ವಿಲ್ ಯು ಮ್ಯಾರಿ ಮಿ, ಅಭಿಮಾನಿಗೆ ಗುಲಾಬಿ ನೀಡಿ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ!
ನೆಚ್ಚಿನ ಕ್ರಿಕೆಟಿಗರು ಹರಸಹಾಸ ಮಾಡಿ ಭೇಟಿಯಾಗಿ, ಅಥವಾ ಗ್ಯಾಲರಿಯಲ್ಲಿ ಕುಲಿತು ಪ್ಲೇಕಾರ್ಡ್ ಮೂಲಕ ಪ್ರೇಮ ನಿವೇದನೆ ಮಾಡಿದ ಹಲವು ಉದಾಹರಣೆಗಳಿವೆ. ಇದೀಗ ನಾಯಕ ರೋಹಿತ್ ಶರ್ಮಾ ಅಭಿಮಾನಿಯೊಬ್ಬರಿಗೆ ಗುಲಾಬಿ ಹೂವು ನೀಡಿ ವಿಲ್ ಯು ಮ್ಯಾರಿ ಮಿ ಎಂದು ಪ್ರಪೋಸ್ ಮಾಡಿದ್ದಾರೆ. ಆದರೆ ಈ ಲವ್ ಸ್ಟೋರಿಯಲ್ಲಿ ಮತ್ತೊಂದು ಟ್ವಿಸ್ಟ್ ಇದೆ.
ವಿಶಾಖಪಟ್ಟಣಂ(ಮಾ.19): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿರಾಸೆ ಅನುಭವಿಸಿದೆ. ಇತ್ತ ಟೀಂ ಇಂಡಿಯಾ ಬ್ಯಾಟಿಂಗ್‌ನಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ವಿಡಿಯೋವೊಂದು ಭಾರಿ ವೈರಲ್ ಆಗಿದೆ. 2ನೇ ಪಂದ್ಯಕ್ಕಾಗಿ ವಿಶಾಖಪ್ಟಣಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಸ್ವಾಗತಿಸಲು ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಈ ವೇಳೆ ಅಭಿಯಾನಿ ಸಂಬ್ರಮದಿಂದ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ಇದೇ ವೇಳೆ ಆಗಮಿಸಿದ ರೋಹಿತ್ ಶರ್ಮಾ ಅಭಿಮಾನಿಗಳು ಕೈಯಲ್ಲಿದ್ದ ಗುಲಾಬಿ ಹೂವು ನೀಡಿ ವಿಲ್ ಯು ಮ್ಯಾರಿ ಮಿ ಎಂದು ಪ್ರಪೋಸ್ ಮಾಡಿದ್ದಾರೆ.
ರೋಹಿತ್ ಶರ್ಮಾ ಪ್ರಪೋಸ್ ಮಾಡಿದ್ದು ಪುರುಷ ಅಭಿಮಾನಿಗೆ. ಈ ಅಭಿಮಾನಿ ವಿಮಾನ ನಿಲ್ದಾಣದಲ್ಲಿ ಸೆಲ್ಫಿ ವಿಡಿಯೋ ಮೂಲಕ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ತನ್ನ ವಿಡಿಯೋ ಸೆರೆ ಹಿಡಿಯುತ್ತಿದ್ದ. ಹರಸಾಹಸ ಪಟ್ಟು ಕ್ರಿಕೆಟಿಗರ ವಿಡಿಯೋ ಮಾಡುತ್ತಿದ್ದ. ಇದೇ ದಾರಿಯಲ್ಲಿ ಸಾಗಿ ಬಂದ ರೋಹಿತ್ ಶರ್ಮಾ, ಕೈಯಲ್ಲಿದ್ದ ಗುಲಾಬಿ ಹೂವನ್ನು ನೀಡಿ, ಇದನ್ನು ತೆಗೆದುಕೊಳ್ಳಿ, ನಿಮಗಾಗಿ ಎಂದರು. ಇದಕ್ಕೆ ಅಭಿಮಾನಿ ಧನ್ಯವಾದ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬೆನ್ನಲ್ಲೆ ರೋಹಿತ್ ಶರ್ಮಾ ವಿಲ್ ಯು ಮ್ಯಾರಿ ಮಿ ಎಂದು ಪ್ರಪೋಸ್ ಮಾಡಿದ್ದಾರೆ. ರೋಹಿತ್ ಶರ್ಮಾ ಗುಲಾಬಿ ನೀಡಿದ ಬೆನ್ನಲ್ಲೇ ಶಾಕ್ ಆಗಿದ್ದ ಅಭಿಮಾನಿ, ವಿಲ್ ಯು ಮ್ಯಾರಿ ಮಿ ಅನ್ನೋ ಪ್ರಪೋಸ್‌ನಿಂದ ಮತ್ತಷ್ಟು ಶಾಕ್ ಆಗಿದ್ದಾರೆ.
