ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಮಾಡಲು ತುದಿಗಾಲಲ್ಲಿ ನಿಂತಿರುವ ಟೀಂ ಇಂಡಿಯಾಗೆ ಮಳೆ ಅಡ್ಡಿಪಡಿಸಿದೆ. ಮಳೆಯಿಂದಾಗಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ.

ಟ್ರಿನಿಡ್ಯಾಡ್(ಜು.27): ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. 24 ಓವರ್ ಮುಕ್ತಾಯದ ವೇಳೆ ಮಳೆರಾಯನ ಎಂಟ್ರಿಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ. ವಿಂಡೀಸ್ ವಿರುದ್ಧದ ಆರಂಭಿಕ 2 ಏಕದಿನ ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿ ಕ್ಲೀನ್ ಸ್ವೀಪ್ ಗುರಿ ಹೊಂದಿತ್ತು. ಆದರೆ ಮಳೆಯಿಂದ ಟೀಂ ಇಂಡಿಯಾಗೆ ಕೊಂಚ ನಿರಾಸೆಯಾದಿದೆ. ಸದ್ಯ ಟೀಂ ಇಂಡಿಯಾ 24 ಓವರ್ ಮುಕ್ತಾಯದ ವೇಳೆ 1 ವಿಕೆಟ್ ಕಳೆದುಕೊಂಡು 115 ರನ್ ಸಿಡಿಸಿದೆ. ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆ್ಯಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ನಾಯಕ ಶಿಖರ್ ಧವನ್ ಹಾಗೂ ಶುಭಮನ್‌ ಗಿಲ್ ಶತಕದ ಜೊತೆಯಾಟ ನೀಡಿದರು. ದಿಟ್ಟ ಹೋರಾಟದ ಮೂಲಕ ಇಬ್ಬರೂ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಆದರೆ ಧವನ್ 58 ರನ್ ಸಿಡಿಸಿ ಔಟಾದರು. 113 ರನ್‌ಗಳಿಗೆ ಟೀಂ ಇಂಡಿಯಾ ಮೊದಲ ವಿಕೆಟ್ ಕಳೆದುಕೊಂಡಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೇಯಸ್ ಅಯ್ಯರ್ ಜೊತೆ ಗಿಲ್ ಹೋರಾಟ ಮುಂದುವರಿಸಿದರು. ಇದೇ ವೇಳೆ ಸುರಿದ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು. ಸದ್ಯ ಮಳೆ ಸುರಿಯುತ್ತಿದ್ದು ಪಂದ್ಯ ಆರಂಭ ವಿಳಂಭವಾಗಲಿದೆ.