ನವ​ದೆ​ಹ​ಲಿ(ಜೂ.10): ಐಪಿ​ಎಲ್‌ನಲ್ಲಿ ಜನಾಂಗೀಯ ನಿಂದನೆ ಎದು​ರಿಸಿದ್ದೆ ಎಂದಿದ್ದ ವಿಂಡೀಸ್‌ನ ಮಾಜಿ ನಾಯಕ ಡ್ಯಾರನ್‌ ಸ್ಯಾಮಿ, ಇದೀಗ ತಮ್ಮನ್ನು ‘ಕಾ​ಲು’ (ಕಪ್ಪು ವರ್ಣೀಯ) ಎಂದು ಕರೆದ ಸನ್‌ರೈಸ​ರ್ಸ್ ಹೈದ​ರಾ​ಬಾದ್‌ ತಂಡದ ಸಹ ಆಟ​ಗಾ​ರರು ಕ್ಷಮೆ ಕೇಳ​ಬೇಕು ಎಂದು ಆಗ್ರ​ಹಿ​ಸಿ​ದ್ದಾರೆ. 

ಕಳೆದ ಮೂರು ದಿನಗಳ ಹಿಂದಷ್ಟೇ ವಿಂಡೀಸ್ ಆಲ್ರೌಂಡರ್ ಸ್ಯಾಮಿ, 2013-14ರ ಐಪಿಎಲ್ ಆಡುವ ವೇಳೆ ನಾನು ಜನಾಂಗೀಯ ನಿಂದನೆ ಎದುರಿಸಿದ್ದೆ. ಕೆಲವರು ನನ್ನನ್ನು ಹಾಗೂ ಲಂಕಾ ಆಲ್ರೌಂಡರ್ ತಿಸಾರ ಪೆರೆರಾ ಅವರನ್ನು ಕಾಲು(ಕರಿಯ) ಎಂದು ಕರೆಯುತ್ತಿದ್ದರು. ನನಗಾಗ ಆ ಪದದ ಅರ್ಥವೇ ಗೊತ್ತಿರಲಿಲ್ಲ. ಆದರೆ ಅದರ ನಿಜವಾದ ಅರ್ಥವೇನು ಎಂದು ಗೊತ್ತಾದ ಮೇಲೆ ಅವರ ಮೇಲೆ ಕೋಪ ಬರುತ್ತಿದೆ ಎಂದಿದ್ದರು. 'ಕಾಲು' ಅಂದರೆ ನಾನಾಗ ಬಲಿಷ್ಠ ವ್ಯಕ್ತಿ ಎನ್ನುತ್ತಿದ್ದಾರೆ ಎಂದು ಭಾವಿಸಿದ್ದೆ ಎಂದು ಸ್ಯಾಮಿ ಹೇಳಿದ್ದರು. 

2014ರಲ್ಲಿ ಇಶಾಂತ್‌ ಶರ್ಮಾ ಸಾಮಾ​ಜಿಕ ತಾಣದಲ್ಲಿ ಹಾಕಿದ್ದ ಫೋಟೋ ಶೀರ್ಷಿಕೆಯಲ್ಲಿ ‘ಕಾ​ಲು’ ಎನ್ನುವ ಪದಕ ಬಳ​ಸಿ​ದ್ದು ಬಹಿ​ರಂಗಗೊಂಡಿದ್ದು, ಫೋಟೋ ವೈರಲ್‌ ಆಗಿದೆ. ನಾನು ಭುವಿ, ಕಾಲು ಮತ್ತು ಗನ್ ಸನ್‌ರೈಸರ್ಸ್ ಎಂದು ಇಶಾಂತ್ ಶರ್ಮಾ ವೇಗಿಗಳಾದ ಭುವನೇಶ್ವರ್ ಕುಮಾರ್, ಡ್ಯಾರನ್ ಸ್ಯಾಮಿ, ಡೇಲ್ ಸ್ಟೇನ್ ಜತೆಗಿನ ಸೆಲ್ಫಿ ಹಂಚಿಕೊಂಡಿದ್ದರು. 

ಐಪಿ​ಎಲ್‌ನಲ್ಲಿನ ಆ 'ಕರಾಳ' ಘಟನೆಯನ್ನು ಬಿಚ್ಚಿಟ್ಟ ವಿಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ

ಅಮೆರಿಕದಲ್ಲಿ ನಡೆದ ಆಫ್ರಿಕಾ ಮೂಲದ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರನ್ನು ಅಮೆರಿಕದ ಬಿಳಿಯ ಪೊಲೀಸ್ ಮೊಣಕಾಲಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಕಪ್ಪು ವರ್ಣಿಯರ ಮೇಲಿನ ದೌರ್ಜನ್ಯಕ್ಕೆ ಜನರು ಬೀದಿಗಿಳಿದು ಪ್ರತಿಭಟಿಸಿದ್ದರು. ಈ ಪ್ರತಿಭಟನೆಗೆ ವಿಂಡೀಸ್‌ನ ಕೆಲ ಕ್ರಿಕೆಟಿಗರು ಸಾಥ್ ನೀಡಿದ್ದಾರೆ