನಷ್ಟೇ ಖಚಿ​ತ​ಗೊ​ಳ್ಳ​ಬೇ​ಕಿದೆ. ಕಳೆದ ಸೆಪ್ಟಂಬ​ರ್‌​ನಿಂದ ಸ್ಪರ್ಧಾತ್ಮಕ ಕ್ರಿಕೆ​ಟ್‌​ನಿಂದ ದೂರ ಉಳಿ​ದಿ​ರುವ ಬುಮ್ರಾ ನೇರ​ವಾಗಿ ಐಪಿ​ಎ​ಲ್‌​ನಲ್ಲಿ ಆಡು​ತ್ತಾರೆ ಎಂದು ಹೇಳ​ಲಾ​ಗು​ತ್ತಿತ್ತು.

ಮಹಿಳಾ ಐಪಿ​ಎ​ಲ್‌ಗೆ ಟಾಟಾ ಶೀರ್ಷಿಕೆ ಪ್ರಾಯೋ​ಜ​ಕ​ತ್ವ

ನವ​ದೆ​ಹ​ಲಿ: ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಮ​ಹಿಳಾ ಐಪಿ​ಎ​ಲ್‌​)ನ ಶೀರ್ಷಿಕೆ ಪ್ರಾಯೋ​ಜ​ಕ​ತ್ವ​ವನ್ನು ಟಾಟಾ ಗ್ರೂಪ್‌ ಸಂಸ್ಥೆ ತನ್ನ ತೆಕ್ಕೆಗೆ ಪಡೆ​ದು​ಕೊಂಡಿದೆ. ಟಾಟಾ ಸಂಸ್ಥೆ ಬಿಸಿ​ಸಿಐ ಜೊತೆ ಮುಂದಿನ 5 ವರ್ಷದ ಅವ​ಧಿಗೆ ಪ್ರಾಯೋ​ಜ​ಕ​ತ್ವದ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿದೆ. ಆದರೆ ಒಪ್ಪಂದ ಮೌಲ್ಯ ಬಹಿ​ರಂಗ​ಪ​ಡಿ​ಸಿಲ್ಲ. ಪುರು​ಷರ ಐಪಿ​ಎ​ಲ್‌ನ ಶೀರ್ಷಿಕೆ ಹಕ್ಕು ಕೂಡಾ ಟಾಟಾ ಸಂಸ್ಥೆ ಬಳಿ ಇದೆ. ಕಳೆದ ವರ್ಷ ವಿವೋ ಸಂಸ್ಥೆ ಬಳಿ ಇದ್ದ ಹಕ್ಕನ್ನು ಟಾಟಾ ತನ್ನ​ದಾ​ಗಿ​ಸಿ​ಕೊಂಡಿ​ತ್ತು.

Latest Videos
Follow Us:
Download App:
  • android
  • ios