ಇಂಜುರಿ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಬಿದ್ದ ಕನ್ನಡಿಗ ಕೆಎಲ್ ರಾಹುಲ್ ಇದೀಗ ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಮತ್ತೊಂದು ಆಘಾತ ಎದುರಿಸಿದ್ದಾರೆ. ಕಮ್‌ಬ್ಯಾಕ್ ನಿರೀಕ್ಷೆಯಲ್ಲಿದ್ದ ರಾಹುಲ್‌ಗೆ ತೀವ್ರ ನಿರಾಸೆಯಾಗಿದೆ.
ಬೆಂಗಳೂರು(ಜು.21): ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಹುದೊಡ್ಡ ಆಘಾತ ಎದುರಾಗಿದೆ. ಇಂಗ್ಲೆಂಡ್ ವಿರುದ್ದದ ಸರಣಿಗೆ ಇಂಜುರಿ ಕಾರಣದಿಂದ ಹೊರಬಿದ್ದ ಬ್ಯಾಟ್ಸ್‌ಮನ್ ಕೆಲ್ ರಾಹುಲ್‌ಗೆ ಇದೀಗ ಕೊರೋನಾ ದೃಢಪಟ್ಟಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ರಾಹುಲ್‌ಗೆ ಕೋವಿಡ್ ಖಚಿತಗೊಂಡಿದೆ. ಹೀಗಾಗಿ ಮತ್ತೆ ವಿಶ್ರಾಂತಿಗೆ ಜಾರಿದ್ದಾರೆ. ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಿಂದ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಜುಲೈ 29 ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ರಾಹುಲ್‌ಗೆ ಸ್ಥಾನ ನೀಡಲಾಗಿದೆ. ಇದೀಗ ಕೊರೋನಾ ಕಾಣಿಸಿಕೊಂಡಿರುವ ಕಾರಣ ಮತ್ತೆ ಕೊರೋನಾ ನೆಗೆಟೀವ್ ಹಾಗೂ ಫಿಟ್ನೆಸ್ ಟೆಸ್ಟ್ ಸಾಬೀತುಪಡಿಸಿದರೆ ಮಾತ್ರ ಸರಣಿ ಆಡಲು ಅವಕಾಶ ಸಿಗಲಿದೆ.ಬೋರ್ಡ್ ಅಪೆಕ್ಸ್ ಕೌನ್ಸಿಲ್ ಸಭೆ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಐಪಿಎಲ್ ಟೂರ್ನಿ ಮುಗಿದ ಬಳಿಕ ಕೆಎಲ್ ರಾಹುಲ್ ಅಂತಾರಾಷ್ಟ್ಪೀಯ ಪಂದ್ಯದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಕ್ಕೂ ಮೊದಲು ರಾಹುಲ್ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಸಂಪೂರ್ಣ ಸರಣಿಯಿಂದ ರಾಹುಲ್ ಹೊರಗುಳಿದರು. ಬೆಂಗಳೂರಿನ ಎನ್‌ಸಿಎಯಲ್ಲಿ ಚೇತರಿಸಿಕೊಳ್ಳುತ್ತಿದ್ದ ರಾಹುಲ್ ಇತ್ತೀಚೆಗೆ ಪೂರ್ಣ ಪ್ರಮಾಣದಲ್ಲಿ ಅಭ್ಯಾಸ ಆರಂಭಿಸಿದ್ದರು. ಇದೀಗ ಕೋವಿಡ್ ದೃಢಪಟ್ಟಿದ್ದು ಚೇತರಿಕೆ ಮೇಲೆ ರಾಹುಲ್ ವಿಂಡೀಸ್ ಪ್ರವಾಸ ಅವಲಂಬಿತವಾಗಿದೆ.
ಕೊನೆಗೂ ಮೌನ ಮುರಿದ ನಟಿ ಅತಿಯಾ ಶೆಟ್ಟಿ; ರಾಹುಲ್ ಜೊತೆಗಿನ ಮದುವೆ ಬಗ್ಗೆ ಹೇಳಿದ್ದೇನು?
ಜುಲೈ 22ರಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸರಣಿ ಆರಂಭಗೊಳ್ಳಲಿದೆ. ಜುಲೈ 22 ರಿಂದ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಜುಲೈ 29 ರಿಂದ 5 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಆಗಸ್ಟ್ 7ಕ್ಕೆ ಟೂರ್ನಿ ಅಂತ್ಯಗೊಳ್ಳಲಿದೆ.
ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಗೆ ಟೀಂ ಇಂಡಿಯಾ
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕೆಲ್ ರಾಹುಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಆರ್ ಅಶ್ವಿನ್, ರವಿ ಬಿಶ್ನೋಯ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಅರ್ಶದೀಪ್ ಸಿಂಗ್
ಶೀಘ್ರದಲ್ಲೇ ರಾಹುಲ್ - ಅತಿಯಾ ಶೆಟ್ಟಿ ಮದುವೆ ವದಂತಿ; ಸುನಿಲ್ ಶೆಟ್ಟಿ ರಿಯಾಕ್ಷನ್
ಎನ್‌ಸಿಎನಲ್ಲಿ ಕೋಚಿಂಗ್ ಸ್ಟಾಫ್ ಜೊತೆ ಗುರುವಾರ ಮಾತುಕತೆ ನಡೆಸಿದ್ದ ಕೆಎಲ್ ರಾಹುಲ್‌ಗೆ ಸಂಜೆ ವೇಳೆ ಕೋವಿಡ್ ಕಾಣಿಸಿಕೊಂಡಿದೆ. ಕೆಎಲ್ ರಾಹುಲ್ ಬಹುಪಾಲು ಇಂಜುರಿ ಕಾರಣದಿಂದ ಟೂರ್ನಿಯಿಂದ ಹೊರಗುಳಿಯುತ್ತಿದ್ದಾರೆ. ಇದೀಗ ಕೊರೋನಾ ಕೂಡ ಅಂಟಿಕೊಂಡಿದ್ದು, ಮತ್ತೆ ಟೂರ್ನಿಯಿಂದ ಹೊರಬೀಳುವ ಆತಂಕ ಕಾಡುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಮಹಿಳಾ ತಂಡದ ಆಟಗಾರರಲ್ಲಿ ಕೊರೋನಾ ಕಾಣಿಸಿಕೊಂಡಿದೆ ಎಂದಿದ್ದಾರೆ. ಆದರೆ ಆಟಗಾರ್ತಿಯ ಹೆಸರನ್ನು ಬಹಿರಂಗ ಪಡಿಸಿಲ್ಲ.
ಇಂಜುರಿ ಕಾರಣದಿಂದ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಹುಲ್ ಚೇತರಿಕೆ ಹಾದಿಯಲ್ಲಿ ಮತ್ತೆ ಹಿನ್ನಡೆಯಾಗಿದೆ. ಇದೀಗ ಅಭಿಮಾನಿಗಳು ರಾಹುಲ್ ಶೀಘ್ರ ಚೇತರಿಕಗೆ ಹಾರೈಸಿದ್ದಾರೆ.
