ನಾಯಕ ಶಿಖರ್ ಧವನ್ ಸಿಡಿಸಿದ 97 ರನ್ ಹಾಗೂ ಗಿಲ್, ಅಯ್ಯರ್ ಹಾಫ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ 308 ರನ್ ಸಿಡಿಸಿದೆ.
ಟ್ರಿನಿಡ್ಯಾಡ್(ಜು.22): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ನಾಯಕ ಶಿಖರ್ ಧವನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಹೋರಾಟದಿಂದ ಭಾರತ 7 ವಿಕೆಟ್ ನಷ್ಟಕ್ಕೆ 308 ರನ್ ಸಿಡಿಸಿದೆ. ಈ ಮೂಲಕ ವಿಂಡೀಸ್ ತಂಡಕ್ಕೆ 309 ರನ್ ಟಾರ್ಗೆಟ್ ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಜೋಡಿ ಭರ್ಜರಿ ಶತಕತ ಜೊತೆಯಾಟ ನೀಡಿತು. ಮೊದಲ ವಿಕೆಟ್‌ಗೆ ಈ ಜೋಡಿ 119 ರನ್ ಸಿಡಿಸಿತು. ಧವನ್ ಹಾಗೂ ಗಿಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಆದರೆ ಗಿಲ್ 53 ಎಸೆತದಲ್ಲಿ 64 ರನ್ ಸಿಡಿಸಿ ಔಟಾದರು. ಆದರೆ ಧವನ್ ಹೋರಾಟ ಮುಂದುವರಿಸಿದರು. ಶ್ರೇಯಸ್ ಅಯ್ಯರ್ ಜೊತೆ ಸೇರಿದ ಧವನ್, ವಿಂಡೀಸ್ ಬೌಲರ್‌ಗಳ ತಲೆನೋವು ಹೆಚ್ಚಿಸಿದರು. 99 ಎಸೆತದ ಎದುರಿಸಿದ ಧವನ್ 97 ರನ್ ಸಿಡಿಸಿ ಔಟಾದರು. ಕೇವಲ 3 ರನ್‌ಗಳಿಂದ ಧವನ್ ಸೆಂಚುರಿ ಮಿಸ್ ಮಾಡಿಕೊಂಡರು.
ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಅಯ್ಯರ್ 57 ಎಸೆತದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 54 ರನ್ ಸಿಡಿಸಿ ಔಟಾದರು. ಸೂರ್ಯಕುಮಾರ್ ಯಾದವವ್ ಹಾಗೂ ಸಂಜು ಸ್ಯಾಮ್ಸನ್ ಅಬ್ಬರಿಸಲಿಲ್ಲ. ಯಾದವ್ 13 ರನ್ ಸಿಡಿಸಿ ನಿರ್ಗಮಿಸಿದರು. ಸಂಜು ಸ್ಯಾಮ್ಸನ್ 12 ರನ್ ಸಿಡಿಸಿ ಔಟಾದರು. ಟಾಪ್ ಆರ್ಡರ್ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿತು. ನಿರೀಕ್ಷಿತ ರನ್ ಹರಿದುಬರಲಿಲ್ಲ.
ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಆಘಾತ, ಕೆಎಲ್ ರಾಹುಲ್‌ಗೆ ಕೊರೋನಾ ದೃಢ!
ದೀಪಕ್ ಹೂಡ ಹಾಗೂ ಅಕ್ಸರ್ ಪಟೇಲ್ ಹೋರಾಟ ನೀಡಿದರು. ಹೂಡ 27 ರನ್ ಸಿಡಿಸಿದರೆ, ಅಕ್ಸರ್ ಪಟೇಲ್ 21 ರನ್ ಕಾಣಿಕೆ ನೀಡಿದರು. ಇನ್ನು ಅಂತಿಮ ಹಂತದಲ್ಲಿ ಶಾರ್ದೂಲ್ ಠಾಕೂರ್ ಅಜೇಯ 7 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 308 ರನ್ ಸಿಡಿಸಿತು.
ಇನ್ನುಳಿದ ಎರಡು ಪಂದ್ಯಗಳು ಜು.24 ಹಾಗೂ 27ಕ್ಕೆ ನಿಗದಿಯಾಗಿವೆ. ಎಲ್ಲಾ ಪಂದ್ಯಗಳೂ ಪೋರ್ಚ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಜು.29ರಿಂದ ಆ.7ರವರೆಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿವೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ತಂಡದ ಖಾಯಂ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಶಮಿ, ರಿಷಭ್ ಪಂತ್ ಸೇರಿದಂತೆ ಪ್ರಮುಖರಿಗೆ ವಿಶ್ರಾಂತಿ ನೀಡಲಾಗಿದೆ.
ರೋಹಿತ್ ಶರ್ಮಾಗಿಂತ ಹೆಚ್ಚು ರನ್ ಬಾರಿಸಿದ್ದರೂ ಕೊಹ್ಲಿಯೇ ಯಾಕೆ ಟಾರ್ಗೆಟ್ ಆಗ್ತಿದ್ದಾರೆ..?
