Asianet Suvarna News Asianet Suvarna News

Commonwealth Games 2022: ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್‌ ತಂಡ!

ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ಮಹಿಳಾ ತಂಡ ಇತಿಹಾಸ ಸೃಷ್ಟಿಸಿದೆ. ಕಾಮನ್‌ವೆಲ್ತ್ ಗೇಮ್ಸ್ 2022 ರ ಕ್ರಿಕೆಟ್‌ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಸುದೀರ್ಘ ಸಮಯದ ನಂತರ ಕಾಮನ್‌ವೆಲ್ತ್‌ಗೆ ಕ್ರಿಕೆಟ್ ಮರಳಿದ್ದು, ಇದೀಗ ಭಾರತದ ಪದಕವೂ ಇಲ್ಲಿ ದೃಢಪಟ್ಟಿದೆ.

Commonwealth Games 2022 India Womens Cricket Team Reached Final created history Beating England san
Author
Bengaluru, First Published Aug 6, 2022, 8:53 PM IST

ಬರ್ಮಿಂಗ್‌ ಹ್ಯಾಂ (ಆ.6): ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತವೂ ಈವರೆಗೂ ಕುಸ್ತಿ, ವೇಟ್‌ಲಿಫ್ಟಿಂಗ್‌ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಪದಕ ಸಾಧನೆ ಮಾಡುತ್ತಿತ್ತು. ಈಗ ಕ್ರಿಕೆಟ್‌ನಲ್ಲೂ ಕೂಡ ಟೀಮ್‌ ಇಂಡಿಯಾ ತನ್ನ ಪದಕವನ್ನು ಖಚಿತಪಡಿಸಿಕೊಂಡಿದೆ. ಶನಿವಾರ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಹರ್ಮಾನ್‌ಪ್ರೀತ್‌ ಕೌರ್‌ ಸಾರಥ್ಯದ ಟೀಮ್‌ ಇಂಡಿಯಾ 4 ರನ್‌ಗಳ ಜಯ ಸಾಧಿಸಿದೆ. ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್‌ ವಿರುದ್ಧ ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದು, ಇಲ್ಲಿ ಸೋಲು ಕಂಡರೂ ಬೆಳ್ಳಿ ಪದಕ ಸಿಗಲಿದೆ. ಎಜ್‌ಬಾಸ್ಟನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 5 ವಿಕೆಟ್‌ಗೆ 164 ರನ್ ಬಾರಿಸಿದರೆ, ಪ್ರತಿಯಾಗಿ ಪದಕದ ಫೇವರಿಟ್‌ ಆಗಿದ್ದ ಇಂಗ್ಲೆಂಡ್‌ ತಂಡ 6 ವಿಕೆಟ್‌ಗೆ 160 ರನ್‌ ಬಾರಿಸಲಷ್ಟೇ ಶಕ್ತವಾಯಿತು. ಪಂದ್ಯ ಅತ್ಯಂತ ರೋಚಕವಾಗಿ ಅಂತ್ಯ ಕಂಡಿತು. ಕೊನೆಯ ಎಸೆತದಲ್ಲಿ ಟೀಮ್‌ ಇಂಡಿಯಾ ಫೈನಲ್‌ ಪಂದ್ಯದ ಟಿಕೆಟ್‌ ಗಿಟ್ಟಿಸಿಕೊಂಡಿದೆ. ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ ತಂಡದ ಗೆಲುವಿಗೆ 14 ರನ್‌ ಅಗತ್ಯವಿತ್ತು. ಆದರೆ, ಕೊನೇ ಓವರ್‌ ಎಸೆದ ಸ್ನೇಹ್‌ ರಾಣಾ ಕೇವಲ 9 ರನ್ ನೀಡಿದ್ದಲ್ಲದೆ, ಒಂದು ವಿಕೆಟ್‌ ಉರುಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು.

ಕೊನೇ ಓವರ್‌ನ ಮೊದಲ ಎಸೆತದಲ್ಲಿ ಇಂಗ್ಲೆಂಡ್‌ ಬ್ಯಾಟರ್‌ಗಳು ರನ್ ಬಾರಿಸಲು ವಿಫಲರಾದರೆ, 2ನೇ ಎಸೆತದಲ್ಲಿ 1 ರನ್ fಬಂದಿತು. 3ನೇ ಎಸೆತದಲ್ಲಿ ಕ್ಯಾಥರಿನ್‌ ಬ್ರಂಟ್‌ ಔಟಾದರೆ, 4 ಹಾಗೂ 5ನೇ ಎಸೆತದಲ್ಲಿ ತಲಾ ಒಂದು ರನ್‌ ಬಾರಿಸಿದರೆ, ಅಂತಿಮ ಎಸೆತದಲ್ಲಿ ಸಿಕ್ಸರ್‌ ದಾಖಲಾಯಿತು.

