ತಮ್ಮ ಭಾವನ ಮದುವೆಯಲ್ಲಿ ಬಿಂದಾಸ್ ಸ್ಟೆಪ್ಸ್‌ ಹಾಕಿದ ಕ್ಯಾಪ್ಟನ್ ರೋಹಿತ್ ಶರ್ಮಾ..!

* ಆಸೀಸ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯ
* ರೋಹಿತ್ ಅನುಸ್ಥಿತಿಯಲ್ಲಿ ಹಾರ್ದಿಕ್‌ ಪಾಂಡ್ಯಗೆ ನಾಯಕ ಪಟ್ಟ
* ತಮ್ಮ ಭಾವನ ಮದುವೆಯಲ್ಲಿ ರೋಹಿತ್ ಶರ್ಮಾ ಬಿಂದಾಸ್‌ ಸ್ಟೆಪ್ಸ್

Rohit Sharma Shows Never Seen Before Dance Moves At Brother In Law Wedding video goes viral kvn

ಮುಂಬೈ(ಮಾ.17): ಭಾರತ ಕ್ರಿಕೆಟ್‌ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್‌ ಪಾಂಡ್ಯ, ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ವೈಯುಕ್ತಿಕ ಕಾರಣ ನೀಡಿ ರೋಹಿತ್ ಶರ್ಮಾ, ಆಸೀಸ್‌ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದೀಗ ರೋಹಿತ್ ಶರ್ಮಾ, ತಮ್ಮ ಭಾವನ ಮದುವೆಯಲ್ಲಿ ಬಿಂದಾಸ್‌ ಸ್ಟೆಪ್ಸ್‌ ಹಾಕಿ ಗಮನ ಸೆಳೆದಿದ್ದಾರೆ.

ರೋಹಿತ್ ಶರ್ಮಾ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದೇಕೆ ಎನ್ನುವ ಕುರಿತಂತೆ ಬಿಸಿಸಿಐ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಆದರೆ ಇದೀಗ ರೋಹಿತ್ ಶರ್ಮಾ, ತಮ್ಮ ಭಾವನ ಮದುವೆಯಲ್ಲಿ ಪಾಲ್ಗೊಂಡಿರುವುದರಿಂದ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಿರುವುದೇಕೆ ಎನ್ನುವ ಮಾಹಿತಿ ಖಚಿತವಾಗಿದೆ. ತಮ್ಮ ಭಾವನ ಮದುವೆಯಲ್ಲಿ ರೋಹಿತ್ ಶರ್ಮಾ, ಬಿಂದಾಸ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಕೆಲವು ನೆಟ್ಟಿಗರು, "ರೋಹಿತ್ ಶರ್ಮಾ, ಅತ್ಯುತ್ತಮವಾಗಿ ಡ್ಯಾನ್ಸ್‌ ಮಾಡಿದ್ದಾರೆ ಎಂದು ಗುಣಗಾನ ಮಾಡಿದರೆ, ಮತ್ತೆ ಕೆಲವರು ರೋಹಿತ್ ಶರ್ಮಾ ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎನ್ನುವುದರ ಪ್ರತಿಬಿಂಬವಾಗಿದೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

IPL ಟೂರ್ನಿಗಿಂತ BBL ಟೂರ್ನಿ ಬೆಸ್ಟ್‌ ಎಂದ ಬಾಬರ್ ಅಜಂಗೆ ಖಡಕ್ ತಿರುಗೇಟು ಕೊಟ್ಟ ಹರ್ಭಜನ್ ಸಿಂಗ್..!

ಮೊದಲ ಏಕದಿನ ಪಂದ್ಯ ಮುಕ್ತಾಯದ ಬಳಿಕ ರೋಹಿತ್ ಶರ್ಮಾ, ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳಲಿದ್ದು, ಎರಡನೇ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಮೊದಲ ಏಕದಿನ ಪಂದ್ಯಕ್ಕೆ ಉಭಯ ತಂಡಗಳು ಹೀಗಿವೆ ನೋಡಿ:

ಭಾರತ: ಇಶಾನ್‌ಕಿಶನ್, ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಕೆ ಎಲ್ ರಾಹುಲ್‌, ಹಾರ್ದಿ​ಕ್‌ ಪಾಂಡ್ಯ​(​ನಾ​ಯ​ಕ), ರವೀಂದ್ರ ಜಡೇಜಾ, ಶಾರ್ದೂಲ್‌ ಶಾರ್ದೂಲ್, ಮೊಹಮ್ಮದ್ ಸಿರಾಜ್‌, ಮೊಹಮ್ಮದ್ ಶಮಿ.

ಆಸ್ಪ್ರೇ​ಲಿ​ಯಾ: ಆಸ್ಪ್ರೇ​ಲಿ​ಯಾ: ಮಿಚೆಲ್ ಮಾರ್ಷ್, ಟ್ರಾವಿಸ್ ಹೆಡ್‌, ಸ್ಟೀವ್‌ ಸ್ಮಿತ್‌​(​ನಾ​ಯ​ಕ), ಮಾರ್ನಸ್ ಲಬು​ಶೇನ್‌, ಗ್ಲೆನ್ ಮ್ಯಾಕ್ಸ್‌​ವೆಲ್‌, ಕ್ಯಾಮರೋನ್ ಗ್ರೀನ್‌, ಮಾರ್ಕಸ್ ಸ್ಟೋನಿಸ್, ಜೋಶ್ ಇಂಗ್ಲಿಶ್(ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಶಾನ್ ಅಬ್ಬೋಟ್

Latest Videos
Follow Us:
Download App:
  • android
  • ios