ವಿರಾಟ್ ಕೊಹ್ಲಿಯಂತೆ ರನ್ ಬರ ಅನುಭವಿಸುತ್ತಿದ್ದಾರೆ ರೋಹಿತ್ ಶರ್ಮಾಈ ವರ್ಷ ರೋಹಿತ್‌ಗಿಂತ ಹೆಚ್ಚು ರನ್ ಬಾರಿಸಿರುವ ವಿರಾಟ್ ಕೊಹ್ಲಿಆದರೂ ವಿರಾಟ್‌ ಕೊಹ್ಲಿಯೇ ಎಲ್ಲರ ಟಾರ್ಗೆಟ್ ಆಗಿದ್ದಾರೆ

ಬೆಂಗಳೂರು(ಜು.21): ವಿರಾಟ್ ಕೊಹ್ಲಿ ಸೆಂಚುರಿ ಹೊಡೆಯುವವರೆಗೂ ಅವರ ಬ್ಯಾಡ್ ಫಾರ್ಮ್​ ಬಗೆಗಿನ ಚೆರ್ಚೆಗಳು ನಿಲ್ಲುವಂತೆ ಕಾಣ್ತಿಲ್ಲ. ಒಂದಲ್ಲ ಒಂದು ನ್ಯೂಸ್, ಕಿಂಗ್ ಕೊಹ್ಲಿ ಬಗ್ಗೆ ಬರ್ತಲೇ ಇದೆ. ಈ ವರ್ಷ ಕೊಹ್ಲಿ ಮಾತ್ರ ರನ್ ಗಳಿಸಿಲು ಪರದಾಡಿಲ್ಲ. ಹಲವು ಆಟಗಾರರು ಸಹ ರನ್ ಗಳಿಸೋದ್ರಲ್ಲಿ ಹಿಂದೆ ಬಿದ್ದಿದ್ದಾರೆ. 2022ರಲ್ಲಿ ಟೀಂ ಇಂಡಿಯಾ ಹೆಚ್ಚು ಸರಣಿಗಳನ್ನ ಗೆದ್ದಿರಬಹುದು. ಆದರೆ ಒಂದಿಬ್ಬರು ಬಿಟ್ಟು ಬೇರೆ ಯಾರೂ ಹೆಚ್ಚು ಪಂದ್ಯಗಳನ್ನಾಡಿಲ್ಲ. ಜೊತೆಗೆ ಸ್ಥಿರ ಪ್ರದರ್ಶನ ಸಹ ನೀಡಿಲ್ಲ. ಹೆಚ್ಚುಕಮ್ಮಿ ಈ ವರ್ಷ ಭಾರತದ ಪರ 30ಕ್ಕೂ ಅಧಿಕ ಆಟಗಾರರು ಆಡಿದ್ದಾರೆ. ಅಲ್ಲಿಗೆ ನೀವೇ ಅರ್ಥ ಮಾಡಿಕೊಳ್ಳಿ. ಸೀನಿಯರ್ ಪ್ಲೇಯರ್ಸ್ ಎಷ್ಟು ಪಂದ್ಯಗಳಿಂದ ಹೊರಗುಳಿದಿದ್ದಾರೆ ಅಂತ.

ಈ ವರ್ಷ ಕೊಹ್ಲಿಗಿಂತ ಕಡಿಮೆ ರನ್ ಹೊಡೆದಿದ್ದಾರೆ ರೋಹಿತ್: 

ಯೆಸ್, ನೀವು ಇದನ್ನ ನಂಬಲ್ಲ ಅನ್ನೋದು ಗೊತ್ತು. ಹಾಗಾಗಿ ಅಂಕಿ-ಅಂಶ ಸಮೇತ ಹೇಳ್ತಿವಿ ನೋಡಿ. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಈ ವರ್ಷ ಮೂರು ಫಾಮ್ಯಾಟ್​ನಿಂದ ಒಟ್ಟು 18 ಅಂತಾರಾಷ್ಟ್ರೀಯ ಇನ್ನಿಂಗ್ಸ್​ಗಳನ್ನು ಆಡಿದ್ದಾರೆ. 26.05ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ 2 ಅರ್ಧಶತಕದ ಸಹಿತ 443 ರನ್ ಗಳಿಸಿದ್ದಾರೆ.

