ಪಂಜಾಬ್(ಜೂ.14): ಬಿಸಿಸಿಐ ಹಿರಿಯ ಆಟಗಾರರನ್ನು, ತಂಡಕ್ಕೆ ಅಭೂತಪೂರ್ವ ಕೂಡುಗೆ ನೀಡಿದವರನ್ನು ಕಡೆಗಣಿಸಬಾರದು. ಇಂತಹ ಕ್ರಿಕೆಟಿಗರಿಗೆ ಉತ್ತಮ ವಿದಾಯ ಅಗತ್ಯ ಎಂದು ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಸಾಧನೆ ಮಾಡಿದೆ. ಮೈಲಿಗಲ್ಲು ಸ್ಥಾಪಿಸಿದ ಸಂತಸದಲ್ಲಿ ತವರಿಗೆ ಆಗಮಿಸಿದಾಗ ನಾನು ಸ್ಥಾನವೇ ಕಳೆದುಕೊಂಡಿದ್ದೆ ಎಂದು ಹರ್ಭಜನ್ ಸಿಂಗ್ ನೋವು ತೋಡಿಕೊಂಡಿದ್ದಾರೆ.

ಆಸ್ಟ್ರೇಲಿಯಾ ರಸ್ತೆಗಳಿಗೆ ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಹೆಸರು..!.

ವಿಂಡೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾಗೆ ಆಯ್ಕೆಯಾಗಲೇ ಇಲ್ಲ. ಬಳಿಕ ನನ್ನ ಉತ್ತಮ ಪ್ರದರ್ಶನ ನೀಡುವಲ್ಲಿ ಕೊಂಚ ಎಡವಿದೆ. ಆದರೆ ಬಿಸಿಸಿಐ ಯಾವ ಸೂಚನೆ ನೀಡದೆ, ಯಾವ ಮಾತೂ ಆಡದೆ ತಂಡದಿಂದ ಹೊರಹಾಕಿತ್ತು ಎಂದು ಹರ್ಭಜನ್ ಹೇಳಿದ್ದಾರೆ. 30 ವರ್ಷದ ಬಳಿಕ ಟೀಂ ಇಂಡಿಯಾಗಲ್ಲಿ ಸ್ಥಾನ ಕಂಡುಕೊಳ್ಳುವುದು ಕಷ್ಟ. ಹೀಗಾಗಿ ಒಪ್ಪಂದದಲ್ಲಿ ಇಲ್ಲದ ಕ್ರಿಕೆಟಿಗರು, ಟೀಂ ಇಂಡಿಯಾದಲ್ಲಿ ಸ್ಥಾನ ವಂಚಿತ ಕ್ರಿಕೆಟಿಗರಿಗೆ ಬಿಸಿಸಿಐ ವಿದೇಶಿ ಲೀಗ್ ಟೂರ್ನಿಗಳಲ್ಲಿ ಆಡುವ ಅನುಮತಿ ನೀಡಬೇಕು ಎಂದು ಹರ್ಭಜನ್ ಸಿಂಗ್ ಮನವಿ ಮಾಡಿದ್ದಾರೆ.

ಈ ವರ್ಷ ಖಾಲಿ ಮೈದಾನದಲ್ಲಾದರೂ ಐಪಿಎಲ್ ನಡೆಸಿಯೇ ಸಿದ್ಧ: ಗಂಗೂಲಿ.

ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿವಿಎಸ್ ಲಕ್ಷ್ಮಣ್ ಉತ್ತಮ ವಿದಾಯಕ್ಕೆ ಅರ್ಹರು. ಆದರೆ ಈ ದಿಗ್ಗಜ ಕ್ರಿಕೆಟಿಗರೂ ಸದ್ದಿಲ್ಲದೇ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. ಬಿಸಿಸಿಐ ಈ ಕುರಿತು ಗಮನಹರಿಸಬೇಕು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. 

39 ವರ್ಷದ ಹರ್ಭಜನ್ ಸಿಂಗ್ 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್ ಕಬಳಿಸಿದ್ದಾರೆ. 236 ಏಕದಿನ ಪಂದ್ಯದಿಂದ 269 ವಿಕೆಟ್ ಹಾಗೂ 28 ಟಿ20 ಪಂದ್ಯಗಳಿಂದ 25 ವಿಕೆಟ್ ಕಬಳಿಸಿದ್ದಾರೆ. 2016ರ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಕೊನೆಯದಾಗಿ ಟೀಂ ಇಂಡಿಯಾ ಪರ ಆಡಿದ್ದರು.

#NewsIn100Seconds ಈ ಕ್ಷಣದ ಪ್ರಮುಖ ಸುದ್ದಿಗಳು

"