ಮಹಿಳಾ ಏಷ್ಯಾಕಪ್ ಸೆಮೀಸ್‌ನಲ್ಲಿ ಪಾಕ್ ಬಗ್ಗುಬಡಿದ ಶ್ರೀಲಂಕಾಕೊನೆಯ ಎಸೆತದವರೆಗೂ ರೋಚಕತೆ ಕಾಯ್ದುಕೊಂಡಿದ್ದ ಪಂದ್ಯಅಕ್ಟೋಬರ್ 15ರಂದು ಏಷ್ಯಾಕಪ್ ಟ್ರೋಫಿಗಾಗಿ ಭಾರತ-ಲಂಕಾ ಫೈಟ್
ಸೈಲೆಟ್(ಅ.14): 4 ಬಾರಿ ರನ್ನರ್-ಅಪ್ ಶ್ರೀಲಂಕಾ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. 2ನೇ ಸೆಮಿಫೈನಲ್‌ನಲ್ಲಿ ತಂಡ ಪಾಕಿಸ್ತಾನ ವಿರುದ್ಧ 1 ರನ್ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 3ನೇ ಬಾರಿ ಫೈನಲ್ ಪ್ರವೇಶಿಸುವ ಪಾಕ್ ಕನಸು ಭಗ್ನಗೊಂಡಿತು.
ಮೊದಲು ಬ್ಯಾಟ್ ಮಾಡಿದ ಲಂಕಾ 6 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿತು. ಹರ್ಷಿತಾ ಮಾದವಿ 35, ಅನುಷ್ಕಾ ಸಂಜೀವನಿ 26 ರನ್ ಗಳಿಸಿದರು. ನಶ್ರಾ ಸಂಧು 3 ವಿಕೆಟ್ ಕಿತ್ತರು. ಸುಲಭ ಗುರಿ ಬೆನ್ನತ್ತಿದರೂ ಪಾಕ್‌ಗೆ ಲಂಕಾ ಬೌಲರ್‌ಗಳು ಕಂಟಕವಾದರು. ಆರಂಭಿಕ ಆಘಾತದ ಬಳಿಕ ನಾಯಕಿ ಬಿಸ್ಮಾ ಮಾರೂಫ್ 41 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆ 3 ಓವರಲ್ಲಿ ಗೆಲುವಿಗೆ 18 ರನ್ ಬೇಕಿತ್ತು. ಬಿಸ್ಮಾ ನಿರ್ಗಮನದ ಬಳಿಕ ಉಳಿದ ಬ್ಯಾಟರ್‌ಗಳು ಕೈಕೊಟ್ಟರು. ಕೊನೆ ಎಸೆತದಲ್ಲಿ 3 ರನ್ ಬೇಕಿದ್ದಾಗ ನಿದಾ ದಾರ್(26) ರನ್ ಔಟಾಗುವುದರೊಂದಿಗೆ ಲಂಕಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.
ಸ್ಕೋರ್
ಶ್ರೀಲಂಕಾ 20 ಓವರಲ್ಲಿ 122/6, ಹರ್ಷಿತಾ 35, ನಶ್ರಾ 3-17)
ಪಾಕಿಸ್ತಾನ 20 ಓವರಲ್ಲಿ 121/6 (ಬಿಸ್ಮಾ 42, ರಣವೀರ 2-17)
ಪಂದ್ಯಶ್ರೇಷ್ಠ: ಇನೋಕ ರಣವೀರ
15ಕ್ಕೆ ಫೈನಲ್ ಫೈಟ್
ಟೂರ್ನಿಯ ಫೈನಲ್ ಹಣಾಹಣಿ ಶನಿವಾರ ನಡೆಯಲಿದ್ದು, ಭಾರತ 7ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 2004ರಿಂದ ಸತತ 4 ಆವೃತ್ತಿಗಳಲ್ಲೂ ಭಾರತ, ಲಂಕಾ ವಿರುದ್ಧವೇ ಗೆದ್ದು ಚಾಂಪಿಯನ್ ಆಗಿತ್ತು. ಕಳೆದ ವರ್ಷ ಭಾರತ, ಬಾಂಗ್ಲಾದೇಶ ವಿರುದ್ಧ ಸೋತಿತ್ತು. ಲಂಕಾ ಈ ಬಾರಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕಾತರದಲ್ಲಿದೆ.
ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಸೋಲು
ಪತ್‌ರ್: ಟಿ20 ವಿಶ್ವಕಪ್‌ಗೆ ಪೂರ್ವಭಾವಿ ತಯಾರಿಯ ಭಾಗವಾಗಿ ನಡೆದ ಪಶ್ಚಿಮ ಆಸ್ಪ್ರೇಲಿಯಾ ವಿರುದ್ಧ 2ನೇ ಅಭ್ಯಾಸ ಪಂದ್ಯದಲ್ಲಿ ಭಾರತ 36 ರನ್ ಸೋಲನುಭವಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಶ್ಚಿಮ ಆಸ್ಪ್ರೇಲಿಯಾ 7 ವಿಕೆಟ್‌ಗೆ 168 ರನ್ ಕಲೆ ಹಾಕಿತು. ನಿಕ್ ಹಾಬ್ಸನ್(64), ಡಾರ್ಸಿ ಶಾರ್ಚ್(52) ತಲಾ ಅರ್ಧಶತಕಗಳ ಮೂಲಕ ತಂಡಕ್ಕೆ ಆಸರೆಯಾದರು.
Women's Asia Cup: ಥಾಯ್ಲೆಂಡ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಹರ್ಮನ್‌ಪ್ರೀತ್ ಕೌರ್ ಪಡೆ
ಭಾರತದ ಪರ ಆರ್.ಅಶ್ವಿನ್ 3, ಹರ್ಷಲ್ ಪಟೇಲ್ 2 ವಿಕೆಟ್ ಪಡೆದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ಕೆ.ಎಲ್.ರಾಹುಲ…(74) ಹೊರತುಪಡಿಸಿ ಇತರೆಲ್ಲ ಬ್ಯಾಟರ್‌ಗಳು ವಿಫಲರಾದರು. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿರಲಿಲ್ಲ. ರಿಷಭ್ ಪಂತ್(09), ದೀಪಕ್ ಹೂಡಾ(06), ಹಾರ್ದಿಕ್(17) ನಿರಾಸೆ ಮೂಡಿಸಿದರು. ಪಶ್ಚಿಮ ಆಸ್ಪ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 13 ರನ್ ಗೆಲುವು ದಾಖಲಿಸಿತ್ತು.
