ಇಂಗ್ಲೆಂಡ್ ವಿರುದ್ಧದ ಸರಣಿ ಯಶಸ್ವಿಯಾಗಿ ಮುಗಿಸಿದ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಮೈದಾನಕ್ಕಿಳಿದಿದೆ. ಟ್ರಿನಿಡ್ಯಾಡ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಟ್ರಿನಿಡ್ಯಾಡ್(ಜು.22): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಆರಂಭಗೊಂಡಿದೆ. ಟ್ರಿನಿಡ್ಯಾಡ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಇಂಜುರಿಯಿಂದ ಕಮ್ ಬ್ಯಾಕ್ ಮಾಡಿರುವ ಮೇಯರ್ ವಿಂಡೀಸ್ ತಂಡ ಸೇರಿಕೊಂಡಿದ್ದಾರೆ. ಇತ್ತ ತಂಡದಲ್ಲಿದ್ದ ಜೇಸನ್ ಹೋಲ್ಡರ್ ಕೋವಿಡ್ ಸೋಂಕು ಕಾಣಿಸಿಕೊಂಡ ಕಾರಣ ಹೊರಗುಳಿದಿದ್ದಾರೆ. ಟಾಸ್ ಬಳಿಕ ಮಾತನಾಡಿದ ಶಿಖರ್ ಧವನ್, ನಾವು ಸೆಕೆಂಡ್ ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದೆವು ಎಂದಿದ್ದಾರೆ. ಮಳೆ ಬರವು ಸಾಧ್ಯತೆ ಇದೆ. ಹೀಗಾಗಿ ಸೆಕೆಂಡ್ ಬ್ಯಾಟಿಂಗ್ ನೆರವಾಗಲಿದೆ ಎಂದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದೆ. ಶಿಖರ್ ಧವನ್ ನಾಯಕತ್ವದ ಟೀಂ ಇಂಡಿಯಾ ವಿಂಡೀಸ್ ಪ್ರವಾಸದಲ್ಲಿ ಹೊಸ ಇತಿಹಾಸ ರಚಿಸಲು ಸಜ್ಜಾಗಿದೆ. ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಕೈವಶ ಮಾಡಿದೆ. ಇನ್ನು 2-1 ಅಂತರದಿಂದ ಟಿ20 ಸರಣಿಯನ್ನೂ ಗೆದ್ದುಕೊಂಡಿದೆ. ಈ ಮೂಲಕ ಯುವ ಟೀಂ ಇಂಡಿಯಾ ನಿಗದಿತ ಓವರ್ ಕ್ರಿಕೆಟ್‌ನಲ್ಲೂ ಮತ್ತೆ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ತಂಡದಲ್ಲಿದ್ದ 6 ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಟೀಂ ಇಂಡಿಯಾಗೆ ಕೊಂಚ ಸಾವಲೆಸೆಯಲಿದೆ. 

ಟೀಂ ಇಂಡಿಯಾ ಪ್ಲೇಯಿಂಗ್ 11
ಶಿಖರ್ ಧವನ್(ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ದೀಪಕ್ ಹೂಡ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

Ind vs WI ರವೀಂದ್ರ ಜಡೇಜಾ ಫಿಟ್ನೆಸ್ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ನಾಯಕ ಶಿಖರ್ ಧವನ್..!

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಶೈ ಹೋಪ್, ಬ್ರ್ಯಾಂಡನ್ ಕಿಂಗ್, ಶ್ಯಾಮ್ರ್ಹ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್(ನಾಯಕ), ರೋವ್ಮನ್ ಪೊವೆಲ್, ಅಕೀಲ್ ಹುಸೈನ್, ರೊಮಾರಿಯೋ ಶೆಪರ್ಡ್, ಅಲ್ಜಾರಿ ಜೋಸೆಫ್, ಜುದಕೇಶ್ ಮೊತಿ, ಜಯ್ಡೆನ್ ಸೀಲ್ಸ್

ಇತ್ತ ಮೇ ತಿಂಗಳಲ್ಲಿ ವೆಸ್ಟ್ ಇಂಡೀಸ್ ಏಕದಿನ ಹಾಗೂ ಟಿ20 ತಂಡದ ನಾಯಕತ್ವ ವಹಿಸಿಕೊಂಡಿರುವ ನಿಕೋಲಸ್ ಪೂರನ್, ನೆದರ್ಲೆಂಡ್ ವಿರುದ್ದ 3-0 ಅಂತರದ ಗೆಲುವು ದಾಖಲಿಸಿದ್ದರು. ಆದರೆ ಅದಕ್ಕೂ ಮೊದಲು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಸತತ ಸರಣಿ ಸೋತು ತೀವ್ರ ಹಿನ್ನಡೆ ಅನುಭವಿಸಿತ್ತು. 2021ರಂದ ವೆಸ್ಟ್ ಇಂಡೀಸ್ 24 ಏಕದಿನ ಪಂದ್ಯಗಳನ್ನಾಡಿದೆ. ಆದರೆ ನೆದರ್ಲೆಂಡ್ ಹಾಗೂ ಶ್ರೀಲಂಕಾ ವಿರುದ್ದದ ಸರಣಿ ಹೊರತು ಪಡಿಸಿದೆ, ಇನ್ನುಳಿದ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಐರ್ಲೆಂಡ್ ವಿರುದ್ಧ ಮುಗ್ಗರಿಸಿದೆ. 

ಏಷ್ಯಾಕಪ್‌ ಕ್ರಿಕೆಟ್ ಟೂರ್ನಿ ಲಂಕಾದಿಂದ ಯುಎಇಗೆ ಶಿಫ್ಟ್: ಸೌರವ್ ಗಂಗೂಲಿ