ಬೆಂಗಳೂರು(ಆ.28) : ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್  ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ 20 ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನೊಂದಿಗೆ ಅಧಿಕೃತ ಪಾಲುದಾರಿಕೆಯನ್ನು ಪ್ರಕಟಿಸಿದೆ.  ಮ್ಯಾಕ್ಸ್ ಲೈಫ್ ಎರಡನೇ ವರ್ಷಗಳ ಅವಧಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಧಿಕೃತ ಜೀವ ವಿಮಾ ಪಾಲುದಾರರಾಗಲಿದೆ. ತಂಡದ ಅಧಿಕೃತ ಜೀವ ವಿಮಾ ಪಾಲುದಾರರಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ T20 ಯ 13 ನೇ ಆವೃತ್ತಿಯ ಆರ್‌ಸಿಬಿಯ ಸಮವಸ್ತ್ರದ ಪಾಲುದಾರರೂ ಕೂಡ ಆಗಿದ್ದಾರೆ.

ಗ್ಯುಡ್‌ ನ್ಯೂಸ್‌ ನೀಡಿದ ವಿರುಷ್ಕಾ - 2021 ಜನವರಿಗೆ ಬರಲಿರುವ ಹೊಸ ಅತಿಥಿ

ಪ್ರತಿವರ್ಷ ಐಪಿಎಲ್ ತಂಡಗಳಿಗೆ ಹಲವು ವಾಣಿಜ್ಯ ಸಹಭಾಗಿತ್ವ ದೊರೆಯುತ್ತದೆ. ಆದರೆ, ಆಟದೊಂದಿಗಿನ ಒಡನಾಟದ ಮೂಲಕ ಜೀವನದ ಅಪಾಯಗಳಂತಹ ಪ್ರಮುಖ ಜೀವನ ಘಟನೆಗಳಿಗೆ ಸೀಮಿತ ಸಹಭಾಗಿತ್ವ ದೊರೆಯುತ್ತದೆ.

ಒಂದು ತಪ್ಪು ಇಡೀ ಟೂರ್ನಿಯನ್ನೇ ಹಾಳು ಮಾಡಬಹುದು ಎಚ್ಚರ ಎಂದ ನಾಯಕ ಕೊಹ್ಲಿ

ಸಮಗ್ರ ಕ್ರಿಕೆಟ್ ಗೇರ್ ಆಟಗಾರರನ್ನು ದೈಹಿಕ ಅಪಾಯಗಳು ಮತ್ತು ಗಾಯಗಳಿಂದ ತಡೆಯುವಂತೆ, ಜೀವ ವಿಮೆಯ ರೂಪದಲ್ಲಿ ಕೂಡ ರಕ್ಷಣಾತ್ಮಕ ಗೇರ್ ಅಗತ್ಯವಿರುತ್ತದೆ. ಇದು ಹಣಕಾಸಿನ ಅನಿಶ್ಚಿತತೆಯನ್ನು ರಕ್ಷಿಸುತ್ತದೆ.

 ಈ ಸಹಭಾಗಿತ್ವವು ಆರ್‌ಸಿಬಿ ಕ್ರಿಕೆಟಿಗರಿಗೆ ‘ಪ್ರೊಟೆಕ್ಷನ್ ಆನ್ ದಿ ಫ್ರಂಟ್ ಫೂಟ್’ ನೊಂದಿಗೆ ಆಡಲು ಪ್ರೇರಣೆ ನೀಡುವುದಲ್ಲದೆ, ಇತರ ಅಭಿಮಾನಿಗಳಿಗೆ ಜೀವ ವಿಮೆಯನ್ನು ಹೊಂದಲು ಪ್ರೋತ್ಸಾಹಿಸುತ್ತದೆ. ಕಂಪನಿಯ ನಂಬಿಕೆಯಾದ 'ಯು ಆರ್ ದಿ ಡಿಫರೆನ್ಸ್'  ಸಿದ್ಧಾಂತವನ್ನು  ಅನುಸರಿಸುತ್ತದೆ. ಒಬ್ಬ ವ್ಯಕ್ತಿಯಾಗಿ, 'ನೀವು', ನಿಮ್ಮ ಪ್ರೀತಿಪಾತ್ರರ ಜೀವನದ ಕಷ್ಟಗಳಿಗೆ ನೆರವಾಗಲು ಸಹಾಯ ಮಾಡಲಿದೆ.