Commonwealth Games: ಸಿಂಧು, ಶ್ರೀಕಾಂತ್‌ ಕ್ವಾರ್ಟರ್‌ಗೆ ಲಗ್ಗೆ

ಅದ್ಭುತ ಪ್ರದರ್ಶನ ನೀಡಿದ ಸ್ಮೃತಿ: ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಈ ನಿರ್ಧಾರವನ್ನು ತಂಡದ ಆರಂಭಿಕ ಜೋಡಿ ಸಮರ್ಥಿಸಿಕೊಂಡಿತು. ಸ್ಮೃತಿ ಹಾಗೂ ಶೆಫಾಲಿ ವರ್ಮಾ ಜೋಡಿ ಕೇವಲ 47 ಎಸೆತಗಳಲ್ಲಿ 76 ರನ್‌ಗಳ ಜೊತೆಯಾಟವನ್ನು ಆಡಿದರು. ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು, ಇದರಲ್ಲಿ ಸ್ಮೃತಿ ಕೇವಲ 30 ಎಸೆತಗಳಲ್ಲಿ 61 ರನ್ ಗಳಿಸಿದರು. ಸ್ಮೃತಿ ಹೊರತಾಗಿ, ಜೆಮಿಮಾ ಕೂಡ ಟೀಮ್‌ ಇಂಡಿಯಾ ಪರ ಅದ್ಭುತ ಇನ್ನಿಂಗ್ಸ್ ಆಡಿದರು. ಕೇವಲ 31 ಎಸೆತಗಳಲ್ಲಿ 44 ರನ್‌ ಸಿಡಿಸಿದ ಜೆಮಿಮಾ ತಾವೇಕೇ ಟಿ20 ಸ್ಪೆಷಲಿಸ್ಟ್ ಎನ್ನುವುದನ್ನು ತಿಳಿಸಿಕೊಟ್ಟರು.ತಮ್ಮ ಇನ್ನಿಂಗ್ಸ್‌ನಲ್ಲಿ ಅವರು 7 ಬೌಂಡರಿಗಳನ್ನು ಸಿಡಿಸಿದರು. ಕೊನೆಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ದೀಪ್ತಿ ಶರ್ಮ ಉಪಯುಕ್ತ ಇನ್ನಿಂಗ್ಸ್‌ಗಳಿಂದ ಭಾರತ 164 ರನ್ ಬಾರಿಸಿತು.

Commonwealth Games 2022: ಎದುರಾಳಿಯನ್ನು ಫಾಲ್‌ ಮಾಡಿ ಸೂಪರ್‌ ಗೆಲುವು ಕಂಡ ಸಾಕ್ಷಿಗೆ ಸ್ವರ್ಣ!

ಬೌಲರ್‌ಗಳ ಭರ್ಜರಿ ಪ್ರದರ್ಶನ: ತವರು ನೆಲದಲ್ಲಿ ಆಡುತ್ತಿರುವ ಇಂಗ್ಲೆಂಡ್ ಮುಂದೆ ಈ ಗುರಿ ದೊಡ್ಡದಾಗಿರಲಿಲ್ಲ. ಆದರೆ ಟೀಂ ಇಂಡಿಯಾದ ಬಿಗಿ ಬೌಲಿಂಗ್ ಅವರಿಗೆ ಕಡಿವಾಣ ಹಾಕಿತು. ವೇಗದ ಆಟವಾಡಲು ಯತ್ನಿಸಿದ ಇಂಗ್ಲೆಂಡ್‌ಗೆ 3ನೇ ಓವರ್‌ನಲ್ಲಿಯೇ ಭಾರತ ಆಘಾತ ನೀಡಿತು. ಸೋಫಿಯಾ 19 ರನ್ ಗಳಿಸಿದರೆ, 35 ರನ್‌ ಬಾರಿಸಿ ಭಾರತಕ್ಕೆ ಅಪಾಯಕಾರಿಯಾಗಿ ಕಾಣುತ್ತಿದ್ದ ಡೇನಿಯಲ್‌ ವೈಟ್‌ರನ್ನು ಸ್ನೇಹ್‌ ರಾಣಾ ಔಟ್‌ ಮಾಡಿದರು. ಈ ಪಂದ್ಯದಲ್ಲಿ ಮೂವರು ಇಂಗ್ಲೆಂಡ್ ಬ್ಯಾಟರ್‌ಗಳು ರನೌಟ್‌ ಆದರು. ಟೀಮ್‌ ಇಂಡಿಯಾದ ಫೀಲ್ಡಿಂಗ್‌ ಅಷ್ಟು ಅದ್ಬುತವಾಗಿತ್ಉತ. ನಾಯಕಿ ನಟಾಲಿ ಸ್ಕೀವರ್‌ 41 ರನ್‌ ಬಾರಿಸಿ, ಸ್ಮೃತಿ ಮಂದನಾ ಹಾಗೂ ತಾನಿಯಾ ಭಾಟಿಯಾ ಜೋಡಿಯ ಸಾಹಸದಿಂದ ರನೌಟ್‌ ಆದರು. 18 ನೇ ಓವರ್‌ನಲ್ಲಿ 4ನೇ ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌, 19ನೇ ಓವರ್‌ ಹಾಗೂ 20ನೇ ಓವರ್‌ನಲ್ಲೂ ವಿಕೆಟ್‌ ಕಳೆದುಕೊಂಡಿತು.

Follow Us:
Download App:
  • android
  • ios