ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ  ನಡುವಿನ ಟಿ20 ಸರಣಿ ಮುಂದೂಡಲ್ಪಟ್ಟಿದೆ. ಅಕ್ಟೋಬರ್ ಮೊದಲ ವಾರ ನಿಗದಿಯಾಗಿದ್ದ ಚುಟುಕು ಕ್ರಿಕೆಟ್ ಸರಣಿ ಮುಂದೂಡಿರುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮೆಲ್ಬೊರ್ನ್(ಆ.04): ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯಬೇಕಿದ್ದ ಟಿ20 ಸರಣಿಯನ್ನು ಆಸ್ಟ್ರೇಲಿಯಾ ಉಭಯ ತಂಡಗಳ ಸಮ್ಮತಿಯ ಮೇರೆಗೆ ಮುಂದೂಡಲ್ಪಟ್ಟಿದೆ. ಹೀಗಾಗಿ ಐಪಿಎಲ್‌ಗೆ ವಿದೇಶಿ ಆಟಗಾರರ ಲಭ್ಯತೆ ಮತ್ತಷ್ಟು ಹೆಚ್ಚಾಗಲಿದೆ.

ಹೌದು, ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಅಕ್ಟೋಬರ್ ಮೊದಲ ವಾರದಲ್ಲಿ ಟಿ20 ಸರಣಿ ನಡೆಯಬೇಕಿಯತ್ತು. ಆದರೆ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿದ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಿಂಡೀಸ್ ಮಂಡಳಿಯ ಜತೆ ಮಾತುಕತೆ ನಡೆಸಿ ಟಿ20 ಸರಣಿ ಮುಂದೂಡುವ ತೀರ್ಮಾನಕ್ಕೆ ಬಂದಿದೆ. ಈ ಟಿ20 ಸರಣಿಯು ವಿಶ್ವಕಪ್‌ಗೂ ಮುನ್ನ ಅಭ್ಯಾಸ ಪಂದ್ಯವಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಈಗ ಆ ಸರಣಿ ಮುಂದೂಡಲ್ಪಟ್ಟಿದೆ.

Scroll to load tweet…

ಈ ಟಿ20 ಸರಣಿ ಮುಂದೂಡಲ್ಪಟ್ಟಿರುವುದರಿಂದ ಉಭಯ ತಂಡಗಳ ಸ್ಟಾರ್ ಟಿ20 ಆಟಗಾರರು ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಾದಿ ಮತ್ತಷ್ಟು ಸುಗಮವಾದಂತಾಗಿದೆ.

ಬಿಸಿಸಿಐ ಕಳೆದ 10 ತಿಂಗಳಿನಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಂಬಳವನ್ನೇ ನೀಡಿಲ್ಲ..!

ಇನ್ನು ಮುಂದಿನ ವರ್ಷ ಕೂಡಾ ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ. ಇದೇ ವೇಳೆ ಸದ್ಯದ ಪರಿಸ್ಥಿತಿಯಲ್ಲಿ ಅಕ್ಟೋಬರ್ 11ರಿಂದ 17ರವರೆಗೆ ಆಸ್ಟ್ರೇಲಿಯಾ- ಭಾರತ ನಡುವಿನ ಸರಣಿ ಕೂಡಾ ನಡೆಯುವುದು ಅನುಮಾನ. ಆದರೆ ಈ ಬಗ್ಗೆ ಇದುವರೆಗೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.