Asianet Suvarna News Asianet Suvarna News

ಟಿ20 ಕ್ರಿಕೆಟ್‌ನಲ್ಲಿ ಯಾರೂ ನಿರ್ಮಿಸದ ದಾಖಲೆ ಬರೆದ ಡ್ವೇನ್ ಬ್ರಾವೋ..!

ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Windies all rounder Dwayne Bravo becomes first bowler to 500 wickets in T20s
Author
Port of Spain, First Published Aug 28, 2020, 5:29 PM IST

ಪೋರ್ಟ್‌ ಆಫ್‌ ಸ್ಪೇನ್‌(ಆ.28): ವೆಸ್ಟ್‌ ಇಂಡೀಸ್‌ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಟ ದಾಖಲೆ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬ್ರಾವೋ 500 ವಿಕೆಟ್‌ ಪಡೆಯುವ ಮೂಲಕ ಈ ಸಾಧನೆ ಮಾಡಿದ ಜಗತ್ತಿನ ಮೊದಲ ಬೌಲರ್ ಎನ್ನುವ ಕೀರ್ತಿಗೆ ಡಿಜೆ ಬ್ರಾವೋ ಪಾತ್ರರಾಗಿದ್ದಾರೆ.

ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌)ನಲ್ಲಿ ಬ್ರಾವೋ ಈ ಮೈಲಿಗಲ್ಲು ಬರೆದಿದ್ದಾರೆ. ಸಿಪಿಎಲ್‌ ಟೂರ್ನಿಯಲ್ಲಿ ಟ್ರಿನಬಾಗೊ ನೈಟ್‌ ರೈಡರ್ಸ್‌ ತಂಡದ ಬ್ರಾವೋ, ಸೇಂಟ್‌ ಲೂಸಿಯಾ ಝೌಕ್ಸ್‌ ತಂಡದ ವಿರುದ್ಧದ ಪಂದ್ಯದಲ್ಲಿ ಈ ವಿಶೇಷ ದಾಖಲೆ ಮಾಡಿದರು. ಬರೋಬ್ಬರಿ ತಾವಾಡಿದ 459ನೇ ಟಿ20 ಪಂದ್ಯದಲ್ಲಿ ಬ್ರಾವೋ ಈ ಸಾಧನೆ ಮಾಡಿದ್ದಾರೆ

ಸಿಪಿಎಲ್‌ನಲ್ಲಿ 100 ವಿಕೆಟ್‌, ಅಂತಾರಾಷ್ಟ್ರೀಯ ಟಿ20ಯಲ್ಲಿ 59 ವಿಕೆಟ್‌, ಐಪಿಎಲ್‌, ಬಾಂಗ್ಲಾ ಪ್ರೀಮಿಯರ್‌ ಲೀಗ್‌, ಪಾಕಿಸ್ತಾನ ಸೂಪರ್‌ ಲೀಗ್‌ ಸೇರಿದಂತೆ ಇತರೆ ಟಿ20 ಟೂರ್ನಿಗಳಲ್ಲಿ ಬ್ರಾವೋ ಮುನ್ನೂರಕ್ಕೂ ಅಧಿಕ ವಿಕೆಟ್‌ ಪಡೆದಿದ್ದಾರೆ. ಇನ್ನೂ ಕಾಕಾತಾಳೀಯವೆಂದರೆ ಸಿಎಪಿಎಲ್‌ನಲ್ಲಿ ತಾವಾಡಿದ ನೂರನೇ ಪಂದ್ಯದಲ್ಲೇ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಆಟಗಾರರ ಸಂಪೂರ್ಣ ರಕ್ಷಣೆಗೆ ಇನ್ಶೂರೆನ್ಸ್- ಮ್ಯಾಕ್ಸ್ ಜೊತೆ RCB ಒಪ್ಪಂದ!

ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಅನುಭವಿ ಆಲ್ರೌಂಡರ್ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ 300 ಹಾಗೂ 400 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿದ್ದರು. ಇದೀಗ 500 ವಿಕೆಟ್ ವಿಕೆಟ್ ಪಡೆದ ಸಾಧನೆಯು ಬ್ರಾವೋ ಪಾಲಾಗಿದೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಲಸಿತ್‌ ಮಲಿಂಗಾ (389), ಸುನಿಲ್‌ ನರೇನ್‌ (383) ನಂತರದ ಸ್ಥಾನದಲ್ಲಿದ್ದಾರೆ.
 

Follow Us:
Download App:
  • android
  • ios