Asianet Suvarna News Asianet Suvarna News

ಮಹಿಳಾ ಕ್ರಿಕೆಟ್‌: ಭಾರತದ ಗೆಲುವು ಕಸಿದ ಆಫ್ರಿಕಾದ ಲೀ

ದಕ್ಷಿಣ ಆಫ್ರಿಕಾ ವಿರುದ್ದ ಮೂರನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್‌ ನೇತೃತ್ವದ ಭಾರತ ಮಹಿಳಾ ತಂಡ 6 ರನ್‌ಗಳ ರೋಚಕ ಸೋಲು ಕಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Womens Cricket South Africa Beat India by 6 runs in 3rd ODI in Lucknow kvn
Author
Lucknow, First Published Mar 12, 2021, 4:58 PM IST | Last Updated Mar 12, 2021, 4:58 PM IST

ಲಖನೌ(ಮಾ.12): ಆರಂಭಿಕ ಬ್ಯಾಟ್ಸ್‌ವುಮೆನ್‌ ಲಿಜೆಲ್ಲೆ ಲೀ ಅಜೇಯ ಶತಕ(132)ದ ನೆರವಿನಿಂದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ದ ದಕ್ಷಿಣ ಆಫ್ರಿಕಾ ತಂಡ ಡೆಕ್ವರ್ಥ್ ಲೂಯಿಸ್‌ ನಿಯಮದನ್ವಯ 6 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-1 ಅಂತರದ ಮುನ್ನಡೆ ಸಾಧಿಸಿದೆ.

ಭಾರತ ನೀಡಿದ್ದ 249 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ ನಾಯಕಿ ಲೌಲಾ ವೋಲ್ವರ್ಟ್ ವಿಕೆಟ್ ಕಳೆದುಕೊಂಡಿತು. ಇನ್ನು ಲಾರಾ ಗುಡ್ಡಾಲ್‌ ಕೂಡಾ(16) ಹೆಚ್ಚುಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ ಮೂರನೇ ವಿಕೆಟ್‌ಗೆ ಲಿಜೆಲ್ಲೆ ಲೀ ಹಾಗೂ ಮೆಘಾನ್‌ ಡು ಪ್ರೇಜ್‌ 97 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅದರಲ್ಲೂ ಆರಂಭಿಕ ಆಟಗಾರ್ತಿ ಲಿಜೆಲ್ಲೆ ಲೀ 131 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 132 ರನ್‌ ಬಾರಿಸಿ ಅಜೇಯರಾಗುಳಿದರು. ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 21 ಎಸೆತಗಳಲ್ಲಿ 26 ರನ್‌ಗಳ ಅಗತ್ಯವಿದ್ದಾಗ ಮಳೆ ಅಡ್ಡಿ ಪಡಿಸಿದ್ದರಿಂದ ಡೆಕ್ವರ್ತ್ ಲೂಯಿಸ್ ನಿಯಮದಂತೆ ಹರಿಣಗಳ ಪಡೆಯನ್ನು ಜಯಶಾಲಿ ಎಂದು ಘೋಷಿಸಲಾಯಿತು.

ಹರಿಣಗಳಿಗೆ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ ಮಹಿಳಾ ತಂಡ

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಆರಂಭದಲ್ಲೇ ರೋಡ್ರಿಗಸ್ ವಿಕೆಟ್‌ ಕಳೆದುಕೊಂಡಿತು. ಪೂನಂ ರಾವತ್ ಆಕರ್ಷಕ ಅರ್ಧಶತಕ ಹಾಗೂ ಮಿಥಾಲಿ ರಾಜ್, ಹರ್ಮನ್‌ ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ತಲಾ 36 ರನ್‌ಗಳ ನೆರವಿನಿಂದ 5 ವಿಕೆಟ್ ಕಳೆದುಕೊಂಡು 248 ರನ್‌ ಬಾರಿಸಿತ್ತು.

ಇದೀಗ ಮಿಥಾಲಿ ರಾಜ್‌ ಪಡೆ 1-2ರ ಹಿನ್ನಡೆ ಅನುಭವಿಸಿದ್ದು, ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಮಾರ್ಚ್‌ 14ರಂದು ನಡೆಯಲಿರುವ 4ನೇ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

Latest Videos
Follow Us:
Download App:
  • android
  • ios