ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕುರಿತಂತೆ ಮೊದಲ ಪ್ರತಿಕ್ರಿಯೆ ನೀಡಿದ ಸೌರವ್ ಗಂಗೂಲಿತಾವು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದ ದಾದಾಜನವರಿ 20ರಿಂದ ಆರಂಭಗೊಳ್ಳಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ
ನವದೆಹಲಿ(ಜು.21): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ, ಸದ್ಯದಲ್ಲಿಯೇ ಕ್ರಿಕೆಟ್ ಆಡಲು ಮೈದಾನಕ್ಕಿಳಿಯಲಿದ್ದಾರೆ ಎಂದೆಲ್ಲ ವರದಿಯಾಗಿತ್ತು. ಪ್ರಿನ್ಸ್ ಆಫ್ ಕೋಲ್ಕತಾ ಖ್ಯಾತಿಯ ಸೌರವ್ ಗಂಗೂಲಿ, ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಈ ವಿಚಾರದ ಕುರಿತಂತೆ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದು, ಈ ವರದಿಯು ಸತ್ಯಕ್ಕೆ ದೂರವಾಗಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರು ಈ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದಾದಾ, ತಾವು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ದಿಗ್ಗಜ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸೂಪ್ ಪಠಾಣ್ ಸೇರಿದಂತೆ ಹಲವು ಕ್ರಿಕೆಟಿಗರು ಈ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನೊಂದು ವಿಚಾರವೇನೆಂದರೇ, ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ (legends league cricket) ಅಧಿಕೃತ ಟ್ವಿಟರ್ ಖಾತೆಯಿಂದಲೇ ಸೌರವ್ ಗಂಗೂಲಿ ಫೋಟೋದೊಂದಿಗೆ ಅವರು ಕೂಡಾ ಈ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪೋಸ್ಟ್ ಮಾಡಲಾಗಿತ್ತು. ಇನ್ನು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆಹಮಾನ್ ರೆಹೆಜಾ, ಸೌರವ್ ಗಂಗೂಲಿ ಸಾಕಷ್ಟು ವರ್ಷಗಳ ಬಳಿಕ ಮೈದಾನದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ನಮ್ಮ ವೀಕ್ಷಕರಿಗೂ ಇದು ಒಳ್ಳೆಯ ಸನ್ನಿವೇಶವಾಗಬಹುದು. ನಾವು ತುಂಬಾ ಆದರಪೂರ್ವಕವಾಗಿಯೇ ಅವರನ್ನು ನಮ್ಮ ಲೆಜೆಂಡ್ಸ್ ಕುಟಂಬಕ್ಕೆ ಸ್ವಾಗತಿಸುತ್ತಿದ್ದೇವೆ. ನಾವೆಲ್ಲರೂ ದಾದಾ ಅವರ ಕೆಲವು ಅದ್ಭುತ ಶಾಟ್‌ಗಳನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದೇವೆ ಎಂದು ಹೇಳಿದ್ದರು.
ಕಳೆದ ಐಸಿಸಿ ಟಿ20 ವಿಶ್ವಕಪ್ನಲ್ಲಿ ಆಡಿರಲಿಲ್ಲ, ಈ ಸಲ ಇವರೇ ಸ್ಟಾರ್ ಪ್ಲೇಯರ್ಸ್..!
ಚೊಚ್ಚಲ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್‌ನ ಮಾಜಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಆರು ದೇಶಗಳ ಆಟಗಾರರನ್ನೊಳಗೊಂಡ ಮೂರು ತಂಡಗಳನ್ನಾಗಿ ವಿಂಗಡಿಸಲಾಗಿದ್ದು, ಟೂರ್ನಿಯಲ್ಲಿ ಇಂಡಿಯಾ ಮಹಾರಾಜಾಸ್, ಏಷ್ಯನ್ ಲಯನ್ಸ್, ವಲ್ಡ್‌ರ್ ಜೈಂಟ್ಸ್ ಎನ್ನುವ 3 ತಂಡಗಳು ಸ್ಪರ್ಧಿಸಲಿದ್ದು, ಒಮಾನ್‌ನ ಮಸ್ಕಟ್‌ನಲ್ಲಿ ಪಂದ್ಯಗಳು ನಡೆಯಲಿವೆ.
ಲೆಜೆಂಡ್ಸ್ ಕ್ರಿಕೆಟ್‌ನಲ್ಲಿ ಆಡುವುದಿಲ್ಲ: ಸಚಿನ್
ನವದೆಹಲಿ: ಮುಂಬರುವ ಜನವರಿ 20ರಿಂದ ಆರಂಭಗೊಳ್ಳಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್(ಎಲ್‌ಎಲ್‌ಸಿ) ಟೂರ್ನಿಯಲ್ಲಿ ತಾವು ಆಡುವುದಿಲ್ಲ ಎಂದು ದಿಗ್ಗಜ ಬ್ಯಾಟರ್ ಸಚಿನ್ ತೆಂಡುಲ್ಕರ್ ಸ್ಪಷ್ಟಪಡಿಸಿದ್ದಾರೆ. ನಿವೃತ್ತಿ ಹೊಂದಿರುವ ಕ್ರಿಕೆಟಿಗರು ಸೇರಿ ಆಡುವ ಲೀಗ್‌ಗೆ ಇತ್ತೀಚೆಗಷ್ಟೇ ಭಾರತ ತಂಡ ಪ್ರಕಟಗೊಂಡಿತ್ತು. ಟೂರ್ನಿಯ ಪ್ರೊಮೋದಲ್ಲಿ ಸಚಿನ್ ಸಹ ಆಡಲಿದ್ದಾರೆ ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಹೇಳಿದ್ದರು. ಇದೀಗ ಸಚಿನ್ ತಾವು ಆಡುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಕಾರಣ, ತಪ್ಪು ಮಾಹಿತಿ ನೀಡಿದ್ದಕ್ಕೆ ಬಚ್ಚನ್ ಕ್ಷಮೆ ಕೋರಿದ್ದಾರೆ.
