ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಟೀಂ ಇಂಡಿಯಾಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಕಳೆದ ಬಾರಿಯಲ್ಲಿ ಆಡಿರದ ಆಟಗಾರರು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೀ ಆಟಗಾರರು..!
ಬೆಂಗಳೂರು(ಜು.21): 2021ರ ಅಕ್ಟೋಬರ್-ನವೆಂಬರ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ಯುಎಒನಲ್ಲಿ ನಡೆದಿತ್ತು. 2022ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುತ್ತಿದೆ. ಜಸ್ಟ್ 12 ತಿಂಗಳ ಅಂತರದಲ್ಲಿ ಎರಡು ಮಹಾ ಟೂರ್ನಿಗಳು ನಡೆಯುತ್ತಿದ್ದರೂ ಭಾರತ ತಂಡದಲ್ಲಿ ಅರ್ಧಡಜನ್ಗೂ ಹೆಚ್ಚು ಬದಲಾವಣೆಗಳು ಆಗಲಿವೆ. ನಿಮಗೆ ಆಶ್ಚರ್ಯವಾದ್ರೂ ಇದು ನಿಜ. ಆದ್ರೆ ಕಳೆದ ವರ್ಷ ಯಾರು ಬೇಡವಾಗಿದ್ದರೋ ಅವರು ಈ ಸಲ ಬೇಕಾಗಿದ್ದಾರೆ. ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದವನೂ ಈ ಸಲ ಟ್ರಂಪ್ಕಾರ್ಡ್ ಪ್ಲೇಯರ್ ಆಗಿದ್ದಾನೆ.
ಅನ್‌ಫಿಟ್ & ಕಳಪೆ ಫಾರ್ಮ್ ಟೀಂ ಇಂಡಿಯಾದಿಂದ ಡ್ರಾಪ್:
2021ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಫಾರ್ಮ್ ಜೊತೆ ಫಿಟ್ನೆಸ್ ಸಮಸ್ಯೆ ಎದುರಿಸಿ ಕಾಂಟ್ರವರ್ಸಿ ಮಾಡಿಕೊಂಡಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದರು. ಆದ್ರೆ ಫಿನಿಕ್ಸ್ನಂತೆ ಮೇಲೆದ್ದು ಬಂದ ಹಾರ್ದಿಕ್, ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಗುಜರಾತ್ ಟೈಟಾನ್ಸ್ ಲೀಡ್ ಮಾಡಿ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ಪಾಂಡ್ಯ, ಸೌತ್ ಆಫ್ರಿಕಾ ಟಿ20 ಸಿರೀಸ್ನಲ್ಲಿ ಆಲ್ರೌಂಡ್ ಆಟವಾಡಿ ಮಿಂಚಿದ್ದರು. ಟೀಂ ಇಂಡಿಯಾ ನಾಯಕನಾಗಿ ಐರ್ಲೆಂಡ್ನಲ್ಲಿ ಟಿ20 ಸರಣಿ ಗೆಲ್ಲಿಸಿಕೊಟ್ಟ ಹಾರ್ದಿಕ್, ಇಂಗ್ಲೆಂಡ್ ಒನ್ಡೇ ಸಿರೀಸ್ನಲ್ಲಿ ಮ್ಯಾನ್ ಆಫ್ ದ ಸಿರೀಸ್ ಪಡೆದಿದ್ದಾರೆ. ಈಗ ಪಾಂಡ್ಯನೇ ಟಿ20 ವರ್ಲ್ಡ್ಕಪ್ಗೆ ಟ್ರಂಪ್ಕಾರ್ಡ್ ಪ್ಲೇಯರ್.
