* ಭಾರತ-ಆಸ್ಟ್ರೇಲಿಯಾ ಮಹಿಳಾ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಮಂಧನಾ ಮಿಂಚು* ಟೆಸ್ಟ್‌ ವೃತ್ತಿಬದುಕಿನ ಶ್ರೇಷ್ಠ ಮೊತ್ತ ದಾಖಲಿಸಿದ ಸ್ಮೃತಿ ಮಂಧನಾ* ಏಕೈಕ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕೆ ಮಳೆ ಅಡ್ಡಿ

ಗೋಲ್ಡ್‌ ಕೋಸ್ಟ್(ಅ.01)‌: ಆಸ್ಪ್ರೇಲಿಯಾ ವಿರುದ್ಧದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್‌ (Day and Night Test) ಪಂದ್ಯದಲ್ಲಿ ಭಾರತದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ (Smriti Mandhana) ಉತ್ತಮ ಪ್ರದರ್ಶನ ತೋರಿದ್ದಾರೆ. ಗುರುವಾರ ಆರಂಭಗೊಂಡ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸಿತು. ಇಡೀ ದಿನ ಕೇವಲ 44.1 ಓವರ್‌ ಆಟವಷ್ಟೇ ನಡೆಯಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುತ್ತಿರುವ ಭಾರತ, ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 132 ರನ್‌ ಗಳಿಸಿತು.

Scroll to load tweet…

ಆಕರ್ಷಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಸ್ಮೃತಿ ಮಂಧನಾ 144 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್‌ನೊಂದಿಗೆ ಅಜೇಯ 80 ರನ್‌ ಗಳಿಸಿದ್ದಾರೆ. ಸ್ಮೃತಿ ಈಗಾಗಲೇ ತಮ್ಮ ಟೆಸ್ಟ್‌ ವೃತ್ತಿಬದುಕಿನ ಶ್ರೇಷ್ಠ ಮೊತ್ತ ದಾಖಲಿಸಿದ್ದು ಚೊಚ್ಚಲ ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಮಂಧನಾ ಈ ಮೊದಲು ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) 78 ರನ್‌ ಗಳಿಸಿದ್ದೇ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿತ್ತು. ಮೊದಲ ವಿಕೆಟ್‌ಗೆ ಸ್ಮೃತಿ ಹಾಗೂ ಶಫಾಲಿ ವರ್ಮಾ 93 ರನ್‌ ಜೊತೆಯಾಟವಾಡಿದರು. 31 ರನ್‌ ಗಳಿಸಿ ಶಫಾಲಿ ವರ್ಮಾ ವಿಕೆಟ್ ಒಪ್ಪಿಸಿದರು.

Scroll to load tweet…

Women's Pink Ball Test ಇಂದಿನಿಂದ ಭಾರತ-ಆಸೀಸ್‌ ಮಹಿಳಾ ಹಗಲು-ರಾತ್ರಿ ಟೆಸ್ಟ್‌

ಇನ್ನು ಶಫಾಲಿ ವರ್ಮಾ (Shafali Verma) ಔಟಾದ ಬಳಿಕ ಸ್ಮೃತಿಗೆ ಜೊತೆಯಾದ ಪೂನಂ ರಾವತ್‌ 16 ರನ್‌ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಎರಡನೇ ವಿಕೆಟ್‌ಗೆ ಮಂಧನಾ ಹಾಗೂ ಪೂನಂ ರಾವತ್ ಎರಡನೇ ವಿಕೆಟ್‌ಗೆ ಮುರಿಯದ 39 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. 

Scroll to load tweet…

ಏಕೈಕ ಪಿಂಕ್‌ ಬಾಲ್‌ ಟೆಸ್ಟ್ (Pink Ball Test) ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್‌ ಮಾಡುವ ತೀರ್ಮಾನವನ್ನು ತಲೆಕೆಳಗಾಗುವಂತೆ ಮಾಡುವಲ್ಲಿ ಮಂಧನಾ ಹಾಗೂ ಶಫಾಲಿ ವರ್ಮಾ ಜೋಡಿ ಯಶಸ್ವಿಯಾಯಿತು. ಮೊದಲ 16 ಓವರ್‌ನಲ್ಲೇ ಈ ಜೋಡಿ 16 ಬೌಂಡರಿಗಳನ್ನು ಬಾರಿಸಿತ್ತು. ಮೊದಲಿಗೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ಮಂಧನಾ ಆ ಬಳಿಕ ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ಮೊದಲ 51 ರನ್‌ಗಳಿಸಲು ಕೇವಲ 50 ಎಸೆತಗಳನ್ನು ಬಳಸಿಕೊಂಡ ಮಂಧನಾ, ಇದಾದ ಬಳಿಕ ಇನ್ನುಳಿದ 29 ರನ್‌ ಗಳಿಸಲು ಬರೋಬ್ಬರಿ 94 ಎಸೆತಗಳನ್ನು ತೆಗೆದುಕೊಂಡರು. ಇನ್ನೊಂದು ತುದಿಯಲ್ಲಿ ಪೂನಂ ರಾವತ್ 57 ಎಸೆತಗಳನ್ನು ಎದುರಿಸಿ ಅಜೇಯ 16 ರನ್‌ ಬಾರಿಸಿದ್ದು, ಆಸೀಸ್ ಬೌಲರ್‌ಗಳ ಬೆವರಿಳಿಸಿದ್ದಾರೆ.