ಭಾರತ ಆಸ್ಟ್ರೇಲಿಯಾ ಏಕದಿನ ನಡುವೆ ಆಸ್ಕರ್ ಗೆದ್ದ RRR ನಾಟು ನಾಟು ಹಾಡಿಗೆ ಕೊಹ್ಲಿ ಡ್ಯಾನ್ಸ್!
ರೋಹಿತ್ ಶರ್ಮಾ ಪ್ರಪೋಸ್ ಮಾಡಿದ ವಿಡಿಯೋ ಭಾರಿ ವೈರಲ್ ಆಗಿದೆ. ಅಭಿಮಾನಿಗೆ ಸರ್ಪ್ರೈಸ್ ನೀಡಿದ ರೋಹಿತ್ ಶರ್ಮಾ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಅಭಿಮಾನಿಗೂ ಸ್ಮರಣೀಯ ಕ್ಷಣವಾಗಿದೆ. ಈ ವಿಡಿಯೋ ಕ್ಷಣಾರ್ಧದಲ್ಲೇ ಲಕ್ಷ್ಕಕೂ ಅಧಿಕ ವೀವ್ಸ್ ಹಾಗೂ ಕಮೆಂಟ್ ಪಡೆದಿದೆ.
ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ದ್ವಿತೀಯ ಏಕದಿನ ಪಂದ್ಯದಲ್ಲಿ ತಂಡ ಸೇರಿಕೊಂಡಿದ್ದಾರೆ. ಆದರೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಕೇವಲ 13 ರನ್ ಸಿಡಿಸಿ ನಿರಾಸೆ ಅನುಭವಿಸಿದ್ದಾರೆ. ರೋಹಿತ್ ಮಾತ್ರವಲ್ಲ, ಟೀಂ ಇಂಡಿಯಾದ ಬಹುತೇಕ ಬ್ಯಾಟ್ಸ್‌ಮನ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ವಿರಾಟ್ ಕೊಹ್ಲಿ 31 ರನ್ ಹಾಗೂ ಅಕ್ಸರ್ ಪಟೇಲ್ 29 ರನ್ ಸಿಡಿಸಿದ್ದಾರೆ.ಇವರನ್ನು ಹೊರತುಪಡಿಸಿದರೆ ಹೆಚ್ಚಿನ ಬ್ಯಾಟ್ಸ್‌ಮನ್ ಎರಡಂಕಿ ದಾಟಿಲ್ಲ. ಕೇವಲ 26 ಓವರ್‌ಗಳಲ್ಲಿ ಭಾರತ 117 ರನ್‌ಗೆ ಆಲೌಟ್ ಆಗಿದೆ.
ತಮ್ಮ ಭಾವನ ಮದುವೆಯಲ್ಲಿ ಬಿಂದಾಸ್ ಸ್ಟೆಪ್ಸ್ ಹಾಕಿದ ಕ್ಯಾಪ್ಟನ್ ರೋಹಿತ್ ಶರ್ಮಾ..!