ಕಾಮೆಂಟ್ರಿ ಬಾಕ್ಸ್ನಿಂದ ಮೈದಾನಕ್ಕೆ ಬಂದ ಡಿಕೆ:
2019 ಒನ್ಡೇ ವರ್ಲ್ಡ್ಕಪ್ ಬಳಿಕ ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದ ದಿನೇಶ್ ಕಾರ್ತಿಕ್, ಕಾಮೆಂಟ್ರಿ ಬಾಕ್ಸ್ ಸೇರಿಕೊಂಡಿದ್ದರು. ಆದ್ರೆ ಈ ಸಲದ ಐಪಿಎಲ್ನಲ್ಲಿ ಆರ್ಸಿಬಿ ಪರ ಮ್ಯಾಚ್ ಫಿನಿಶ್ ಮಾಡಿದ್ದರಿಂದ ಮತ್ತೆ ತಂಡಕ್ಕೆ ವಾಪಾಸ್ ಆದ್ರು. ಈ ವಿಶ್ವಕಪ್ ಟೀಮ್ನಲ್ಲಿ ಪಾಂಡ್ಯ ಜೊತೆ ಡಿಕೆನೇ ಫಿನಿಶರ್. ವರ್ಷದ ಹಿಂದೆ ಬೇಡವಾಗಿದ್ದವನು ಈಗ ಬೇಕಾಗಿದ್ದಾನೆ.
ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್: ಬಿಸಿಸಿಐಗೆ ತಲೆನೋವಾದ ವಿರಾಟ್ ಕೊಹ್ಲಿ ಫಾರ್ಮ್..!
ಕಳೆದ ವಿಶ್ವಕಪ್ನಿಂದ ಡ್ರಾಪ್, ಈ ವಿಶ್ವಕಪ್ಗೆ ಈತನೇ ಮೇನ್ ಸ್ಪಿನ್ನರ್:
ರಿಸ್ಟ್ ಸ್ಪಿನ್ನರ್ ಯುಜವೇಂದ್ರ ಚಹಲ್, ಮೂರ್ನಾಲ್ಕು ವರ್ಷದಿಂದ ಟೀಂ ಇಂಡಿಯಾದ ಮೇನ್ ಸ್ಪಿನ್ನರ್ ಆಗಿದ್ದರೂ ಕಳಪೆ ಫಾರ್ಮ್ನಲ್ಲಿದ್ದಾರೆ ಅಂತ ಕಳೆದ ಟಿ20 ವಿಶ್ವಕಪ್ ಟೀಮ್ನಿಂದ ಡ್ರಾಪ್ ಆದ್ರು. ಆದ್ರೆ ಫಿನಿಕ್ಸ್ನಂತೆ ಮೇಲೆದ್ದು ಬಂದ ಚಹಲ್, ಮತ್ತೆ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಶಾರ್ಟ್ ಫಾಮ್ಯಾಟ್ನಲ್ಲಿ ಈಗ ಅವರೇ ಟ್ರಂಪ್ಕಾರ್ಡ್ ಬೌಲರ್. ಕಳೆದ ವಿಶ್ವಕಪ್ಗೆ ಬೇಡವಾಗಿದ್ದ ಚಹಲ್, ಈ ವಿಶ್ವಕಪ್‌ನಲ್ಲಿ ಮೇನ್ ಸ್ಪಿನ್ನರ್.
ಆರೆಂಜ್ ಕ್ಯಾಪ್ ಗೆದ್ದರು ವಿಶ್ವಕಪ್ ಆಡಲಿಲ್ಲ..!:
ಹರ್ಷಲ್ ಪಟೇಲ್ 2021ರ ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ವಿನ್ನರ್. ಆದ್ರೂ ಟಿ20 ವರ್ಲ್ಡ್ಕಪ್ಗೆ ಸೆಲೆಕ್ಟ್ ಆಗಲಿಲ್ಲ. ಆದರೆ ಈಗ ಟಿ20 ಟೀಮ್ನಲ್ಲಿ ಪರ್ಮನೆಂಟ್ ಪ್ಲೇಸ್ ಇದ್ದು, ಈ ಸಲ ವಿಶ್ವಕಪ್ ಆಡೋದು ಕನ್ಫರ್ಮ್. ಕಳೆದ ವರ್ಷ ಬೇಡವಾಗಿದ್ದ ಹರ್ಷಲ್ ಪಟೇಲ್, ಈ ಸಲ ತಂಡಕ್ಕೆ ಬೇಕಾಗಿದ್ದಾರೆ.