 ವಿಮೆ ಆರ್ಥಿಕ ರಕ್ಷಣೆಯ ಅತ್ಯಂತ ಮೂಲಭೂತ ಸೌಕರ್ಯವಾಗಿದೆ. ಭಾರತ ಯುವ ದೇಶವಾಗಿದ್ದು, ಯುವಜನರೊಂದಿಗೆ ಸಂಪರ್ಕ ಸಾಧಿಸಲು ಟಿ 20 ಉತ್ತಮ ವೇದಿಕೆ ಕಲ್ಪಿಸುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ಸತತ ಎರಡನೇ ವರ್ಷವೂ ಅವರ ಅಧಿಕೃತ ಜೀವ ವಿಮಾ ಪಾಲುದಾರರಾಗಲು ನಮಗೆ ಸಂತೋಷವಾಗಿದೆ. ನಮ್ಮ ಪಾಲುದಾರಿಕೆಯ ಮೂಲಕ, ಉತ್ತಮ ಆರ್ಥಿಕ ರಕ್ಷಣೆಯ ಸಂದೇಶದೊಂದಿಗೆ ತಂಡದ  ಕ್ರಿಯಾತ್ಮಕ ಯುವ ಪ್ರೇಕ್ಷಕರ ನೆಲೆಯನ್ನು ತಲುಪುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಪಾಲುದಾರಿಕೆಯೊಂದಿಗೆ, ಜೀವನದ ಅನಿಶ್ಚಿತತೆಗಳ ವಿರುದ್ಧ ಆರ್ಥಿಕ ರಕ್ಷಣೆಯ ಅತ್ಯಂತ ವ್ಯಾಪಕವಾದ ಸ್ವರೂಪವನ್ನು ಸ್ವೀಕರಿಸಲು ಜೀವ ವಿಮೆ ಮತ್ತು ಮುಖ್ಯವಾಗಿ ಟರ್ಮ್ ಇನ್ಶುರೆನ್ಸ್ ಅನ್ನು ಪರಿಗಣಿಸಲು ಯುವಕರನ್ನು ಪ್ರೋತ್ಸಾಹಿಸುವ ಬಯಕೆ ಹೊಂದಿದ್ದೇವೆ ಎಂದು  ಮ್ಯಾಕ್ಸ್ ಲೈಫ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರಶಾಂತ್ ತ್ರಿಪಾಠಿ ಹೇಳಿದರು.

ಕಾಂತರ್ ಅವರ ಸಹಯೋಗದೊಂದಿಗೆ ನಡೆಸಿದ ಮ್ಯಾಕ್ಸ್ ಲೈಫ್‌ನ ಇತ್ತೀಚಿನ ಇಂಡಿಯಾ ಪ್ರೊಟೆಕ್ಷನ್ ಕ್ವಾಟಿಯಂಟ್ ಎಕ್ಸ್‌ಪ್ರೆಸ್ ಸಮೀಕ್ಷೆಯ ಪ್ರಕಾರ, ಕೋವಿಡ್‌-19 ಸಮಯದಲ್ಲಿ, ಕೇವಲ ಶೇ.51ರಷ್ಟು ಜನರು ಪ್ರಸ್ತುತ ಸಂದರ್ಭಗಳಲ್ಲಿ ಆರ್ಥಿಕವಾಗಿ ಸುರಕ್ಷಿತವೆಂದು ಭಾವಿಸಿದ್ದಾರೆ. ಜೊತೆಗೆ, ಕೇವಲ ಶೇ.36 ಜನರು ಮಾತ್ರ ಅವಧಿಯ ವಿಮೆಯನ್ನು ಹೊಂದದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ನಮ್ಮ ಸುತ್ತಲಿನ ಅನಿಶ್ಚಿತತೆಗಳನ್ನು ಗಮನಿಸಿದರೆ, ಕುಟುಂಬ ಮತ್ತು ಪ್ರೀತಿಪಾತ್ರರ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಟರ್ಮ್ ಇನ್ಶುರೆನ್ಸ್ ಅತ್ಯಗತ್ಯವಾಗಿ ಹೊಂದಿರಬೇಕಾದ ಸಾಧನವಾಗಿದೆ ಎಂದರು.

ಪಾಲುದಾರಿಕೆಯ ಕುರಿತು ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧ್ಯಕ್ಷ ಸಂಜೀವ್ ಚುರಿವಾಲಾ, “ಆಟಗಾರರ ರಕ್ಷಣೆಯ ಜೊತೆಗೆ, ಆರ್ಥಿಕ ಅಭಿವ್ಯಕ್ತಿ ಎಂದರೆ ಸಮಾನ ಚಿಂತನೆ ಕೂಡ ಮಾಡಬೇಕಿದೆ. ಈ ಸಹಭಾಗಿತ್ವವು ಇಂದಿನ ಜಗತ್ತಿನಲ್ಲಿ ಆರ್ಥಿಕ ರಕ್ಷಣೆಯ ಮಹತ್ವದ ಸಂದೇಶವನ್ನು ನೀಡುವ ಗುರಿಯನ್ನು ಹೊಂದಿದೆ ” ಎಂದರು.