ಬೆಂಗಳೂರು(ಜ.11):  ದಿ ಗ್ರೇಟ್ ವಾಲ್,  ತಡೆಗೋಡೆಯಂತೆ ನಿಂತು ಟೀಂ ಇಂಡಿಯಾವನ್ನು ಕಾಪಾಡಿದ ಹೆಗ್ಗಳಿಕೆಗೆ ರಾಹುಲ್ ದ್ರಾವಿಡ್‌ಗೆ ಮಾತ್ರ ಸಲ್ಲಲಿದೆ.  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಸಂಪಾದಿಸಿರುವ ಗೌರವ ಇನ್ಯಾರು ಸಂಪಾದಿಸಲು ಸಾಧ್ಯವಿಲ್ಲ. ಕ್ಲಾಸ್ ಪರ್ಫಾಮೆನ್ಸ್ ಮಾತ್ರವಲ್ಲ, ಶಿಸ್ತಿನ ಸಿಪಾಯಿ ರಾಹುಲ್ ದ್ರಾವಿಡ್. ಇಂದು ದ್ರಾವಿಡ್ 48ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ದಿಗ್ಗಜ ಕ್ರಿಕೆಟಿಗರು ಸೇರಿದಂತೆ ಸೆಲೆಬ್ರೆಟಿಗಳು, ಅಭಿಮಾನಿಗಳು ದ್ರಾವಿಡ್‌ಗೆ ಶುಭಹಾರೈಸಿದ್ದಾರೆ.

ದ ವಾಲ್‌ ದ್ರಾವಿಡ್‌ಗೆ 48ನೇ ಜನ್ಮದಿನದ ಸಂಭ್ರಮ; ದಿ ಬೆಸ್ಟ್ ಗಿಫ್ಟ್‌ ನೀಡಿದ ಟೀಂ ಇಂಡಿಯಾ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24,208 ರನ್ ಸಿಡಿಸಿರುವ ದ್ರಾವಿಡ್, 48 ಶತಕ ಪೂರೈಸಿದ್ದಾರೆ. ಟೆಸ್ಟ್‌ಕ್ರಿಕೆಟ್‌ನಲ್ಲಿ ಗರಿಷ್ಠ ಅಂದರೆ 210 ಕ್ಯಾಚ್ ಪಡೆದ ಸಾಧನೆ ಮಾಡಿದ್ದಾರೆ. ಆರಂಭಿಕನಿಂದ ಹಿಡಿದು ಎಲ್ಲಾ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೈ ಎನಿಸಿಕೊಂಡ ಕ್ರಿಕೆಟಿಗ ರಾಹುಲ್ ದ್ರಾವಿಡ್. ತಂಡಕ್ಕಾಗಿ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದ ಖ್ಯಾತಿ ರಾಹುಲ್ ದ್ರಾವಿಡ್‌ಗಿದೆ.

ಬಿಸಿಸಿಐ, ಐಸಿಸಿ, ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ರಾಹುಲ್ ದ್ರಾವಿಡ್‌ಗೆ ಶುಭಹಾರೈಸಿದ್ದಾರೆ.