ರೋಹಿತ್​ಗಿಂತ ಕೊಹ್ಲಿಯೇ ಹೆಚ್ಚು ರನ್, ಹೆಚ್ಚು ಅರ್ಧಶತಕ: 

ಹೌದು, 2022ರಲ್ಲಿ ವಿರಾಟ್ ಕೊಹ್ಲಿ ಒಟ್ಟು 19 ಇಂಟರ್​​​ನ್ಯಾಷನಲ್ ಆಡಿದ್ದು, 25.05ರ ಸರಾಸರಿಯಲ್ಲಿ 476 ರನ್ ಬಾರಿಸಿದ್ದಾರೆ. ಇದರಲ್ಲಿ 4 ಹಾಫ್ ಸೆಂಚುರಿಗಳನ್ನೂ ಹೊಡೆದಿದ್ದಾರೆ. ರೋಹಿತ್​ಗಿಂತ ಒಂದು ಇನ್ನಿಂಗ್ಸ್ ಹೆಚ್ಚಿಗೆ ಆಡಿರುವ ಕೊಹ್ಲಿ, 33 ರನ್ ಹೆಚ್ಚು ಗಳಿಸಿದ್ದಾರೆ. ಹಿಟ್​ಮ್ಯಾನ್​ಗಿಂತ 2 ಅರ್ಧಶತಕ ಹೆಚ್ಚಿಗೆ ಹೊಡೆದಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್:​ ಬಿಸಿಸಿಐಗೆ ತಲೆನೋವಾದ ವಿರಾಟ್ ಕೊಹ್ಲಿ ಫಾರ್ಮ್..!​

ಇದು ಜಸ್ಟ್ ಈ ವರ್ಷದ ಈ ಇಬ್ಬರ ಟ್ರ್ಯಾಕ್ ರೆಕಾರ್ಡ್​. ಕೊಹ್ಲಿ ಈ ವರ್ಷ ಬ್ಯಾಡ್ ಫಾರ್ಮ್​ನಲ್ಲಿದ್ದಾರೆ. ಟೀಂ ಇಂಡಿಯಾದಿಂದ ಡ್ರಾಪ್ ಮಾಡಿ, ಯುವಕರಿಗೆ ಚಾನ್ಸ್ ಕೊಡಿ ಅಂತ ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದಾರೆ. ಈಗ ಹೇಳಿ. ಯಾರು ಕಳಪೆ ಫಾರ್ಮ್​ನಲ್ಲಿರೋದು. ಯಾರು ರನ್ ಗಳಿಸಲು ಪರದಾಡುತ್ತಿರುವುದು. ನಾವ್ ಹಳೆಯ ಟ್ರ್ಯಾಕ್ ರೆಕಾರ್ಡ್​ ತೆಗೆದುಕೊಂಡಿಲ್ಲ. ಈ ವರ್ಷದ್ದು ಮಾತ್ರ. ಅಂದರೆ ಈ ವರ್ಷ ಕೊಹ್ಲಿ ಜೊತೆ ರೋಹಿತ್ ಸಹ ರನ್ ಗಳಿಸಲು ಪರದಾಡಿದ್ದಾರೆ ಅನ್ನೋದು ಕನ್ಫರ್ಮ್​ ಆಯ್ತಲ್ಲ. 

ಹಾಗಾದ್ರೆ ವಿರಾಟ್ ಕೊಹ್ಲಿ ಬಗ್ಗೆ ಯಾಕೆ ಟೀಕೆ ಮಾಡ್ತೀರಾ..? ರೋಹಿತ್ ಬಗ್ಗೆಯೂ ಮಾತನಾಡಿ. ರೋಹಿತ್ ಶರ್ಮಾ ಕ್ಯಾಪ್ಟನ್ ಅಂತ ನೀವು ಹೇಳಬಹುದು. ತಂಡ ಅಂದಮೇಲೆ ಎಲ್ಲರೂ ಒಂದೇ ಅಲ್ವಾ..? ಅವರು ಪ್ರತಿನಿಧಿಸೋದು ಭಾರತವನ್ನು, ತಂಡವನಲ್ಲ. ಅದಕ್ಕೆ ಹೇಳೋದು ಟೀಕಿಸುವುದಕ್ಕೂ ಮುನ್ನ 10 ಬಾರಿ ಯೋಚಿಸಿ ಅಂತ. ಟೀಕಿಸೋದು ಸುಲಭ. ಆದ್ರೆ ಆ ಟೀಕೆಗಳನ್ನ ಎದುರಿಸೋದು ಕಷ್ಟ.