ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 132 ರನ್ ಗಳಿಸಿದೆ. ದೀಪ್ತಿ ಶರ್ಮಾ 49 ರನ್ ಬಾರಿಸಿ ಸರ್ವಾಧಿಕ ಸ್ಕೋರರ್ ಎನಿಸಿದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ 

ಸಿಡ್ನಿ(ಫೆ.21): ಶೆಫಾಲಿ ವರ್ಮಾ(29) ಸ್ಫೋಟಕ ಬ್ಯಾಟಿಂಗ್ ಹಾಗೂ ಜೆಮಿಮಾ ರೋಡ್ರಿಗಜ್‌(26) ಹಾಗೂ ದೀಪ್ತಿ ಶರ್ಮಾ(49) ಆಕರ್ಷಕ ಅರ್ಧಶತಕದ ಜತೆಯಾಟದ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು 4 ವಿಕೆಟ್ ಕಳೆದುಕೊಂಡು 132 ರನ್ ಬಾರಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಸ್ಮೃತಿ ಮಂಧನಾ ಹಾಗೂ ಶೆಫಾಲಿ ವರ್ಮಾ ಭಾರತಕ್ಕೆ ಸ್ಫೋಟಕ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 4.1 ಓವರ್‌ನಲ್ಲಿ ಈ ಜೋಡಿ 10ರ ಸರಾಸರಿಯಲ್ಲಿ 41 ರನ್ ಬಾರಿಸಿತು. ಮಂಧನಾ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು 16 ವರ್ಷದ ಶಫಾಲಿ ಕೇವಲ 15 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 29 ರನ್ ಗಳಿಸಿದರು.

ನಾಟಕೀಯ ಕುಸಿತ: ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೇ 41 ರನ್‌ಗಳಿಸಿದ್ದ ಭಾರತ ಮಂಧನಾ ವಿಕೆಟ್ ಪತನದ ಬಳಿಕ ದಿಢೀರ್ ಕುಸಿತ ಕಂಡಿತು. ಕೇವಲ 6 ರನ್‌ಗಳ ಅಂತರದಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 2 ರನ್ ಗಳಿಸಿ ಸ್ಟಂಪೌಟ್ ಆದರು.

ಆಸರೆಯಾದ ದೀಪ್ತಿ- ರೋಡ್ರಿಗಜ್‌: ಒಂದು ಹಂತದಲ್ಲಿ 47 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ದೀಪ್ತಿ- ರೋಡ್ರಿಗಜ್‌ ಜೋಡಿ ಆಸರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 53 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ತಲುಪಿಸಿತು. ರೋಡ್ರಿಗಜ್‌ 26 ರನ್ ಬಾರಿಸಿದರೆ, ದೀಪ್ತಿ 49 ರನ್ ಬಾರಿಸಿ ಅಜೇಯರಾಗುಳಿದರು.

ಇನ್ನು ಆಸ್ಟ್ರೇಲಿಯಾ ಪರ ಜೆಸ್ ಜಾನ್ಸನ್ 2 ವಿಕೆಟ್ ಪಡೆದರೆ, ಕಿಮ್ಮೆನ್ಸ್ ಹಾಗೂ ಪೆರ್ರಿ ತಲಾ ಒಂದೊಂದು ವಿಕೆಟ್ ಪಡೆದರು.